ನವದೆಹಲಿ, ಸೆ.3: ಮಾರುಕಟ್ಟೆ ನಿಯಂತ್ರಕ ಸೆಬಿ ಸುಮಾರು 13 ಭಾಷೆಗಳಲ್ಲಿ ಹೂಡಿಕೆದಾರರ ವೆಬ್ ತಾಣಗಳನ್ನು ಹೊರ ತರುತ್ತಿದೆ. ಕನ್ನಡ ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ಹೊರ ಬರುತ್ತಿರುವ ಈ ವೆಬ್ ತಾಣ ಹೂಡಿಕೆದಾರರಿಗೆ ಅಗತ್ಯ ಮಾಹಿತಿ,ಸಲಹೆ ಒದಗಿಸಲಿದೆ.
ಇಂಗ್ಲೀಷ್ ಅಲ್ಲದೆ Securities and Exchange Board of India (SEBI) ನ ಮಾಹಿತಿ ಈಗ ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗಲಿದೆ. ಅಸ್ಸಾಮಿ, ಬೆಂಗಾಳಿ, ಗುಜರಾತಿ, ಕನ್ನಡ, ಕಾಶ್ಮೀರಿ, ಮಲಯಾಳಂ, ಮರಾಠು, ಒರಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಭಾಷೆಯಲ್ಲಿ ಮಾಹಿತಿ ಸಿಗಲಿದೆ.
ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್, ಬ್ರೋಕರೇಜ್ ಸಂಸ್ಥೆಗಳು, ಮರ್ಚೆಂಟ್ ಬ್ಯಾಂಕರ್ ಗಳು, ವಿದೇಶಿ ಸಂಸ್ಥಾನಿಕ ಹೂಡಿಕೆದಾರರಲ್ಲದೆ ಇನ್ನೂ ಕೆಲವು ಹೂಡಿಕೆ ಸಂಸ್ಥೆಗಳ ಮೇಲೆ ಸೆಬಿ ನಿಯಂತ್ರಣ ಹೊಂದಿದೆ.
ಈ ವೆಬ್ ತಾಣದಲ್ಲಿ ಹೂಡಿಕೆದಾರರಿಗೆ ಲೇಖನಗಳಲ್ಲದೆ, ಆಡಿಯೋ ವಿಡಿಯೋ ಸಹಾಯ ಕೂಡಾ ಲಭ್ಯವಿರುತ್ತದೆ. ಸೆಬಿ ಸ್ಥಳೀಯ ಕೇಂದ್ರಗಳಲ್ಲಿ ವೆಬ್ ತಾಣದ ತರ್ಜುಮೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ವಿವಿಧ ಭಾಷೆಗಳಲ್ಲಿ ಮಾಹಿತಿ ನೀಡುವ ಮೂಲಕ ಗ್ರಾಹಕ ಸ್ನೇಹಿಯಾಗಲಿದೆ.
Share This Article
English summary
SEBI plans investor website in 13 Indian languages | 13 ಭಾಷೆಗಳಲ್ಲಿ ಸೆಬಿ ಹೂಡಿಕೆದಾರರ ವೆಬ್ ತಾಣ |
Market regulator wants its investor website to be translated into 13 Indian languages to spread awareness among investors. Now Information will be translated from English into Hindi, Assamese, Bengali, Gujarati, Kannada, Kashmiri, Malayalam, Marathi, Oriya, Punjabi, Tamil, Telugu and Urdu.
Story first published: Monday, September 3, 2012, 18:04 [IST]
Other articles published on
Sep 3, 2012