40% ಷೇರು ಕುಸಿತ ಭೀತಿ, ಆತಂಕದಲ್ಲಿ ಇನ್ಫೋಸಿಸ್

40% ಷೇರು ಕುಸಿತ ಭೀತಿ, ಆತಂಕದಲ್ಲಿ ಇನ್ಫಿ
Infosys: Quotes, News
BSE 1315.60BSE Quote3 (-0.23%)
NSE 1314.00NSE Quote4.7 (-0.36%)
ಬೆಂಗಳೂರು, ಅ.3: ಇನ್ಫೋಸಿಸ್ ಷೇರುಗಳು ಬುಧವಾರ ಕೊಂಚ ಇಳಿಮುಖಗೊಂಡಿದೆ. ಆದರೆ, ಈ ಮಟ್ಟದಿಂದ ಷೇರುಗಳು ಇನ್ನೂ ಶೇ 40 ರಷ್ಟು ಕುಸಿಯಬಹುದು ಎಂದು ಸಿಎಲ್ ಎಸ್ಎ ವರದಿ ಕಂಡು ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಗೆ ‌ಚಿಂತೆಗೀಡಾಗಿದೆ.

ಜಾಗತಿಕ ದಲ್ಲಾಳಿ ಸಂಸ್ಥೆ CLSA ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಷೇರು ಮೌಲ್ಯ ಶೇ 40ರಷ್ಟು ಕುಸಿತ ಕಾಣುವ ಮುನ್ಸೂಚನೆ ನೀಡಿದೆ.

ದೊಡ್ಡ ದೊಡ್ಡ ಕಂಪನಿಗಳ ಖರೀದಿಯಲ್ಲಿ ತೊಡಗಿರುವುದರಿಂದ ಆಫ್ ಶೋರ್ ಬಿಲ್ಲಿಂಗ್ ದರಗಳು ವ್ಯತ್ಯಯವಾಗಿದೆ. ಪ್ರತಿ ಗಂಟೆಗೆ 18 ರಿಂದ 22 ಯುಎಸ್ ಡಾಲರ್ ಇದ್ದ ಮೌಲ್ಯ 14 ಯುಎಸ್ ಡಾಲರ್ ಗೆ ಕುಸಿತ ಕಂಡಿದೆ.ಡಿ ರೇಟಿಂಗ್ ನಿಂದ ಇನ್ಫೋಸಿಸ್ ಗಳಿಕೆ ದರ 10 ರಿಂದ 14 ರ ಗುಣಕದಂತೆ ಕುಸಿಯಲಿದೆ ಎಂದು ಸಿಎಲ್ ಎಸ್ ಎ ಸಂಸ್ಥೆ ಹೇಳಿದೆ.

ಬಿಎಸ್ ಇನಲ್ಲಿ ಇನ್ಫೋಸಿಸ್ ಷೇರುಗಳು ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ 2578.55 ರು ನಂತೆ ಶೇ 1.17 ರಷ್ಟು ಕುಸಿತ ಕಂಡಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ 2578.25 ರು ನಂತೆ ಶೇ 1.20 ರಷ್ಟು ಇಳಿಕೆಯಾಗಿದೆ. ಕನಿಷ್ಠ 30 ರು ಷೇರು ಮೌಲ್ಯ ಕಳೆದುಕೊಂಡಿದೆ.

ಸೆಪ್ಟೆಂಬರ್ ನಲ್ಲಿ ರುಪಾಯಿ ಮೌಲ್ಯ ಏರಿಕೆಯಾಗಿರುವುದು ಇನ್ಫೋಸಿಸ್ ಗೆ ದುಬಾರಿಯಾಗಿ ಪರಿಣಮಿಸಿದೆ. ಡಾಲರ್ ನಲ್ಲಿ ಗಳಿಕೆ ಮಾಡುವ ಐಟಿ ಕಂಪನಿಗಳು ವಿದೇಶಿ ವಿನಿಯಮ ಬದಲಾವಣೆಯಿಂದ ಆಗುತ್ತಿರುವ ಕುಸಿತವನ್ನು ತಡೆಗಟ್ಟಲು ಸರ್ವಯತ್ನ ನಡೆಸಿದೆ.

ಪ್ರಸಕ್ತ ಆರ್ಥಿಕ ವರ್ಷದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿದ್ದರೂ ಹಲವಾರು ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಕುರುಹು ತೋರಿದ್ದರ ಪರಿಣಾಮ ಸೆಪ್ಟೆಂಬರ್ ನಲ್ಲಿ ಕೆಲಕಾಲ ಇನ್ಫೋಸಿಸ್ ಷೇರುಗಳು ಮೇಲ್ಮುಖವಾಗಿ ಚಲಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+