ಬುಧವಾರ ಬಿಎಸ್ ಇನಲ್ಲಿ ಮಧ್ಯಾಹ್ನ 3.50 ರ ಸುಮಾರಿಗೆ ಮೈಂಡ್ ಟ್ರೀ ಷೇರುಗಳು ಶೇ 4.23 ರಂತೆ 648.10 ರು ಗೆ ಇಳಿದಿತ್ತು. ಎನ್ ಎಸ್ ಇನಲ್ಲಿ ಶೇ 4.54 ರಂತೆ 646.95 ರು ಗೆ ಕುಸಿದಿತ್ತು.
ಸ್ಪಷ್ಟವಾದ ಆದಾಯ ಗಳಿಕೆ ಯೋಜನೆಯಲ್ಲಿದ ಕಾರಣ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಆದಾಯದಲ್ಲಿ ಶೇ 19 ರಷ್ಟು ಕುಸಿತ ಕಂಡಿತ್ತು.
ಸೆಪ್ಟೆಂಬರ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 72.2 ಕೋಟಿ ರು ಮಾತ್ರ ನಿವ್ವಳ ಆದಾಯ ದಾಖಲಿಸಿದೆ. ಕಳೆದ ತ್ರೈಮಾಸಿಕದಲ್ಲಿ ಇದೇ ಅವಧಿಯಲ್ಲಿ 89 ಕೋಟಿ ರು ಆದಾಯ ಬಂದಿತ್ತು.
ರುಪಾಯಿ ಮೌಲ್ಯದಲ್ಲಿ ಶೇ 5.9 ರಂತೆ 596.3 ಕೋಟಿ ರು ಏರಿಕೆ ಕಂಡಿದ್ದರೆ, ಡಾಲರ್ ಮೌಲ್ಯದಲ್ಲಿ ಆದಾಯ ಶೇ 1.7 ರಂತೆ 107.3 ಯುಎಸ್ ಡಾಲರ್ ನಷ್ಟು ಏರಿಕೆಯಾಗಿದೆ. ಮೈಂಡ್ ಟ್ರೀ ಸಂಸ್ಥೆ 3 ರು ಪ್ರತಿ ಈಕ್ವಿಟಿ ಷೇರಿನಂತೆ ಮಧ್ಯಂತರ ಡಿವಿಡೆಂಡ್ ಘೋಷಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 400 ಮಿಲಿಯನ್ ಡಾಲರ್ ಮೌಲ್ಯದ ಮೈಂಡ್ ಟ್ರೀ ಸಂಸ್ಥೆ ಶೇ 11 ರಿಂದ 14 ರಷ್ಟು ಪ್ರಗತಿ ಸಾಧಿಸಲಿದೆ ಎಂದು ನ್ಯಾಸ್ ಕಾಮ್ ಅಂದಾಜಿಸಿದೆ. ಭಾರತದಲ್ಲಿ ಮೈಂಡ್ ಟ್ರೀ ಷೇರುಗಳು ಉತ್ತಮ ವ್ಯವಹಾರ ಮಾಡುತ್ತಿದ್ದು, ಬಿಎಸ್ ಇನಲ್ಲಿ 1.46 ಲಕ್ಷ ಷೇರುಗಳು ಕೈಬದಲಾಯಿಸಿದೆ. ಹಾಗೂ ಎನ್ ಎಸ್ ಇನಲ್ಲಿ ಸುಮಾರು 4 ಲಕ್ಷ ಷೇರುಗಳು ವಹಿವಾಟು ನಿರತವಾಗಿತ್ತು ಎಂದು ಸಂಸ್ಥೆ ಮಾಹಿತಿ ನೀಡಿದೆ.


Click it and Unblock the Notifications

