ಯುಬಿ ಷೇರುಗಳು ಏರಿಕೆ, ಮಲ್ಯ ಖುಷ್
ಯುಬಿ ಷೇರುಗಳು ಏರಿಕೆ, ಮಲ್ಯ ಖುಷ್
United Breweries: Quotes, News
BSE 1329.20BSE Quote0.55 (-0.04%)
NSE 1329.30NSE Quote1.1 (-0.08%)
United Spirits: Quotes, News
BSE 1385.75BSE Quote5.7 (-0.41%)
NSE 1385.70NSE Quote4.5 (-0.32%)

ಬೆಂಗಳೂರು, ಸೆ.25: ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಹಾಗೂ ಯುನೈಟೆಡ್ ಬ್ರೂವರೀಸ್ ಷೇರುಗಳು ಕಳೆದ ಎರಡು ದಿನಗಳಿಂದ ಏರಿಕೆ ಕಾಣುತ್ತಲೇ ಇದೆ. ಯುನೈಟೆಡ್ ಸ್ಪಿರೀಟ್ಸ್ ಹಾಗೂ ಡಿಯಾಜಿಯೋ ಸಂಸ್ಥೆ ನಡುವೆ ಷೇರು ಮಾರಾಟ ಒಪ್ಪಂದ ಏರ್ಪಟ್ಟ ಸುದ್ದಿ ಹಬ್ಬುತ್ತಿದ್ದಂತೆ ಷೇರುಗಳು ಪ್ರಗತಿ ಕಂಡಿದೆ. ಮಂಗಳವಾರ ಯುಬಿ ಸಮೂಹದ ಷೇರುಗಳು ಒಟ್ಟಾರೆ ಶೇ 3 ರಷ್ಟು ಏರಿಕೆ ಕಂಡಿದೆ.

ಬಿಎಸ್ ಇನಲ್ಲಿ ಮಂಗಳವಾರ ಮಧ್ಯಾಹ್ನ 1.15ರ ಸುಮಾರಿಗೆ ಯುನೈಟೆಡ್ ಸ್ಪಿರೀಟ್ಸ್ ಲಿಮಿಟೆಡ್ ಷೇರುಗಳು 1093.30 ರುನಂತೆ ಶೇ 3.73 ರಷ್ಟು ಏರಿಕೆ ಕಂಡಿದೆ. ದಿನದ ಆರಂಭದಲ್ಲಿ 1064 ರು ನಷ್ಟಿದ್ದ ಬೆಲೆ ಈಗ ತನ್ನ ಏರಿಕೆಯನ್ನು ಮುಂದುವರೆಸಿದೆ. ಎನ್ ಎಸ್ ಇನಲ್ಲಿ ಇದೇ ವೇಳೆ ಯುನೈಟೆಡ್ ಸ್ಪಿರೀಟ್ಸ್ ಲಿಮಿಟೆಡ್ ಷೇರುಗಳು 1093.65 ರುನಂತೆ ಶೇ 3.23 ರಷ್ಟು ಏರಿಕೆ ಕಂಡಿದೆ.

ಯುನೈಟೆಡ್ ಬ್ರೂವರೀಸ್ ಷೇರುಗಳು ಬಿಎಸ್ ಇನಲ್ಲಿ ಮಂಗಳವಾರ ಮಧ್ಯಾಹ್ನ 1.15ರ ಸುಮಾರಿಗೆ 665.00 ರು ನಂತೆ ಶೇ 0.51ರಷ್ಟು ಏರಿಕೆ ಕಂಡಿದೆ. ಎನ್ ಎಸ್ ಇನಲ್ಲಿ ಇದೇ ಮೊದಲ ಬಾರಿಗೆ 664.85 ರು ನಂತೆ ಶೇ 0.11 ರಷ್ಟು ಇಳಿಕೆ ಕಂಡಿದೆ.

ಈ ನಡುವೆ ಯುನೈಟೆಡ್ ಸ್ಪಿರೀಟ್ಸ್ ಲಿಮಿಟೆಡ್ ಸಂಸ್ಥೆಯನ್ನು ಡಿಯೋಜಿಯೊ ಪಿಎಲ್ ಸಿ ಕಂಪನಿ ಖರೀದಿಸುವ ಬಗ್ಗೆ ಮಾತುಕತೆ ನಡೆದಿರುವುದನ್ನು ಯುಬಿ ಸಮೂಹದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಯುನೈಟೆಡ್ ಸ್ಪಿರೀಟ್ಸ್ ನ ಶೇ 27 ರಷ್ಟು ಷೇರುಗಳನ್ನು ಡಿಯಾಜಿಯೋ ಸಂಸ್ಥೆ ಸುಮಾರು 3,000 ಕೋಟಿ ರು ನೀಡಿ ಖರೀದಿಸುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ, ಯುನೈಟೆಡ್ ಸ್ಪಿರೀಟ್ಸ್ ವಕ್ತಾರರು ಈ ಸುದ್ದಿಯನ್ನು ಅಲ್ಲಗೆಳೆದಿದ್ದರು.

ಬದಲಾದ ಯುಬಿ ಹಣೆಬರಹ:ಸುಮಾರು 6 ಕಂಪನಿಗಳ ಸಮೂಹ ಹೊಂದಿರುವ ಯುನೈಟೆಡ್ ಬ್ರಿವೆರೆಸ್(UB)ಸಂಸ್ಥೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯ 22,850 ಕೋಟಿ ರೂ ತೂಗುತ್ತದೆ. 2010-11ರಲ್ಲಿ 1,027 ಕೋಟಿ ರೂ ನಷ್ಟ ಅನುಭವಿಸಿದ್ದ ಕಿಂಗ್ ಫಿಷರ್ ಒಟ್ಟಾರೆ 7,057.08 ಕೋಟಿ ಸಾಲ ತಲೆ ಮೇಲೆ ಹೊತ್ತುಕೊಂಡಿದೆ.

21,800 ಕೋಟಿ ರೂ ಸಮೂಹದ ಒಡೆಯನಾದ ಮಲ್ಯ ಅವರು ಯುಬಿ ಸಮೂಹದ ಷೇರು ಮಾರಿ ಕಿಂಗ್ ಫಿಷರ್ ಹಾರಾಟ ಸುಗಮಗೊಳಿಸುವ ಸುದ್ದಿಯೂ ಚಾಲ್ತಿಯಲ್ಲಿತ್ತು. ಇದರ ಜೊತೆಗೆ ಐಪಿಎಲ್ ನ ರಾಯಲ್ ಚಾಲೆಂಜರ್ಸ್ ತಂಡವನ್ನು ಮಾರಾಟ ಮಾಡಿ ಯುನೈಟೆಡ್ ಸ್ಪಿರೀಟ್ಸ್ ಗೆ ಜೀವ ತುಂಬುತ್ತಾರೆ ಎನ್ನಲಾಗಿತ್ತು.

ಸುಮಾರು 7,000 ಕೋಟಿ ರು ಸಾಲ ಉಳಿಸಿಕೊಂಡಿರುವ ಯುನೈಟೆಡ್ ಸ್ಪಿರಿಟ್ಸ್ ಗೆ ರಿಲೀಫ್ ನೀಡಲು ಆಸ್ತಿ ಮಾರಾಟ, ಷೇರು ಮಾರಾಟಕ್ಕೆ ಕಿಂಗ್ ಮಲ್ಯ ಮುಂದಾಗಿದ್ದಾರೆ.

ಯುನೈಟೆಡ್ ಬ್ರೂವರೀಸ್ ನ ಸಾಲ ತೀರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 1,500 ಕೋಟಿ ರು ನಿಂದ 2,000 ಕೋಟಿ ಮೊತ್ತ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಹೆಚ್ಚಿತ್ತು. ಅದರೆ, ಈಗ ಯುಬಿ ಸಮೂಹ ಷೇರುಗಳನ್ನು ಕೊಳ್ಳಲು ಡಿಯಾಜಿಯೋ ಕಂಪನಿ ಮುಂದಾಗಿರುವುದು ಎಲ್ಲಾ ಸಮಸ್ಯೆಗೂ ಪರಿಹಾರ ಸಿಕ್ಕಿದ್ದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+