
ಬಿಎಸ್ ಇಯಲ್ಲಿ ಸೋಮವಾರ (ಅ.1)ರಂದು ಮಧ್ಯಾಹ್ನ 12.05ರ ಸುಮಾರಿಗೆ 15.35 ರು ನಂತೆ ಶೇ-4.78 ಕುಸಿದಿದೆ. ಎನ್ ಎಸ್ ಇನಲ್ಲಿ 15.35 ರು ನಂತೆ ಶೇ-4.95 ರಷ್ಟು ಕುಸಿತ ಕಂಡಿದೆ.
ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆ ಯ ಮುಂಬೈ, ದೆಹಲಿ ಹಾಗೂ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂಜಿನಿಯರ್ ಗಳನ್ನು ಏರ್ ಲೈನ್ ವ್ಯವಸ್ಥಾಪಕರು ಕೆಟ್ಟದಾಗಿ ನೋಡಿಕೊಂಡರು ಎನ್ನಲಾಗಿದೆ. ಅಲ್ಲದೆ ಕಳೆದ ಮಾರ್ಚ್ ತಿಂಗಳಿನಿಂದ ಪೈಲಟ್ ಗಳಿಗೆ ಸಂಬಳ ಸಂದಾಯವಾಗಿಲ್ಲ.
ಸುಮಾರು 7000 ಕೋಟಿ ಸಾಲ ಹೊತ್ತುಕೊಂಡಿರುವ ಕಿಂಗ್ ಫಿಷರ್ ಸಂಸ್ಥೆ ವಿಮಾನಯಾನ ಅ.1 ರಿಂದ ಕೆಲವೆಡೆ ಸ್ಥಗಿತಗೊಂಡಿದ್ದರೆ, ಹಲವೆಡೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ನಮ್ಮ ಸಂಸ್ಥೆಯ ಕೆಲ ಉದ್ಯೋಗಿಗಳ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಕಿಂಗ್ ಫಿಷರ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ಮುಷ್ಕರ ಮುಂದುವರೆದಂತೆ ಷೇರುಪೇಟೆಯಲ್ಲಿ ಕಿಂಗ್ ಫಿಷರ್ ಷೇರು ಮತ್ತೆ ಏರಿಳಿತ ಕಾಣುವ ಲಕ್ಷಣಗಳಿದೆ.
ವಿಮಾನಯಾನ ಕ್ಷೇತ್ರದಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎಂದ ಮೇಲೆ ಇದೇ ಮೊದಲ ಬಾರಿಗೆ ವಿಜಯ್ ಮಲ್ಯ ಒಡೆತನದ ಕಂಪನಿಗಳ ವಾರ್ಷಿಕ ಸಭೆ ಕಳೆದ ವಾರ ನಡೆದಿದ್ದು ಮಹತ್ವದ ಬೆಳವಣಿಗೆಯಾಗಿತ್ತು.
ಡಿಯಾಜಿಯೋ ಸಂಸ್ಥೆ ಯುನೈಟೆಡ್ ಸ್ಪಿರೀಟ್ಸ್ ಹಾಗೂ ಯುಬಿ ಸಮೂಹದ ಷೇರುಗಳಲ್ಲಿ ಪಾಲು ಹೊಂದುವ ಮೂಲಕ ಕಿಂಗ್ ಫಿಷರ್ ಸಾಲದ ಭಾರ ಇಳಿಸುವ ಪ್ರಕ್ರಿಯೆ ಬಗ್ಗೆ ಇನ್ನೂ ಸ್ಪಷ್ಟಣೆ. ಸಾಲ ಕೊಟ್ಟಿರುವ 17ಕ್ಕೂ ಅಧಿಕ ಬ್ಯಾಂಕುಗಳ ಜೊತೆ ಅಕ್ಟೋಬರ್ ಕೊನೆವಾರದಲ್ಲಿ ಮಾತುಕತೆ ನಡೆಸಿ ಎಲ್ಲಾ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಸಂಸ್ಥೆಯ ಷೇರುದಾರರಿಗೆ ವಿಜಯ್ ಮಲ್ಯ ಭರವಸೆ ನೀಡಿದ್ದಾರೆ.


Click it and Unblock the Notifications