ಬೆಲೆ ಏರಿಕೆ ಇಲ್ಲ: ಇಂಧನ ಷೇರುಗಳು ಏರುಪೇರು

ಬೆಲೆ ಏರಿಕೆ ಇಲ್ಲ: ಇಂಧನ ಷೇರುಗಳು ಏರುಪೇರು
ಮುಂಬೈ, ಸೆ.7; ಕೇಂದ್ರ ಇಂಧನ ಸಚಿವ ಜೈಪಾಲ್ ರೆಡ್ಡಿ ಅವರು ಪೆಟ್ರೋಲಿಯಂ ದರ ಸದ್ಯಕ್ಕೆ ಏರಿಕೆ ಇಲ್ಲ ಎಂದು ಸುದ್ದಿ ನೀಡುತ್ತಿದ್ದಂತೆ ಇಂಧನ ಮಾರುಕಟ್ಟೆ ಕಂಪನಿ(OMC) ಗಳ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಕೊಂಚ ಏರು ಪೇರು ಕಂಡಿತು. intra day ಅವಧಿಯಲ್ಲಿ ಮೇಲೇರಿದ್ದ ಷೇರುಗಳು ನಂತರ ಶೇ 5 ರಷ್ಟು ಇಳಿಮುಖ ಕಂಡಿತ್ತು.

ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್, ಇಂಡಿಯನ್ ಆಯಿಲ್ ಕಾರ್ಪೋರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳ ಷೇರುಗಳು ಒಟ್ಟಾರೆ ಶೇ 2 ರಷ್ಟು ಕುಸಿತ ಕಂಡಿತು. ದಿನದ ಅಂತ್ಯಕ್ಕೆ ಹಾಗೂ ಹೀಗೂ ಸುಧಾರಿಸಿಕೊಂಡು ಸಮಸ್ಥಿತಿಗೆ ತಲುಪಿದ್ದರಿಂದ ಹೂಡಿಕೆದಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ (BPCL) 336 ರು ಶೇ 3.4 ರಷ್ಟು ಟ್ರೇಡಿಂಗ್ ಮಾಡಿ intra day ಅವಧಿಯಲ್ಲಿ 356 ರು. ಗೆ ಏರಿಕೆ ಕಂಡಿತ್ತು.

ಹಿಂದೂಸ್ತಾನ್ ಪೆಟ್ರೊಲಿಯಂ ಕಾರ್ಪೊರೇಷನ್ (HPCL) 300 ರು. ನಂತೆ ಶೇ 3 ರಷ್ಟು ಇಳಿಕೆ ಕಂಡಿತ್ತು. ಇಂಡಿಯನ್ ಆಯಿಲ್ ಕಾರ್ಪೊರೇಷನ್ 243 ರು ನಂತೆ ಶೇ 2 ರಷ್ಟು ಇಳಿಕೆ ಕಂಡಿತ್ತು.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಎಣಿಕೆಯಂತೆ ಐಒಸಿ, ಬಿಪಿಸಿಎಲ್ ಹಾಗೂ ಎಚ್ ಪಿಸಿಎಲ್ ಗಳ ಒಟ್ಟಾರೆ ನಷ್ಟ 40,540 ಕೋಟಿ ರು ಮೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅನುಭವಿಸಿದ ನಷ್ಟಕ್ಕೆ ಹೋಲಿಸಿದರೆ ನಾಲ್ಕುಪಟ್ಟು ಅಧಿಕ ನಷ್ಟ ಈ ಬಾರಿ ಉಂಟಾಗಿದೆ.

ಪೆಟ್ರೋಲಿಯಂ ದರ ನಿಗದಿ ಪಡಿಸುವ ಅಧಿಕಾರವನ್ನು ಅನಿಯಂತ್ರಿತಗೊಳಿಸಿದ ಮೇಲೆ ಇಂಧನ ಸಂಸ್ಥೆಗಳ ಪೆಟ್ರೋಲ್ ಮಾರಾಟ ಲಾಭಕ್ಕಿಂತ ನಷ್ಟದಲ್ಲೇ ಸುಖ ಕಾಣುತ್ತಿದೆ.

ಸಾಲದ್ದಕ್ಕೆ, ಇಂಧನ ಸಂಸ್ಥೆಗಳ ಶ್ರೇಯಾಂಕ ಅಳೆಯುವ ಫಿಚ್ ವರದಿ ಕೂಡಾ ಪೂರಕವಾಗಿಲ್ಲ. ಫಿಚ್ ಪ್ರಕಾರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸಾಲ 1 ಲಕ್ಷ ಕೋಟಿ ದಾಟುತ್ತಿದೆ. ತ್ರೈಮಾಸಿಕ ವರದಿಯಲ್ಲಿ ಏಳಿಗೆ ಕಂಡಿಲ್ಲ. ಇಂಡಿಯನ್ ಅಯಿಲ್ ಕಾರ್ಪೊರೇಷನ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಿಗೆ ನೆಗಟಿವ್ ಮಾರ್ಕ್ಸ್ ಸಿಕ್ಕಿದೆ. ಈ ಎಲ್ಲಾ ಅಂಶಗಳಿಂದ ಷೇರುಗಳು ಏರುಪೇರು ಕಂಡರೂ ಸ್ಥಿರತೆ ಕಾಯ್ದುಕೊಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+