
ಯುಪಿಎ ಆರ್ಥಿಕ ನೀತಿ, ಎಫ್ ಡಿಐ ನೀತಿ ವಿರೋಧಿಸಿ ಕರೆ ನೀಡಿರುವ ಬಂದ್ ನಿಂದಾಗಿ ಗುರುವಾರ(ಸೆ.20) ರೀಟೈಲ್ ಷೇರುಗಳಲ್ಲಿ ಏರಿಳಿತ ಕಂಡುಬಂದಿದೆ.
ಪ್ಯಾಂಟಲೂನ್ ರೀಟೈಲ್ ಷೇರುಗಳು ಶೇ 5 ರಷ್ಟು ಕುಸಿತ ಕಂಡರೆ, ಪ್ರೊವೋಗ್ ಷೇರುಗಳು ಕೂಡಾ ಶೇ 5ರಷ್ಟು ಇಳಿಕೆಯಾಗಿದೆ.
* ಬಿಎಸ್ ಇನಲ್ಲಿ ಪ್ಯಾಂಟಲೂನ್ ರೀಟೈಲ್ ಷೇರುಗಳು ಮಧ್ಯಾಹ್ನ 1.20 ರ ಸುಮಾರಿಗೆ 175.65 ರು ನಂತೆ ಶೇ 2.42ರಷ್ಟು ಇಳಿಕೆಯಾಗಿದೆ. ಎನ್ಎಸ್ ಇನಲ್ಲಿ ಕೂಡಾ 175.65 ರು ನಂತೆ ಶೇ 2.34 ರಷ್ಟು ಕುಸಿದಿದೆ.
* ಬಿಎಸ್ ಇನಲ್ಲಿ ಶಾಪರ್ಸ್ ಸ್ಟಾಪ್ ಷೇರುಗಳು 379.10 ರುನಂತೆ ಶೇ 0.40 ಏರಿಕೆ ಕಂಡು ಚೇತರಿಸಿಕೊಂಡಿದೆ. ಎನ್ಎಸ್ ಇನಲ್ಲಿ 379.80 ರುನಂತೆ ಶೇ 0.52ರಷ್ಟು ಏರಿದೆ.
* ಪ್ರೋವೊಗ್ ಇಂಡಿಯಾ ಷೇರುಗಳು ಬಿಎಸ್ ಇನಲ್ಲಿ 16.86 ರು ನಂತೆ ಶೇ 4.58 ರಷ್ಟು ಕುಸಿದಿದೆ. ಎನ್ಎಸ್ ಇನಲ್ಲ್ಲಿ 16.90 ರು.ನಂತೆ ಶೇ 4.52 ರಷ್ಟು ಕುಸಿತ ಕಂಡಿದೆ.
* ಶಾಪರ್ಸ್ ಸ್ಟಾಪ್ ಹಾಗೂ ಟ್ರೆಂಟ್ ಲಿ ಷೇರುಗಳು ಶೇ 2 ರಷ್ಟು ಇಳಿಮುಖ ಕಂಡಿದ್ದು, ತಜ್ಞರ ಪ್ರಕಾರ ರೀಟೈಲ್ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಷೇರುಗಳು ಇನ್ನಷ್ಟು ಕುಸಿತ ಕಾಣುವ ಸಾಧ್ಯತೆಯಿದೆ.
* ಟ್ರೆಂಟ್ ಲಿಮಿಟೆಡ್ ನ ಷೇರುಗಳು ಬಿಎಸ್ ಇನಲ್ಲಿ 1100 ರು ನಂತೆ ಶೇ 2.44 ರಷ್ಟು ಕುಸಿದಿದೆ. ಎನ್ ಎಸ್ ಇನಲ್ಲಿ 1100.95 ರುನಂತೆ ಶೇ 2.52 ರಷ್ಟು ಕುಸಿದಿದೆ.
ದೇಶದ ಬಹುತೇಕ ರಾಜ್ಯಗಳು ರೀಟೈಲ್ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಟ್ರೆಂಡ್ ಕೆಲ ಕಾಲ ಮುಂದುವರೆಯುವ ಸಾಧ್ಯತೆಯಿದೆ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications