
'ಭಾನುವಾರ ಬ್ಯಾಂಕ್ ತೆರೆಯುವುದರಿಂದ ಹೆಚ್ಚಿನ ಸಮಯ ದೊರೆಯುತ್ತದೆ ಮತ್ತು ವಹಿವಾಟಿನಲ್ಲೂ ವೃದ್ಧಿಯಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐ, ತಾಂತ್ರಿಕ ತೊಂದರೆಗಳಿಂದ ಒಂದು ದಿನ ವಹಿವಾಟು ನಿಂತು ಹೋದಾಗ ಕಳೆದ ವರ್ಷ ಅಕ್ಟೋಬರ್ 2 ರಂದು ಕಾರ್ಯ ನಿರ್ವಹಿಸಿ ಅಚ್ಚರಿ ಮೂಡಿಸಿತ್ತು.
ಈ ದಿನದ ವಹಿವಾಟಿನಿಂದ ಬ್ಯಾಂಕ್ ಗ್ರಾಹಕರು ಸಂತುಷ್ಟರಾಗಿದ್ದರು. ಈಗ ಅದೇ ನಿಯಮವನ್ನಾಗಿ ಮಾಡಲು ಆಲೋಚಿಸಿದೆ. ಅನೇಕ ಖಾಸಗಿ ಬ್ಯಾಂಕುಗಳು ತಮ್ಮ
ಕೆಲವು ಶಾಖೆಗಳನ್ನು ಭಾನುವಾರವೂ ತೆರೆದಿದ್ದು ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
ಮುಖ್ಯವಾಗಿ ಭಾನುವಾರ ಬ್ಯಾಂಕ್ ತೆರೆಯುವುದರಿಂದ ಹೊಸ ಪೀಳಿಗೆಯ ದುಡಿಯುವ ಯುವಕರಿಗೆ ಬ್ಯಾಂಕಿಂಗ್ ಸೇವೆ ಒದಗಿಸಲು ಅನುಕೂಲವಾಗುತ್ತದೆ ಮತ್ತು ದಂಪತಿಯರಿಬ್ಬರೂ ನೌಕರಿಗೆ ಹೋಗುವವರಿಗೆ ಅನುಕೂಲವಾಗುತ್ತದೆ ಎಂದು ಎಸ್ ಬಿಐ ಮುಖ್ಯಸ್ಥ ಪ್ರತೀಪ್ ಚೌಧುರಿ ಹೇಳಿದ್ದಾರೆ.
ದೇಶಾದ್ಯಂತ 14 ಸಾವಿರ ಶಾಖೆಗಳಿರುವ ಎಸ್ ಬಿಐ ತನ್ನ ಖಾತೆಯ ಠೇವಣಿಯಿಂದಲೇ ಹೆಚ್ಚು ಲಾಭ ಗಳಿಸುತ್ತದೆ. ಕಳೆದ ದಶಕದಲ್ಲಿ 'ಪರಿವರ್ತನ' ಕಾರ್ಯಕ್ರಮದ ಮೂಲಕ ಎಸ್ ಬಿಐ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಎಸ್ ಬಿಐ ಕ್ರಮ ಅಗತ್ಯವಿದೆಯೇ?: ಖಾಸಗಿ ಬ್ಯಾಂಕ್ ಮ್ಯಾನೇಜ್ಮೆಂಟ್ ಗಳು ತಮ್ಮ ಬ್ಯಾಂಕ್ ಗಳ ವಿಸ್ತರಣೆ ಜೊತೆಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬೆಳೆಯುತ್ತಿದೆ. ಸಾಲ ಸೌಲಭ್ಯಗಳಲ್ಲಿ ಬಡ್ಡಿದರ ಇಳಿಕೆ, EMI ಸೌಲಭ್ಯ ಕಾಲ ಕಾಲಕ್ಕೆ ಬದಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಎಸ್ ಬಿಐ ಕೂಡಾ ಇತ್ತೀಚೆಗೆ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗೃಹ ಮತ್ತು ವಾಹನ ಸಾಲಗಳ ಬಡ್ಡಿದರಗಳನ್ನು ಶೇ 0.5 ರಷ್ಟು ಕಡಿತಗೊಳಿಸಿತ್ತು. ಆಗಸ್ಟ್ 7 ರಿಂದ ಇದು ಜಾರಿಗೆ ಬಂದಿದೆ. ಬಡ್ಡಿದರ ಇಳಿಕೆ ಹೊಸ ಸಾಲಗಾರರಿಗೆ ಅನುಕೂಲಕಾರವಾಗಿದ್ದರೂ, ಈಗಾಗಲೇ ಖಾತೆ ಹೊಂದಿರುವ ಗ್ರಾಹಕರಿಗೆ ಕೊಂಚ ಗೊಂದಲ ಮೂಡಿಸಿತ್ತು.
ಇದಕ್ಕೂ ಮುನ್ನ ಭಾರತೀಯ ಸ್ಟೇಟ್‌ಬ್ಯಾಂಕ್ ವಿಶೇಷವಾಗಿ ಕಿರು ಹಾಗೂ ಮಧ್ಯಮ ಉದ್ಯಮಗಳಿಗಾಗಿ ನೀಡುವ ಸಾಲ ದ ಬಡ್ಡಿದರವನ್ನು ಶೇ.05-ಶೇ.3.5ರಷ್ಟು ಕಡಿತಗೊಳಿಸುವ ಪ್ರಕಟಣೆ ನೀಡಿತ್ತು. ಗ್ರಾಹಕರ ಮೇಲಿನ ಹಿಡಿತವನ್ನು ಮುಂದುವರೆಸಿತ್ತು.


Click it and Unblock the Notifications