ಐಸಿಐಸಿಐ ಆಸೆಗೆ ಕರ್ಣಾಟಕ ಬ್ಯಾಂಕ್ ತಣ್ಣೀರು

ಐಸಿಐಸಿಐ ಆಸೆಗೆ ಕರ್ಣಾಟಕ ಬ್ಯಾಂಕ್ ತಣ್ಣೀರು
Karnataka Bank: Quotes, News
BSE 269.05BSE Quote2.75 (-1.02%)
NSE 269.35NSE Quote2.5 (-0.93%)
ICICI Bank: Quotes, News
BSE 1256.00BSE Quote16.8 (-1.34%)
NSE 1256.40NSE Quote16.3 (-1.30%)
ಮಂಗಳೂರು, ಅ.16: ಮಂಗಳೂರು ಮೂಲದ ಪ್ರಮುಖ ಬ್ಯಾಂಕ್ ಕರ್ಣಾಟಕ ಬ್ಯಾಂಕ್ ಅನ್ನು ಐಸಿಐಸಿಐ ಖರೀದಿಸಲಿದೆ ಎಂಬ ಸುದ್ದಿಯನ್ನು ಬ್ಯಾಂಕ್ ಕರ್ಣಾಟಕ ಬ್ಯಾಂಕ್ ನ ಸಿಇಒ ಪಿ. ಜಯರಾಮ ಭಟ್ ಮಂಗಳವಾರ (ಅ.16) ಅಲ್ಲಗೆಳೆದಿದ್ದಾರೆ.

ಸುದ್ದಿ ಹಬ್ಬುತ್ತಿದ್ದಂತೆ, ಬಿಎಸ್ ಇನಲ್ಲಿ ಕರ್ಣಾಟಕ ಬ್ಯಾಂಕ್ ಷೇರು ಗಳು ಮಧ್ಯಾಹ್ನ 1 ಗಂಟೆಗೆ 122.50 ರು ನಂತೆ ಶೇ 1.41 ರಷ್ಟು ಏರಿಕೆ ಕಂಡಿತ್ತು. ಎನ್ ಎಸ್i ಇನಲ್ಲಿ 122.45 ರು ನಂತೆ ಶೇ 1.45 ರಷ್ಟು ಏರಿತ್ತು.

ಇದೇ ವೇಳೆ ಐಸಿಐಸಿಐ ಬ್ಯಾಂಕಿನ ಷೇರುಗಳು ಬಿಎಸ್ ಇನಲ್ಲಿ 1056.80 ರು ನಂತೆ ಶೇ 0.35 ರಷ್ಟು ಏರಿತ್ತು. ಎನ್ ಎಸ್ ಇನಲ್ಲೂ 1057 ರು ನಂತೆ 0.34 ರಷ್ಟು ಏರಿದೆ.

ಕರ್ಣಾಟಕ ಬ್ಯಾಂಕ್ ನ್ನು ಖರೀದಿಸಲು ಐಸಿಐಸಿಐ ಬ್ಯಾಂಕ್ ಮುಂದಾಗಿದ್ದು, ಈ ಬಗ್ಗೆ ರಿಸರ್ವ್ ಬ್ಯಾಂಕ್ ನಲ್ಲಿ ಪ್ರಸ್ತಾವನೆ ಸಲ್ಲಿಸಿದೆ ಎಂದು ಆಂಗ್ಲ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಇದಕ್ಕೆ ಸ್ಪಷ್ಟನೆ ನೀಡಿರುವ ಕರ್ಣಾಟಕ ಬ್ಯಾಂಕ್ ಆಡಳಿತ ಮಂಡಳಿ ಈ ರೀತಿ ಯಾವುದೇ ಪ್ರಕ್ರಿಯೆ ನಡೆದಿಲ್ಲ. ನಮ್ಮ ಬ್ಯಾಂಕ್ ಉತ್ತಮ ಕಾರ್ಯ ನಿರ್ವಹಣೆ ಹೊಂದಿದೆ.

2015ರ ಹೊತ್ತಿಗೆ ಸಂಸ್ಥೆ ಔದ್ಯಮಿಕ ಟರ್ನ್ ಓವರ್ ಅನ್ನು 1 ಲಕ್ಷ ಕೋಟಿ ರು ಗೆ ಏರಿಸುವ ಗುರಿ ಹೊಂದಿದೆ ಎಂದು ಬ್ಯಾಂಕ್ ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಪಿ. ಜಯರಾಂ ಭಟ್ ಹೇಳಿದ್ದಾರೆ.

ಜೂನ್ 2012ರ ಎಣಿಕೆಗೆ ಕರ್ಣಾಟಕ ಬ್ಯಾಂಕ್ ಟರ್ನ್ ಓವರ್ 55,000 ಕೋಟಿ ಇದ್ದು ಮಾರ್ಚ್ 2015ರ ವೇಳೆಗೆ 1 ಲಕ್ಷ ಕೋಟಿ ರುಗೆ ಏರಿಕೆ ಮಾಡುವ ಗುರಿ ಹೊಂದಿದೆ.

ಕರ್ನಾಟಕ ಬ್ಯಾಂಕ್ ಕೆಬಿಎಲ್ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಿದ್ದು ಜನಪ್ರಿಯತೆ ಗಳಿಸಿದೆ.ಮುಂದಿನ ಆರು ತಿಂಗಳಲ್ಲಿ ಸುಮಾರು ಒಂದು ಲಕ್ಷ ಗ್ರಾಹರು ಮೊಬೈಲ್ ಬ್ಯಾಂಕಿಂಗ್ ಸೇವೆಯ ಅನುಕೂಲ ಪಡೆಯಲಿದ್ದಾರೆ ಎಂಬ ನಿರೀಕ್ಷೆಯಿದೆ ಎಂದು ಜಯರಾಂ ಭಟ್ ತಿಳಿಸಿದರು.

ಕೆಲ ತಿಂಗಳ ಹಿಂದೆ ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡಾ ಕರ್ಣಾಟಕ ಬ್ಯಾಂಕ್ ಖರೀದಿಗೆ ಮುಂದಾಗಿದೆ ಎಂಬ ಸುದ್ದಿ ಹಬ್ಬಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+