
ಮಾರುಕಟ್ಟೆ ಆರಂಭದಿಂದಲೂ ಶೇ 3 ರಷ್ಟು ಏರಿಕೆ ಕಂಡಿರುವ ಇನ್ಫೋಸಿಸ್ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್ ಜೇಂಜ್(BSE) ನಲ್ಲಿ 2350 ರು ನಂತೆ ವಹಿವಾಟು ಆರಂಭಿಸಿತು.
ಬಿಎಸ್ ಇನಲ್ಲಿ ಮಧ್ಯಾಹ್ನ 1.25 ನಿಮಿಷಕ್ಕೆ ಸರಿಯಾಗಿ 2418.55 ರು. ನಂತೆ ಶೇ 3.37 ಏರಿಕ ಕಂಡಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ 2419.90 ರು.ನಂತೆ ಶೇ 3.40 ರಷ್ಟು ಪ್ರಗತಿ ಸಾಧಿಸಿದೆ.
ಕಳೆದ ಹಲವು ವರ್ಷಗಳಿಂದ ಯಾವುದೇ ಭಾರಿ ಗಾತ್ರ ಡೀಲ್ ಮಾಡದ ಇನ್ಫೋಸಿಸ್ ಸಂಸ್ಥೆ ಈಗ ವಿಲೀನ, ಖರೀದಿ ಪ್ರಕ್ರಿಯೆಗೆ ಮುಂದಾಗಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.
ಸುಮಾರು 20,000 ಕೋಟಿ ಆಸ್ತಿ ಸಂಗ್ರಹಿಸಿರುವ ಇನ್ಫೋಸಿಸ್ ಸಂಸ್ಥೆ ತನ್ನ ಬಳಿ ಇರುವ ನಗದು ಮೊತ್ತವನ್ನು ಬಳಸಿ ಖರೀದಿಗೆ ಮುಂದಾಗುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಂಡಳಿ ಗೊಂದಲ, ನೇಮಕಾತಿ ಕಡಿತ, ತ್ರೈಮಾಸಿಕಗಳಲ್ಲಿ ಕುಸಿತ ಮುಂತಾದ ಹಿನ್ನೆಡೆಗಳಿಂದ ಕಂಗೆಟ್ಟಿರುವ ಇನ್ಫೋಸಿಸ್ ಸಂಸ್ಥೆಗೆ ಈಗ ಇನ್ನೊಂದು ಕಂಪನಿ ಖರೀದಿ ಅನಿವಾರ್ಯವಾಗಿದೆ. ಎದುರಾಳಿ, ಟಿಸಿಎಸ್ ಹಾಗೂ ವಿಪ್ರೋ ಷೇರುಗಳು 52 ವಾರಗಳಲ್ಲೇ ಅಧಿಕ ಎನ್ನುವ ಗುರಿ ಮುಟ್ಟಿ ಮುನ್ನುಗ್ಗುತ್ತಿರುವಾಗ ಇನ್ಫೋಸಿಸ್ ನಲ್ಲಿ ಭಾರಿ ಬದಲಾವಣೆ ನಿರೀಕ್ಷಿತವಾಗಿದೆ.


Click it and Unblock the Notifications