
ಬ್ಯಾಂಕ್ ವ್ಯವಹಾರ ಸರಳ, ಸುಂದರಗೊಳಿಸಲು ಈ ರೀತಿ ವಿಶಿಷ್ಟ ಸೌಲಭ್ಯಗಳನ್ನು ಒದಗಿಸಲಾಗಿದೆ. ಉನ್ನತ ತಂತ್ರಜ್ಞಾನ ಬಳಕೆ ಮೂಲಕ "Khayaal Aapka" ಎಂಬ ನಿಯಮಕ್ಕೆ ನಮ್ಮ ಸಂಸ್ಥೆ ಬದ್ಧವಾಗಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬ್ಯಾಂಕ್ ಕಾರ್ಯನಿರ್ವಹಿಸಲಿದೆ ಎಂದು ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚರ್ ಹೇಳಿದ್ದಾರೆ.
ಈ ಹೊಸ ಸೌಲಭ್ಯದಲ್ಲಿ 24 X 7 ಎಲೆಕ್ಟ್ರಾನಿಕ್ ಬ್ರಾಂಚ್ ಅಲ್ಲದೆ, ಟ್ಯಾಬ್ ಬ್ಯಾಂಕಿಂಗ್, ಬ್ಯಾಂಗ್ ಆನ್ ದ ಮೂವ್ ಹಾಗೂ ಹೆಲ್ಪ್ ಆನ್ ಟ್ಯಾಬ್ ಮುಂತಾದ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಾಗಲಿದೆ.
ಗ್ರಾಹಕ ಸಂವೇದಿ ಕಿಯೋಸ್ಕ್ ಗಳನ್ನು ಸ್ಥಾಪಿಸಲಾಗಿದ್ದು, ಹಣ ಜಮೆ, ಸಾಲ ಪಡೆಯುವಿಕೆ, 24 ಗಂಟೆ ವಿಡಿಯೋ ಕಾನ್ಫರೆನ್ಸ್ ಹಾಗೂ ಕಾಲ್ ಸೆಂಟರ್ ಜೊತೆ ಸಂಪರ್ಕ ಇಟ್ಟಿಕೊಳ್ಳಬಹುದಾಗಿದೆ. ಮೆಟ್ರೋ ಹಾಗೂ ಮೆಟ್ರೋಯೇತರ II ದರ್ಜೆ ನಗರಗಳಲ್ಲಿ ಈ ಕೇಂದ್ರಗಳು ತಲೆ ಎತ್ತಲಿದೆ. ಎಟಿಎಂಗೂ ಮೀರಿದ ಸೌಲಭ್ಯಗಳನ್ನು ನೀಡುವುದು ನಮ್ಮ ಉದ್ದೇಶ ಎಂದು ಸಿಇಒ ಚಂದಾ ಕೊಚ್ಚರ್ ಹೇಳಿದ್ದಾರೆ.
24 X 7 ಎಲೆಕ್ಟ್ರಾನಿಕ್ ಬ್ಯಾಂಕ್ : ಬ್ಯಾಂಕ್ ವಹಿವಾಟಿನ ಎಲ್ಲಾ ಪ್ರಕ್ರಿಯೆಗಳು ಒಂದೇ ಕಿಯೋಸ್ಕ್ ನಲ್ಲಿ ಲಭ್ಯವಾಗಲಿದೆ. ಗ್ರಾಹಕರು ಕಾಲಮಿತಿ ಇಲ್ಲದೆ ವ್ಯವಹರಿಸಬಹುದಾಗಿದ್ದು, ಆಟೋಮೆಟೀಕ್ ಸಾಧನಗಳು ಇದಕ್ಕೆ ಪೂರಕವಾಗಿ ನಿಲ್ಲಲಿದೆ. ಚೆಕ್ ಜಮೆ ಮೆಷಿನ್, ಗ್ರಾಹಕ ಸಂವೇದಿ ಕಿಯೋಸ್ಕ್, ಇಂಟರ್ ನೆಟ್ ಬ್ಯಾಂಕಿಂಗ್ ಸೇವೆ, ಡೆಬಿಟ್ ಕಾರ್ಡ್ ಬಳಸಿ ತ್ವರಿತವಾಗಿ ಸಾಲ ಸೇವಾ ಸೌಲಭ್ಯ ಪಡೆಯಬಹುದು. 24 ಗಂಟೆ ವಿಡಿಯೋ ಕಾನ್ಫರೆನ್ಸ್ ಹಾಗೂ ಸಹಾಯವಾಣಿಗೆ ಕರೆ ಮಾಡಬಹುದು. ಈ ಸೌಲಭ್ಯ ಎಲ್ಲಾ 18 ಪ್ರದೇಶದ 25 ಬ್ರಾಂಚ್ ಗಳಲ್ಲಿ ಲಭ್ಯವಾಗಲಿದೆ.
ಟ್ಯಾಬ್ ಬ್ಯಾಂಕಿಂಗ್: ಮನೆ ಅಥವಾ ಕಚೇರಿಯಲ್ಲಿ ಕುಳಿತು ಮೊಬೈಲ್ ಸಂಪರ್ಕವುಳ್ಳ ಟ್ಯಾಬ್ಲೆಟ್ ಬಳಸಿ ತಮ್ಮ ಬ್ಯಾಂಕ್ ಖಾತೆಯನ್ನು ನಿರ್ವಹಿಸುವ ನೂತನ ವ್ಯವಸ್ಥೆಯನ್ನು ಐಸಿಐಸಿಐ ಕಲ್ಪಿಸಿದೆ. ಇದರಿಂದ ಗ್ರಾಹಕರು ಪ್ರತಿ ಬಾರಿ ಬ್ರಾಂಚ್ ಗಳನ್ನು ಹುಡುಕಿಕೊಂಡು ಅಲೆಯುವುದು ತಪ್ಪುತ್ತದೆ.
ಬ್ಯಾಂಕ್ ಆನ್ ದ ಮೂವ್: ಐಸಿಐಸಿಐ ಬ್ಯಾಂಕ್ ನ ಬ್ರಾಂಚ್ ಹಾಗೂ ಎಟಿಎಂ ಇಲ್ಲದ ಪ್ರದೇಶಗಳನ್ನು ಗುರುತಿಸಿ ಅಂಥ ಪ್ರದೇಶದಲ್ಲಿ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲು ಐಸಿಐಸಿಐ ಮುಂದಾಗಿದೆ.
ಇ ಲಾಕರ್ : ಐಸಿಐಸಿಐ ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ವೇದಿಕೆ ಬಳಸಿ ವರ್ಚ್ಯುಯಲ್ ಆನ್ ಲೈನ್ ಲಾಕರ್ ಸೌಲಭ್ಯವನ್ನು ಆಯ್ದ ಗ್ರಾಹಕರಿಗೆ ನೀಡಲಾಗುತ್ತಿದೆ. ಇದರಲ್ಲಿ ಮಹತ್ವದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಡಬಹುದೌ. ಕಾನೂನು, ವಿಮೆ ಯೋಜನೆ, ಡಿಗ್ರಿ ಪ್ರಮಾಣಪತ್ರ, ಬ್ಯಾಂಕ್ ಖಾತೆ ವಿವರ ಮುಂತಾದ ವಿವರಗಳನ್ನು ಶೇಖರಿಸಿಡಬಹುದು.
ಹೆಲ್ಪ್ ಆನ್ ಟ್ಯಾಬ್ : ಪ್ರತಿ ಬ್ರಾಂಚ್ ನ ಗ್ರಾಹಕರ ವ್ಯವಹಾರಗಳ ಬಗ್ಗೆ ಮುಂಚಿತವಾಗಿ ಮಾಹಿತಿ ಹಾಗೂ ಸಲಹೆ ಒದಗಿಸುವ ಹೆಲ್ಪ್ ಆನ್ ಟ್ಯಾಬ್ ಮೂಲಕ ಬ್ರಾಂಚ್ ಸಿಬ್ಬಂದಿಗಳು ಗ್ರಾಹಕರೊಡನೆ ನೇರ ಸಂಪರ್ಕಹೊಂದಿರುತ್ತಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications