ಕಿಂಗ್ ಫಿಷರ್ ಸಂಸ್ಥೆ ಷೇರುಗಳು 12.97 ರು.ನಂತೆ ಶೇ 19.98 ರಷ್ಟು ಏರಿಕೆ ಕಂಡಿದೆ. ಸ್ಪೈಸ್ ಜೆಟ್ ಷೇರುಗಳು 38.35 ರು ನಂತೆ ಶೇ 11 ರಷ್ಟು ಏರಿಕೆಯಾಗಿದ್ದಲ್ಲದೆ ಇಂಟ್ರಾ ಡೇ ಅವಧಿಯಲ್ಲಿ 41.30 ರು ಮುಟ್ಟಿ ಅಚ್ಚರಿ ಮೂಡಿಸಿದೆ. ಉಳಿದಂತೆ, ಜೆಟ್ ಏರ್ ವೇಸ್ 376.60 ರು ನಂತೆ ಶೇ 2.24 ರಷ್ಟು ಏರಿಕೆ ಕಂಡಿದೆ.
* ಬಿಎಸ್ ಇನಲ್ಲಿ ಮಧ್ಯಾಹ್ನ 12.50ರ ವೇಳೆಗೆ ಕಿಂಗ್ ಫಿಷರ್ ಸಂಸ್ಥೆ 12.97 ರು.ನಂತೆ ಶೇ 19.98 ರಷ್ಟು ಏರಿಕೆ ಕಂಡಿದೆ
* ಎನ್ ಎಸ್ ಇನಲ್ಲಿ ಮಧ್ಯಾಹ್ನ 12.51 ರ ವೇಳೆಗೆ ಕಿಂಗ್ ಫಿಷರ್ ಸಂಸ್ಥೆ ಷೇರು 12.95 ರು ನಂತೆ ಶೇ 19.91 ರಷ್ಟು ಏರಿಕೆ ಕಂಡಿದೆ.
* ಬಿಎಸ್ ಇನಲ್ಲಿ ಮಧ್ಯಾಹ್ನ 12.50ರ ವೇಳೆಗೆ ಸ್ಪೈಸ್ ಜೆಟ್ ಷೇರುಗಳು 37.60 ರು ನಂತೆ ಶೇ 8.99 ರಷ್ಟು ಏರಿದೆ.
* ಎನ್ ಎಸ್ ಇನಲ್ಲಿ ಕಳೆದ 30 ದಿನಗಳಿಂದ ಸ್ಪೈಸ್ ಜೆಟ್ ಸಂಸ್ಥೆ ಟ್ರೇಡಿಂಗ್ ಮಾಡಿಲ್ಲ
* ಬಿಎಸ್ ಇನಲ್ಲಿ ಮಧ್ಯಾಹ್ನ 12.50ರ ವೇಳೆಗೆ ಜೆಟ್ ಏರ್ ವೇಸ್ ಷೇರುಗಳು 363.30 ರು ನಂತೆ ಶೇ 1.37ರಷ್ಟು ಕುಸಿತ ಕಂಡು ಅಚ್ಚರಿ ಉಂಟು ಮಾಡಿದೆ.
* ಎನ್ ಎಸ್ ಇನಲ್ಲಿ ಮಧ್ಯಾಹ್ನ 12.50ರ ವೇಳೆಗೆ ಜೆಟ್ ಏರ್ ವೇಸ್ ಷೇರುಗಳು 363.00 ರು ನಂತೆ ಶೇ 1.53ರಷ್ಟು ಇಳಿಕೆಯಾಗಿದೆ.
ಪೂರ್ವ ನಿಗದಿತ ಹಾಗೂ ನಿಗದಿ ಇಲ್ಲದೆ ವಿಮಾನಯಾನ ಸೇವೆಗಳಲ್ಲೂ ಶೇ 49ರಷ್ಟು ಎಫ್ ಡಿಐ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಆದೇಶ ನೀಡಿರುವುದು ವಿಮಾನಯಾನ ಸಂಸ್ಥೆಗಳಿಗೆ ಜೀವ ತುಂಬಿದೆ.
ಇಲ್ಲಿ ತನಕ ವಿದೇಶಿ ವಿಮಾನಯಾನ ಸಂಸ್ಥೆಗಳು ಹೆಲಿಕಾಪ್ಟರ್, ಕಾರ್ಗೋ ಹಾಗೂ ಇತರೆ ಸೇವೆಗಳಲ್ಲಿ ಮಾತ್ರ ಹೂಡಿಕೆ ಮಾಡಲು ಅವಕಾಶ ನೀಡಲಾಗಿತ್ತು. ಈಗ ವಿಮಾನಯಾನ ಕ್ಷೇತ್ರದಲ್ಲಿ ನೇರವಾಗಿ ಬಂಡವಾಳ ಹೂಡಿಕೆ ಸಾಧ್ಯವಾಗಿದೆ. ಈವರೆಗೂ ಸುಅಮರು 434.75 ಮಿಲಿಯನ್ ಡಾಲರ್ ನಷ್ಟು ಹಣ ಎಫ್ ಡಿಐ ಮೂಲಕ ಹರಿದು ಬಂದಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಭಾರತದ ವಿಮಾನಯಾನ ಕ್ಷೇತ್ರಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿನ ಬಲ ನೀಡಲಿದೆ ಎಂದು ವಾಯುಯಾನ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications

