ಮಾರುಕಟ್ಟೆ ಮೌಲ್ಯ: ಎಚ್ ಡಿಎಫ್ ಸಿ ಹಿಂದಿಕ್ಕಿದ ಎಸ್ಬಿಐ

ಮಾರುಕಟ್ಟೆ ಮೌಲ್ಯ: ಎಚ್ ಡಿಎಫ್ ಸಿ ಹಿಂದಿಕ್ಕಿದ ಎಸ್ಬಿಐ
HDFC Bank: Quotes, News
BSE 824.25BSE Quote6.55 (-0.79%)
NSE 824.95NSE Quote7.4 (-0.90%)
ಬೆಂಗಳೂರು, ಸೆ.24: ಸರ್ಕಾರಿ ಸ್ವಾಮ್ಯದ ಅತಿ ವಿಸ್ತೃತ ಜಾಲ ಹೊಂದಿರುವ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನಿಸಿದೆ.

ಷೇರು ಮಾರುಕಟ್ಟೆಯಲ್ಲಿ ಎಸ್ ಬಿಐ ಭರ್ಜರಿಯಾಗಿ ಸದ್ದು ಮಾಡದಿದ್ದರೂ ಅಗ್ರಸ್ಥಾನದಲ್ಲಿದ್ದ ಎಚ್ ಡಿಎಫ್ ಸಿ ಬ್ಯಾಂಕನ್ನು ಕೆಳಗಿಳಿಸಿ ಅಗ್ರಪಟ್ಟಕ್ಕೆ ಎಸ್ ಬಿಐ ಏರಿದೆ.

ಎಸ್ ಬಿಐ ಮಾರುಕಟ್ಟೆ ಮೌಲ್ಯ(m-cap: what is m-cap?) 1.48 ಲಕ್ಷ ಕೋಟಿ ದಾಟಿದೆ. ಖಾಸಗಿ ವಲಯದ ಎಚ್ ಡಿಎಫ್ ಸಿ ಕೂಡಾ ಪೈಪೋಟಿ ನೀಡುತ್ತಿದ್ದು 1,47,444 ಕೋಟಿ ಮೌಲ್ಯ ದಾಖಲಿಸಿದೆ.

ಕಳೆದ ಜುಲೈನಲ್ಲಿ ಎಸ್ ಬಿಐ ಹಿಂದಿಕ್ಕಿದ ಎಚ್ ಡಿಎಫ್ ಸಿ ಭಾರತದ ಅತಿ ಮೌಲ್ಯಯುತ ಬ್ಯಾಂಕ್ ಆಗಿ ಹೊರಹೊಮ್ಮಿತ್ತು.

ಒಟ್ಟಾರೆ ಎಲ್ಲಾ ಸಂಸ್ಥೆಗಳ ತುಲನೆಯಲ್ಲಿ ರಿಲಯನ್ಸ್ ಸಂಸ್ಥೆ ತನ್ನ ಅಗ್ರಪಟ್ಟವನ್ನು ಕಾಯ್ದುಕೊಂಡಿದೆ. ರಿಲಯನ್ಸ್ ಮಾರುಕಟ್ಟೆ ಮೌಲ್ಯ 2,74,987 ಕೋಟಿ ರು ಇದೆ. ನಂತರದ ಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) 2,55,084 ಕೋಟಿ ಮೌಲ್ಯ ಹೊಂದಿದೆ.

ನಂತರದ ಸ್ಥಾನಗಳಲ್ಲಿ ಒಎನ್ ಜಿಸಿ, ಕೋಲ್ ಇಂಡಿಯಾ, ಐಟಿಸಿ ಇದ್ದು ಆಮೇಲೆ ಎಸ್ ಬಿಐ ನಂತರ ಎಚ್ ಡಿಎಫ್ ಸಿ ಕಾಣಿಸಿಕೊಂಡಿದೆ. 8ನೇ ಸ್ಥಾನದಲ್ಲಿ ಎನ್ ಟಿಪಿಸಿ, ಇನ್ಫೋಸಿಸ್ ಹಾಗೂ ಐಸಿಐಸಿಐ ಕಾಣಿಸಿಕೊಂಡಿದೆ. ಭಾರ್ತಿ ಏರ್ ಟೆಲ್ ಈ ತ್ರೈಮಾಸಿಕದಲ್ಲೂ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದೆ.

ಬಿಎಸ್ ಇನಲ್ಲಿ ಎಸ್ ಬಿಐ ಷೇರುಗಳು ಮಧ್ಯಾಹ್ನ 1 ಗಂಟೆ ವೇಳೆಗೆ 2249.00 ರು ನಂತೆ ಶೇ 1.65ರಷ್ಟು ಏರಿಕೆ ಕಂಡಿದೆ. ಎನ್ ಎಸ್ ಇನಲ್ಲಿ 2249.00 ರು ನಂತೆ ಶೇ 1.62ರಷ್ಟು ಪ್ರಗತಿ ಸಾಧಿಸಿದೆ.

ಇದೇ ವೇಳೆ ಎಚ್ ಡಿಎಫ್ ಸಿ ಷೇರುಗಳು ಬಿಎಸ್ ಇನಲ್ಲಿ 628.50 ರು ನಂತೆ ಶೇ 0.52 ರಷ್ಟು ಏರಿಕೆ ಕಂಡಿದೆ. ಎನ್ ಎಸ್ ಇನಲ್ಲಿ 628.50 ರು ನಂತೆ ಶೇ 0.54 ರಷ್ಟು ಏರಿದೆ.

ಬಿಎಸ್ ಇನಲ್ಲಿ ನೋಂದಾಯಿತ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಪ್ರತಿದಿನದ ಮಾರುಕಟ್ಟೆ ಏರಿಳಿತ ಹಾಗೂ ಷೇರು ಮೌಲ್ಯದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಇಲ್ಲಿ ನೀಡಿರುವ ಅಂಕಿ ಅಂಶಗಳು ಸೋಮವಾರ, 24,2012ಕ್ಕೆ ಅನ್ವಯವಾಗುವಂತೆ ಮಾತ್ರ ಇದೆ ಎಂದು ಓದಿಕೊಳ್ಳತಕ್ಕದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+