
4.4 ಮೆಗಾ ಹರ್ಡ್ಜ(Mhz) ಮೇಲ್ಪಟ್ಟ 2ಜಿ ತರಂಗಗುಚ್ಛ ಹೊಂದಿರುವ ಜಿಎಸ್ ಎಂ ಸೇವೆ ನೀಡಿರುವ ಎಲ್ಲಾ ಸಂಸ್ಥೆಗಳು ಒಂದೇ ಬಾರಿಗೆ ಶುಲ್ಕ ಪಾವತಿಸತಕ್ಕದ್ದು ಎಂದು Empowered Group of Ministers (EGoM) ಆದೇಶ ಹೊರಡಿಸಿತ್ತು. 20 ವರ್ಷದ ಲೈಸನ್ಸ್ ಅವಧಿಯ ಮೊತ್ತವನ್ನು ಟೆಲಿಕಾಂ ಸಂಸ್ಥೆಗಳು ಪಾವತಿಸಬೇಕಾಗಿದೆ.
ಇದರ ಪರಿಣಾಮ ಟೆಲಿಕಾಂ ಕಂಪನಿಗಳಾದ ಐಡಿಯಾ ಸೆಲ್ಯುಲಾರ್ (ಶೇ 3.31), ಎಂಟಿಎನ್ನೆಲ್ (ಶೇ 0.99), ಭಾರ್ತಿ ಏರ್ ಟೆಲ್ (ಶೇ 094) ಹಾಗೂ ರಿಲಯನ್ಸ್ ಕಮ್ಯೂನಿಕೇಷನ್ (ಶೇ 0.40) ಷೇರುಗಳು ಬಿಎಸ್ ಇಯಲ್ಲಿ ಮಧ್ಯಾಹ್ನ 12 ಗಂಟೆಗೆ ಕುಸಿದಿತ್ತು.
ಇದೇ ರೀತಿ 2.5 Mhzಗೂ ಮೇಲ್ಪಟ್ಟ ತರಂಗಗುಚ್ಛ ಹೊಂದಿರುವ ಸಿಡಿಎಂಎ ತಂತ್ರಜ್ಞಾನ ಮೂಲಕ ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಗೂ ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ.
ಈ ಸೂಚನೆಯಿಂದ ರಿಲಯನ್ಸ್ ಸಂಸ್ಥೆಗೆ ಭಾರಿ ಹೊಡೆತ ಬೀಳಲಿದೆ. ಸುಮಾರು 9,906 ಕೋಟಿ ರು ಶುಲ್ಕ ಪಾವತಿಸಬೇಕಾಗುತ್ತದೆ. ಭಾರ್ತಿ ಏರ್ ಟೆಲ್ ಸಂಸ್ಥೆ 4,400 ಕೋಟಿ ರು, ವೋಡಾಫೋನ್ ಸಂಸ್ಥೆ 2,836 ಕೋಟಿ ರು ಹಾಗೂ ಐಡಿಯಾ ಸೆಲ್ಯುಲಾರ್ 2,499 ಕೋಟಿ ರು ಪಾವತಿಸಬೇಕಾಗಿದೆ.
4.4 Mhz ತರಂಗಗುಚ್ಛಕ್ಕೂ ಮೇಲ್ಪಟ್ಟ ಸೇವೆಗೆ ಒಂದು ಬಾರಿಗೆ ಶುಲ್ಕ ಪಾವತಿಸಲು ಸಾಧ್ಯವಾಗದ ಟೆಲಿಕಾಂ ಸಂಸ್ಥೆಗಳು ಸೇವೆಯನ್ನು ವಾಪಾಸ್ ಮಾಡಬೇಕಾಗುತ್ತದೆ ಎಂದು EGoM ಎಚ್ಚರಿಸಿದೆ.


Click it and Unblock the Notifications