
ಫ್ರೀಡಂ ಸುರಕ್ಷಾ ಯೋಜನೆ ಕೆನರಾ ಬ್ಯಾಂಕಿನ ಎಲ್ಲಾ ಸೇವಿಂಗ್ ಬ್ಯಾಂಕ್ ಖಾತೆವುಳ್ಳ ಗ್ರಾಹಕರಿಗೆ ಲಭ್ಯವಾಗಲಿದೆ. ನೈಜ ಹಾಗೂ ಅಪಘಾತದಿಂದ ಮರಣ ಹೊಂದಿದ ಪ್ರಕರಣಗಳು ಈ ಯೋಜನೆ ವ್ಯಾಪ್ತಿಗೆ ಒಳಪಡಲಿದೆ.
'ಕೆನರಾ ಎಚ್ ಎಸ್ ಬಿಸಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ' ಎಂಬ ಜಂಟಿ ಯೋಜನೆಯನ್ನು ಕೆನರಾ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕ ಎಕೆ ಗುಪ್ತಾ ಅವರು ಲೋಕಾರ್ಪಣೆ ಮಾಡಿದರು.
ಗ್ರಾಹಕರು ಯಾವುದೇ ವೈದ್ಯಕೀಯ ಪರೀಕ್ಷೆ ಇಲ್ಲದೆ ಉತ್ತಮ ದೇಹಸ್ವಾಸ್ಥ್ಯ ಹೊಂದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ ಈ ಯೋಜನೆಗೆ ಬಾಧ್ಯರಾಗಬಹುದಾಗಿದೆ. ನೈಜ ಹಾಗೂ ಅನೈಜ ಸಾವಿನ ಪ್ರಕರಣಗಳನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಸದ್ಯಕ್ಕೆ 1 ಲಕ್ಷದ ತನಕ ಗ್ರಾಹಕರಿಗೆ ಪರಿಹಾರ ಧನ ತ್ವರಿತವಾಗಿ ದೊರೆಯಲಿದೆ. ನಂತರ ಮೊತ್ತವನ್ನು ಹೆಚ್ಚಿಸುವ ಚಿಂತನೆ ಇದೆ ಎಂದು ಎಕೆ ಗುಪ್ತಾ ಹೇಳಿದ್ದಾರೆ.
ವಾರ್ಷಿಕ ದರಗಳು(ಸೇವಾ ತೆರಿಗೆ ಸೇರಿಸಿ) ರು.177, ರು.366 ಹಾಗೂ ರು.988 ಹಾಗೂ ವಯೋಮಿತಿ ಕ್ರಮವಾಗಿ 18-35, 36-50 ಹಾಗೂ 51-59 ವರ್ಷ. ಎಂದು ಕೆನರಾ ಬ್ಯಾಂಕ್ ಪ್ರಕಟಿಸಿದೆ.
ವಿನೂತನ ಸಲಹೆಗಾರ್ತಿ: ಕೆನರಾ ಬ್ಯಾಂಕ್ ವಿಮೆ ಆಯ್ಕೆ ಮಾಡುವ ಮೊದಲು ಗ್ರಾಹಕರಿಗೆ ತಲೆದೋರಬಹುದಾದ ಪ್ರಶ್ನೆಗಳನ್ನು ಪರಿಹರಿಸಲು ವಿನೂತನವಾಗಿ ಪ್ರಶ್ನೋತ್ತರ ಮಾದರಿಯಲ್ಲಿ ಸಿಮ್ಯುಲೇಟರ್ ಬಳಸಿ ಗ್ರಾಹಕರ ಭವಿಷ್ಯದ ಫೈನಾನ್ಸ್ ಯೋಜನೆ ಸಮಸ್ಯೆಯನ್ನು ಬಗೆಹರಿಸುವ ವಿಧಾನ ಕೆನರಾ ಬ್ಯಾಂಕಿನ ವೆಬ್ ತಾಣದಲ್ಲಿ ಲಭ್ಯವಿದೆ.
ಕೆನರಾಎಚ್ ಎಸ್ ಬಿಸಿ ಲೈಫ್ ವೆಬ್ ಸೈಟ್ ನಲ್ಲಿ -ಲೈಫ್ ಇನ್ಶೂರೆನ್ಸ್ ಸಿಮ್ಯುಲೇಟರ್ ಕ್ಲಿಕ್ ಮಾಡಿದರೆ ಗ್ರಾಹಕರಿಗೆ ವಿವಿಧ ಭಾಷೆಯಲ್ಲಿ ಆಡಿಯೋ ಸಿಮ್ಯುಲೇಟರ್ ಮಾಹಿತಿ ನೀಡುತ್ತದೆ. ಗ್ರಾಹಕರ ಹಣಕಾಸು ಗುರಿಗಳು, ಅವಶ್ಯಕತೆಗೆ ತಕ್ಕಂತೆ ವಿಮೆ ಹಾಗೂ ಬಂಡವಾಳ ಹೂಡಿಕೆ ಬಗ್ಗೆ ಲೆಕ್ಕಾಚಾರ ಹಾಕಿ ನಿಮ್ಮ ಮುಂದೆ ನಿಮ್ಮದೆ ಖಾಸಗಿ ಸಲಹೆಗಾರ್ತಿಯಾಗಿ ಈ ಸಿಮ್ಯುಲೇಟರ್ ವರ್ತಿಸುತ್ತದೆ. ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ


Click it and Unblock the Notifications