ಜೂನ್ 2012ರ ಎಣಿಕೆಗೆ ಕರ್ನಾಟಕ ಬ್ಯಾಂಕ್ ಟರ್ನ್ ಓವರ್ 55,000 ಕೋಟಿ ಇದ್ದು ಮಾರ್ಚ್ 2015ರ ವೇಳೆಗೆ 1 ಲಕ್ಷ ಕೋಟಿ ರುಗೆ ಏರಿಕೆ ಮಾಡುವ ಗುರಿ ಹೊಂದಿದೆ. ಬ್ಯಾಂಕ್ ಅಧುನೀಕರಣ, ನವೀಕರಣ ಮುಂತಾದ ಕಾರ್ಯಗಳಿಗೆ ಸುಮಾರು 30 ಲಕ್ಷ ಹೂಡಿಕೆ ಮಾಡಲಾಗಿದೆ. ಇದರ ಅಂಗವಾಗಿ ಗ್ರಾಹಕರಿಗೆ ಅನೇಕ ಸೌಲಭ್ಯಗಳು ಸಿಗಲಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 65,000 ಕೋಟಿ ರು ಟರ್ನ್ ಓವರ್ ಗಳಿಕೆ ಗುರಿಯಿದೆ. 2011-12ಕ್ಕೆ ಹೋಲಿಸಿದರೆ ಶೇ 25 ರಷ್ಟು ಪ್ರಗತಿ ಸಾಧಿಸುವ ಗುರಿ ಇದೆ ಎಂದು ಭಟ್ ಹೇಳಿದರು.
ಮೊಬೈಲ್ ಬ್ಯಾಂಕಿಂಗ್ : ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಲು ತಂತ್ರಜ್ಞಾನಕ್ಕೆ ಮೊರೆ ಹೋಗುತ್ತಿರುವ ಬ್ಯಾಂಕುಗಳ ಸಾಲಿಗೆ ಕರ್ನಾಟಕ ಬ್ಯಾಂಕ್ ಕೂಡಾ ಸೇರ್ಪಡೆಗೊಂಡಿದೆ. ಕರ್ನಾಟಕ ಬ್ಯಾಂಕ್ ಕೆಬಿಎಲ್ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಿದೆ.
ಈ ಸೇವೆಯ ಮೂಲಕ ಗ್ರಾಹಕರು ದಿನಕ್ಕೆ ರೂ. 50,000ದ ವರೆಗಿನ ಹಣಕಾಸು ವ್ಯವಹಾರಗಳನ್ನು ನಡೆಸಬಹುದಾಗಿದೆ. ಈ ಸೇವೆ ಸುರಕ್ಷಿತ ಹಾಗೂ ಅನುಕೂಲಕರ. ಜಿಪಿಆರ್ಎಸ್ ಹಾಗೂ ಸಿಡಿಎಂಎ ತಂತ್ರಜ್ಞಾನ ಆಧಾರಿತ ಮೊಬೈಲ್ ಗಳಲ್ಲಿ ಈ ಸೇವೆ ಒದಗಿಸಲಾಗುತ್ತದೆ. ಮೊಬೈಲ್ ರಿಚಾರ್ಜ್, ರೈಲ್ವೆ, ಬಸ್, ಸಿನೆಮಾ ಟಿಕೆಟ್ ಬುಕಿಂಗ್, ಹಣ ವರ್ಗಾವಣೆ, ಆನ್ ಲೈನ್ ರಿಟೇಲ್ ಶಾಪಿಂಗ್ ಮತ್ತಿತರ ವ್ಯವಹಾರಗಳನ್ನು ಈ ಮೂಲಕ ಪಡೆಯಬಹುದಾಗಿದೆ
ಮುಂದಿನ ಆರು ತಿಂಗಳಲ್ಲಿ ಸುಮಾರು ಒಂದು ಲಕ್ಷ ಗ್ರಾಹರು ಮೊಬೈಲ್ ಬ್ಯಾಂಕಿಂಗ್ ಸೇವೆಯ ಅನುಕೂಲ ಪಡೆಯಲಿದ್ದಾರೆ ಎಂಬ ನಿರೀಕ್ಷೆಯಿದೆ ಎಂದು ಜಯರಾಂ ಭಟ್ ತಿಳಿಸಿದರು.
ಎಟಿಎಂ ಕಾರ್ಡ್ ಮಿತಿ ಏರಿಕೆ: ಬ್ಯಾಂಕ್ ನ ಎಟಿಎಂ ಡೆಬಿಟ್ ಕಾರ್ಡ್ ವ್ಯವಾಹಾರವನ್ನು ರೂ. 15 ಸಾವಿರದಿಂದ ರೂ. 25 ಸಾವಿರಕ್ಕೆ ಏರಿಸಲಾಗಿದೆ. ಗೋಲ್ಡ್ ಎಟಿಎಂ ಕಾರ್ಡ್ ಗಳಲ್ಲಿ ರೂ. 40 ಸಾವಿರ ವರೆಗೆ ನಗದು ಡ್ರಾ ಮಾಡಬಹುದಾಗಿದೆ.
ಜೀರೋ ಬ್ಯಾಲೆನ್ಸ್ ಖಾತೆ: ಗ್ರಾಹಕರು ಜೀರೊ ಬ್ಯಾಲೆನ್ಸ್ ಖಾತೆಗಳನ್ನು ತೆರೆಯಲು ಅವಕಾಶ ಮಾಡಲಾಗಿದೆ. ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಬೇಕೆಂಬ ನಿಲುವಿಗೆ ಬ್ಯಾಂಕ್ ಬದ್ಧವಾಗಿದೆ ಎಂದು ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಎಂ.ಎಸ್. ಮಹಬಲೇಶ್ವರ ಭಟ್ ಹೇಳಿದ್ದಾರೆ.
ಪ್ರಸಕ್ತ ವರ್ಷ ಸುಮಾರು 40 ಶಾಖೆಗಳನ್ನು ಆರಂಭಿಸಲಾಗುತ್ತದೆ. ಸದ್ಯಕ್ಕೆ ಬ್ಯಾಂಕ್ 509 ಶಾಖೆಗಳು ಹಾಗೂ 400 ಎಟಿಎಂ ಜೊತೆಗೆ 60 ಲಕ್ಷ ಗ್ರಾಹಕರ ಜಾಲವನ್ನು ಹೊಂದಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications

