ಇನ್ಫೋಸಿಸ್ Q2 ಲಾಭವಿದ್ದರೂ ಷೇರು ಕುಸಿತ ಏಕೆ?

ಇನ್ಫೋಸಿಸ್ Q2 ಲಾಭವಿದ್ದರೂ ಷೇರು ಕುಸಿತ ಏಕೆ?
Infosys: Quotes, News
BSE 1315.50BSE Quote3.1 (-0.24%)
NSE 1314.60NSE Quote4.1 (-0.31%)
ಬೆಂಗಳೂರು, ಅ.12 ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಶೇ 3.4ರಂತೆ 2,369 ಕೋಟಿ ರು.ನಷ್ಟು ನಿವ್ವಳ ಲಾಭ ಬಂದಿದೆ. ಸಂಸ್ಥೆಯ ಆದಾಯ ಶೇ 2.5ರಷ್ಟು ಏರಿಕೆ ಕಂಡು 9,858 ಕೋಟಿ ರು ಗಳಿಸಿದೆ.

ಆದರೆ, Year-on-Year ನಲ್ಲಿ 7.343 ಬಿಲಿಯನ್ ಡಾಲರ್ ಆದಾಯ ನಿರೀಕ್ಷೆ ಹೊತ್ತಿದ್ದ ಇನ್ಫೋಸಿಸ್ Q2 ತ್ರೈಮಾಸಿಕ ವರದಿ ಹೂಡಿಕೆದಾರರಿಗೆ ನಿರಾಶೆ ಮೂಡಿಸಿದೆ. ಹೀಗಾಗಿ ಲಾಭದ ನಡುವೆಯೂ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. ಇದಕ್ಕೆ 5 ಪ್ರಮುಖ ಕಾರಣಗಳಿದೆ.

1. ಲಾಭವಿದ್ದರೂ ಮಾರಾಟ ಕಮ್ಮಿಯಾಗಿದೆ. ಜೂನ್ ನಲ್ಲಿ 9,616 ಕೋಟಿ ರು ಮಾರಾಟ ಹಾಗೂ 2289 ಕೋಟಿ ರು ನಿವ್ವಳ ಲಾಭ ಬಂದಿತ್ತು, ಈ ಬಾರಿ 9,900 ಕೋಟಿ ರು ನಿರೀಕ್ಷೆಯಿತ್ತು ಆದರೆ, 9,860 ಕೋಟಿ ರು ಗಳಿಸಲಾಗಿದೆ.

2. ಡಾಲರ್ ಗಳಿಕೆಯಲ್ಲಿ 1806 ಮಿಲಿಯನ್ ಡಾಲರ್ ನಿರೀಕ್ಷೆಯಿತ್ತು. ಆದರೆ, 1797 ಮಿಲಿಯನ್ ಡಾಲರ್ ಗಳಿಕೆಯಾಗಿದೆ. ಜೂನ್ ನಲ್ಲಿ 1752 ಮಿಲಿಯನ್ ಡಾಲರ್ ಗಳಿಸಿತ್ತು.

3. Earning per share ನಿರೀಕ್ಷೆ ಮಟ್ಟಕ್ಕಿಂತ ಕುಸಿತ ಕಂಡಿದೆ. ಜೂನ್ ತ್ರೈಮಾಸಿಕದಲ್ಲಿ 166.46 ರು ನಿರೀಕ್ಷಿತ ಮುನ್ಸೂಚನೆ ಸಿಕ್ಕಿತ್ತು. ಅದರೆ, 2013ರಲ್ಲಿ 160.61ಕ್ಕೆ ಇಳಿದಿದೆ.

4. ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ವಿ ಬಾಲಕೃಷ್ಣನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ. ಹಣಕಾಸು ವಿಭಾಗದ ಉಪಾಧ್ಯಕ್ಷ ರಾಜೀವ್ ಬನ್ಸಾಲ್ ಆಯ್ಕೆ ಷೇರಿನ ಪರಿಣಾಮ ಬೀರಲಿದೆ ಎಂದು ಆಂಬಿಕ್ ಕ್ಯಾಪಿಟಲ್ ನ ಅಂಕುರ್ ಹೇಳಿಕೆ.

5. ಉದ್ಯೋಗಿಗಳಿಗೆ ಶೇ 6 ರಿಂದ 8 ರಷ್ಟು ಸಂಬಳ ಏರಿಕೆ ಮಾಡಿರುವುದು margin ಮೇಲೆ ಪರಿಣಾಮ ಬೀರಲಿದೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯಲ್ಲಿನ ಏರುಪೇರು ಭಾರತದ ಐಟಿ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಇನ್ಫೋಸಿಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಎಸ್ ಡಿ ಶಿಬುಲಾಲ್ ಹೇಳಿದ್ದಾರೆ.

'ನಾವು ನಮ್ಮ ಸಂಸ್ಥೆ ಉದ್ಯೋಗಿಗಳ ಸಂಬಳ ಏರಿಕೆ ಮಾಡಿದ್ದೇವೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಹಣ ತೊಡಗಿಸಿದ್ದೇವೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಫಲಿತಾಂಶ ನಿರೀಕ್ಷಿಸಲಾಗಿದೆ' ಎಂದು ಶಿಬುಲಾಲ್ ಹೇಳಿದರು.

ಪ್ರತಿ ಈಕ್ವಿಟಿ ಷೇರಿನ ಮೇಲೆ 15 ರು ಗಳ ಮಧ್ಯಂತರ ಡಿವಿಡೆಂಡ್ ಅನ್ನುಇನ್ಫೋಸಿಸ್ ಬೋರ್ಡ್ ಘೋಷಿಸಿದೆ.

Q2 ತ್ರೈಮಾಸಿಕ ವರದಿ ನಿರಾಶೆ ಮೂಡಿಸುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ 2,349.5 ರು ನಂತೆ ಶೇ 7.19 ರಷ್ಟು ಕುಸಿತ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+