ಎಚ್ಚರ! ಭಾರ್ತಿ ಏರ್ ಟೇಲ್ ಷೇರು ನೆಲಕಚ್ಚಿದೆ

ಎಚ್ಚರ! ಭಾರ್ತಿ ಏರ್ ಟೇಲ್ ಷೇರು ನೆಲಕಚ್ಚಿದೆ
Bharti Airtel: Quotes, News
BSE 1829.70BSE Quote21.55 (-1.18%)
NSE 1829.00NSE Quote23.2 (-1.27%)
ಮುಂಬೈ, ಆ.22: ಭಾರ್ತಿ ಏರ್ ಟೆಲ್ ಸಂಸ್ಥೆಗೆ ಯಾಕೋ ಸಮಯ ಚೆನ್ನಾಗಿಲ್ಲ. ಕ್ರೆಡಿಟ್ ಸುಸ್ಸೈ ಸಂಸ್ಥೆ ಕಡಿಮೆ ರೇಟಿಂಗ್ ನೀಡಿ ಷೇರುಗಳ ಮೌಲ್ಯ ಕುಸಿತಕ್ಕೆ ನಾಂದಿ ಹಾಡಿದ ಬೆನ್ನಲ್ಲೇ ಬುಧವಾರ(ಆ.22) ಭಾರ್ತಿ ಸಂಸ್ಥೆ ಷೇರುಗಳು ನೆಲಕಚ್ಚಿದೆ. ರಿಲೇಯನ್ಸ್ ಇನ್ಫೋಟೆಲ್ ಸಂಸ್ಥೆ ನಿಸ್ತಂತು ಧ್ವನಿ ಸೇವಾ ಕ್ಷೇತ್ರಕ್ಕೆ (wireless voice market) ಕಾಲಿರಿಸುವ ಸುದ್ದಿ ಬಂದ ಬೆನ್ನಲ್ಲೇ ಭಾರ್ತಿ ಪರಿಸ್ಥಿತಿ ಹದಗೆಟ್ಟಿದೆ.

ಕಳೆದ ಐದು ವರ್ಷದಲ್ಲೇ ಈ ಪರಿ ಕರಡಿ ಹೊಡೆತವನ್ನು (ಷೇರು ಕುಸಿತ) ಭಾರ್ತಿ ಏರ್ ಟೆಲ್ ಕಂಡಿರಲಿಲ್ಲ. ಆ.8 ನಿಂದ ಇಲ್ಲಿವರೆಗೆ ಶೇ 15 ರಷ್ಟು ಪ್ರಮಾಣದಲ್ಲಿ ಷೇರುಗಳು ಇಳಿಮುಖವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಮಸಿ ಬಳಿದುಕೊಂಡಿದ್ದ ಭಾರ್ತಿ ಮತ್ತೆ ಚೇತರಿಸಲು ಸಾಕಷ್ಟು ಶ್ರಮ ಪಡುತ್ತಿದೆ.

ಬಿಎಸ್ ಇನಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ 250 ರು. ದರದಂತೆ ಶೇ 3.15 ರಷ್ಟು ಕುಸಿತ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 250 ರು ದರದಂತೆ ಶೇ 3 ರಷ್ಟು ಇಳಿಮುಖವಾಗಿತ್ತು.

ಆದರೆ, ಈಗ [ಸಮಯ 3.25] ಬಿಎಸ್ ಇನಲ್ಲಿ 248.50 ರು ದರದಂತೇ ಶೇ 3.89ರಷ್ಟು ಕುಸಿತ ಕಂಡಿದ್ದು 10 ರು ಕಳೆದುಕೊಂಡಿದೆ. ಎನ್ ಎಸ್ ಇನಲ್ಲಿ 248.60 ರು ದರದಂತೆ ಶೇ 3.83 ರಷ್ಟು ಕುಸಿತ ಕಂಡಿದ್ದು 9.85 ರು ಕಳೆದುಕೊಂಡಿದೆ.

ಭಾರ್ತಿ ಏರ್ ಟೆಲ್ ಷೇರುಗಳ ಕುಸಿತಕ್ಕೆ ಭಾರತೀಯ ವೈರ್ ಲೆಸ್ ಮಾರುಕಟ್ಟೆಗೆ ರಿಲಯನ್ಸ್ ಇಂಡಸ್ಟ್ರೀಸ್ ಪ್ರವೇಶಕ್ಕೆ ಕಾರಣ ಎನ್ನಲಾಗಿದೆ. ಕ್ರೆಡಿಟ್ ಸುಸ್ಸೈ ಕೂಡಾ ರಿಲೆಯನ್ಸ್ ಇನ್ಫೋಟೆಲ್ ಗೆ ಉತ್ತಮ ಶ್ರೇಯಾಂಕ ನೀಡಿದೆ. ಷೇರುಗಳ ಕಟ್ ಆಫ್ ಮೌಲ್ಯವನ್ನು 220 ರು ಗೆ ನಿಲ್ಲಿಸಿ ಷೇರುಗಳ ಮೌಲ್ಯ ಏರಿಳಿಕೆಯ ಬಗ್ಗೆ ಅಂಕ ನೀಡಿದ್ದ ಕ್ರೆಡಿಟ್ ಸುಸ್ಸೈ ಸಂಸ್ಥೆ ಭಾರ್ತಿ ಸಂಸ್ಥೆಗೆ ನೀಡಿದ ಅಂಕ ಅದರ ಷೇರು ಮೌಲ್ಯ ಕುಸಿತಕ್ಕೆ ನಾಂದಿ ಹಾಡಿದೆ.

ಇತ್ತೀಚೆಗೆ ಭಾರ್ತಿ ಸಂಸ್ಥೆ ಮಾರುಕಟ್ಟೆ ಮೌಲ್ಯ (m-cap: what is m-cap?) 1,08,305 ಕೋಟಿ ರು.ಗೆ ಕುಸಿದಿತ್ತು. ಹೀಗಾಗಿ ಅತಿ ಹೆಚ್ಚು ಮೌಲ್ಯಯುತ ಸಂಸ್ಥೆಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಇಳಿದಿದೆ.1,12,006 ಕೋಟಿ ರು m-cap ಮೌಲ್ಯದೊಂದಿಗೆ ಐಸಿಐಸಿಐ 10ನೇ ಸ್ಥಾನಕ್ಕೇರಿತ್ತು.

'ಭಾರ್ತಿ ಸಂಸ್ಥೆಯ ತ್ರೈಮಾಸಿಕದಲ್ಲಿ ಕುಸಿತ ಹಾಗೂ ದೇಶಿ ಮಾರುಕಟ್ಟೆ ಮತ್ತು ಅಫ್ರಿಕಾದ ಘಟಕದಲ್ಲಿ ನಿರೀಕ್ಷಿತ ಲಾಭ ಬರದಿರುವುದು ಸಂಸ್ಥೆಯ m-cap ಕುಸಿತಕ್ಕೆ ಕಾರಣವಾಗಿದೆ' ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟಿಸ್ ನ ಉಪಾಧ್ಯಕ್ಷ ರಿಕೇಶ್ ಪಾರೀಖ್ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+