
2011-12 ರ ಆರ್ಥಿಕ ವರ್ಷದಲ್ಲಿ ಸುಮಾರು 645 ಶಾಖೆಗಳನ್ನು ಆರಂಭಿಸಲಾಗಿತ್ತು. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಸುಮಾರು 1,000ಕ್ಕೂ ಅಧಿಕ ಶಾಖೆಗಳನು ತೆರಯಲಾಗಿದ್ದು ಅದಕ್ಕೆ ಅನುಗುಣವಾಗಿ ನೇಮಕಾತಿ ನಡೆದಿದೆ ಎಂದು ಕೃಷ್ಣ ಕುಮಾರ್ ಹೇಳಿದರು.
ಜೂನ್ 2012ಕ್ಕೆ ಅನ್ವಯವಾಗುವಂತೆ ಎಸ್ ಬಿಐ ಸುಮಾರು 14,127 ಶಾಖೆಗಳನ್ನು ಹೊಂದಿದೆ. ಎಸ್ ಬಿಐ ಪೈಪೋಟಿ ನೀಡುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸುಮಾರು 5,697 ಶಾಖೆ ಹಾಗೂ ಖಾಸಗಿ ವಲಯದ ಪ್ರಮುಖ ಸಂಸ್ಥೆ ಐಸಿಐಸಿಐ ಬ್ಯಾಂಕ್ 2,755 ಶಾಖೆಗಳನ್ನು ಹೊಂದಿದೆ.
ಎಸ್ ಬಿಐನ ಶಾಖೆಗಳಲ್ಲಿ 2/3ನೇ ಭಾಗ ಗ್ರಾಮೀಣ ಹಾಗೂ ಅರೆ ನಗರ ಕೇಂದ್ರಿತ ಪ್ರದೇಶಗಳಲ್ಲಿ ಇದೆ ಎಂಬುದು ಗಮನಾರ್ಹ. ಆರ್ ಬಿಐ ನಿರ್ದೇಶನದ ಪ್ರಕಾರ ನಾಲ್ಕರಲ್ಲಿ ಒಂದು ಬ್ರಾಂಚ್ ಗ್ರಾಮೀಣ ಭಾಗದಲ್ಲಿ ಆರಂಭಿಸಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿನ ಯಶಸ್ಸಿನಿಂದ ಮೇಟ್ರೋ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಕೃಷ್ಣ ಕುಮಾರ್ ಹೇಳಿದ್ದಾರೆ.
ನಗರ/ಮೇಟ್ರೋ ಪ್ರದೇಶಗಳಲ್ಲಿ ಸುಮಾರು 700 ಶಾಖೆ ತೆರೆಯಲು ಸದ್ಯಕ್ಕೆ ಯೋಜಿಸಲಾಗಿದೆ. ಬ್ಯಾಂಕಿಂಗ್ ಇಲ್ಲದ ಪ್ರದೇಶ ಗುರುತಿಸಿ 300 ಶಾಖೆ ಆರಂಭಿಸಲಾಗುವುದು. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಶಾಖೆ ಹಾಗೂ ಕಾರ್ಯ ನಿರ್ವಹಣೆ ಮುಖ್ಯ ಎಂದು ಕೃಷ್ಣಕುಮಾರ್ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಎಸ್ ಬಿಐ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ 7,452 ಜನ ಉದ್ಯೋಗಗಳನ್ನು ಸಂಸ್ಥೆ ಕಳೆದುಕೊಂಡಿದೆ. ಆದರೆ, ಈ ಆರ್ಥಿಕ ವರ್ಷದಲ್ಲಿ 9,500 ಹೊಸ ನೇಮಕಾತಿ ಮಾಡಿಕೊಳ್ಳುವ ಮೂಲಕ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲಾಗುತ್ತದೆ. 2012-13ರಲ್ಲಿ 9,500ಕ್ಕೂ ಅಧಿಕ ಕ್ಲಕ್ ಹುದ್ದೆಗಳು ಲಭ್ಯವಿರುತ್ತದೆ ಎಂದು ಬ್ಯಾಂಕ್ ಪ್ರಕಟಿಸಿದ್ದಾರೆ.
ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ ಎಸ್ ಬಿಐ ನಲ್ಲಿ ಶಾಶ್ವತ ಉದ್ಯೋಗಿಗಳ ಸಂಖ್ಯೆ 2,15,481ನಷ್ಟಿದೆ.
ಎಸ್ ಬಿಐ Q1 ನಲ್ಲಿ ಶೇ 137 ರಷ್ಟು ಪ್ರಗತಿಯೊಂದಿಗೆ 3,751.56 ಕೋಟಿ ನಿವ್ವಳ ಲಾಭ ಗಳಿಸಿತ್ತು. ತನ್ನ ತ್ರೈಮಾಸಿಕ ವರದಿಯಲ್ಲಿ ಸುಮಾರು 1,000 ಹೊಸ ಬ್ರ್ಯಾಂಚ್ ಗಳನ್ನು ಆರಂಭಿಸಲಿದ್ದು, 2013 ಮಾರ್ಚ್ ವೇಳೆಗೆ 15,000 ಬ್ರ್ಯಾಂಚ್ ತೆರೆಯುವ ನಿರೀಕ್ಷೆ ಹೊಂದಿದೆ. ಈ ವರ್ಷದಲ್ಲಿ 2,500 ಪ್ರೊಬೆಷನರಿ ಆಫೀಸರ್ ಗಳು, 12,000 ಅಧಿಕಾರಿಗಳು ಹಾಗೂ ಕ್ಲರ್ಕ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಎಸ್ ಬಿಐ ಪ್ರಕಟಿಸಿತ್ತು.


Click it and Unblock the Notifications