ಕರ್ನಾಟಕದಿಂದ ಒಂದು ಕಾಲು ಹೊರಗಿಟ್ಟ HSBC

ಕರ್ನಾಟಕದಿಂದ ಒಂದು ಕಾಲು ಹೊರಗಿಟ್ಟ HSBC
ಬೆಂಗಳೂರು, ಸೆ.4: ಜಾಗತಿಕ ಮಟ್ಟದಲ್ಲಿ ಪ್ರಮುಖ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಎಚ್ ಎಸ್ ಬಿಸಿ ಸಂಸ್ಥೆ ಖಾಸಗಿ ವಲಯದ ಕರ್ನಾಟಕ ಬ್ಯಾಂಕ್ ನಲ್ಲಿರುವ ತನ್ನ ಷೇರುಗಳನ್ನು ಮಾರಾಟ ಮಾಡುವ ಸೂಚನೆ ನೀಡಿದೆ.

ಏಕ್ಸಿಸ್ ಬ್ಯಾಂಕ್, ಯಸ್ ಬ್ಯಾಂಕ್ ಹಾಗೂ ಫೆಡರಲ್ ಬ್ಯಾಂಕ್ ನಲ್ಲಿದ್ದ ತನ್ನ ಪಾಲಿನ ಷೇರುಗಳನ್ನು ಮಾರಾಟ ಮಾಡಿದ್ದ ಎಚ್ ಎಸ್ ಬಿಸಿ ಈಗ ಕರ್ನಾಟಕ ಬ್ಯಾಂಕಿನಲ್ಲಿರುವ ಶೇ 4.46 ರಷ್ಟು ಪಾಲು ಅಂದರೆ 83.99 ಲಕ್ಷ ಷೇರುಗಳ ಮಾರಾಟಕ್ಕೆ ಮುಂದಾಗಿದೆ.

ಸದ್ಯದ ಮಾರುಕಟ್ಟೆ ಮೌಲ್ಯದ ಪ್ರಕಾರ ಈ ಷೇರುಗಳ ಬೆಲೆ ಸುಮಾರು 70 ಕೋಟಿ ರು ಮೀರುತ್ತದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಎಚ್ ಎಸ್ ಬಿಸಿ ಸಂಸ್ಥೆ ತನ್ನ ಲಾಭದಾಯಕವಲ್ಲದ ಪಾಲುದಾರರನ್ನು ಕಳಚಿಕೊಳ್ಳುತ್ತಿದೆ.

ಮೂರು ಕಂಪನಿಗಳ ಷೇರುಗಳನ್ನು ಬಿಕರಿ ಮಾಡಿದಂತೆ ಮುಕ್ತ ಮಾರುಕಟ್ಟೆಯಲ್ಲೆ ಕರ್ನಾಟಕ ಬ್ಯಾಂಕಿನ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಹೆಚ್ಚಿದೆ. ಯಸ್ ಬ್ಯಾಂಕ್ ಪಾಲಿನಿಂದ ಸುಮಾರು 2,800 ಕೋಟಿ ರು ಗಳಿಸಿತ್ತು.

ಕಳೆದ ಜೂನ್ ನಲ್ಲಿ ಏಕ್ಸಿಸ್ ಬ್ಯಾಂಕ್ ಹಾಗೂ ಯಸ್ ಬ್ಯಾಂಕ್ ಷೇರುಗಳನ್ನು ಹಾಗೂ ಫೆಡರಲ್ ಬ್ಯಾಂಕಿನ ಷೇರುಗಳನ್ನು ಕಳೆದ ಆಗಸ್ಟ್ ನಲ್ಲಿ ಎಚ್ ಎಸ್ ಬಿಸಿ ಮಾರಾಟ ಮಾಡಿತ್ತು.

ಕೇರಳ ಮೂಲದ ಫೆಡರಲ್ ಬ್ಯಾಂಕ್ ನಲ್ಲಿದ್ದ ಶೇ 5 ರಷ್ಟು ಪಾಲನ್ನು ಮಾರಾಟ ಮಾಡಿ ಸುಮಾರು 341 ಕೋಟಿ ರು ಗಳಿಸಿತ್ತು.

ಏಕ್ಸಿಸ್ ಬ್ಯಾಂಕ್ ನ ಶೇ 4.75 ರಷ್ಟು ಪಾಲನ್ನು ಮಾರಾಟ ಮಾಡಿ ಸುಮಾರು 1,880 ಕೋಟಿ ರು ಹಾಗೂ ಯಸ್ ಬ್ಯಾಂಕಿನಲ್ಲಿದ್ದ ಶೇ 4.76 ರಷ್ಟು ಪಾಲನ್ನು ವಿಕ್ರಯಿಸಿ 545 ಕೋಟಿ ರು ಗಳಿಸಿತ್ತು.

ಸುಮಾರು 80 ದೇಶಗಳಲ್ಲಿ 7,20೦ ಕಚೇರಿಗಳನ್ನು ಹೊಂದಿದ್ದು, ಅಮೆರಿಕದ HBUS 470 ಬ್ರ್ಯಾಂಚ್ ಗಳ ಮೂಲಕ 4 ಮಿಲಿಯನ್ ಗ್ರಾಹಕರನ್ನು ಹೊಂದಿದೆ. HBUS ನಂಬಿಕೊಂಡು 1,200 ಸಣ್ಣ ಪುಟ್ಟ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುತ್ತಿದೆ.

ಮನಿಲಾಂಡ್ರಿಗ್ ಪ್ರಕರಣ: ಅಲ್ ಖೈದಾ ಉಗ್ರ ಸಂಘಟನೆಯ ಜಾಲದ ವ್ಯಕ್ತಿ ಸ್ಥಾಪಿತ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕ್(Al Rajhi Bank) ಜೊತೆ ಎಚ್ ಎಸ್ ಬಿಸಿ ವ್ಯವಹಾರ ಇಟ್ಟುಕೊಂಡಿದೆ. ಅಕ್ರಮ ಹಣ ರವಾನೆ, ಅಕ್ರಮ ಔಷಧಿ ಸಾಗಾಟಕ್ಕೆ ಎಚ್ಎಸ್ ಬಿಸಿ ಬ್ಯಾಂಕ್ ಬಳಕೆಯಾಗಿದೆ. ಉಗ್ರರ ಮನಿ ಲಾಂಡ್ರಿಂಗ್ ಚಟುವಟಿಕೆ ಹತ್ತಿಕ್ಕುವಲ್ಲಿ ಪ್ರತಿಷ್ಠಿತ ಬ್ಯಾಂಕ್ ಎಚ್ಎಸ್ ಬಿಸಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪ ಕೇಳಿ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+