
Q3 ಫಲಿತಾಂಶ ಕೈಕೊಟ್ಟ ಹಿನ್ನೆಲೆಯಲ್ಲಿ ನಾಸ್ಡಾಕ್ ನಲ್ಲಿ ಎರಡು ಗಂಟೆಗಳ ಕಾಲ ತನ್ನ ವಹಿವಾಟು ನಿಲ್ಲಿಸಿದ ಬೇಕಾದ ಪರಿಸ್ಥಿತಿಯನ್ನು ಗೂಗಲ್ ಎದುರಿಸಿದೆ. 695 ಡಾಲರ್ ನಂತೆ ಶೇ 8.01 ರಂತೆ ಕುಸಿತಗೊಂಡು ನಾಸ್ಡಾಕ್ ನಲ್ಲಿ ದಿನದ ವಹಿವಾಟು ಮುಗಿಸಿದೆ.
ಮೂರನೇ ತ್ರೈಮಾಸಿಕದಲ್ಲಿ ಗೂಗಲ್ 2.18 ಬಿಲಿಯನ್ ಡಾಲರ್ ಅಥವಾ 6.53 ಯುಎಸ್ ಡಿ ಪ್ರತಿ ಷೇರಿನಂತೆ ನಿವ್ವಳ ಲಾಭ ದಾಖಲಿಸಿದೆ. ಆದರೆ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 2.73 ಬಿಲಿಯನ್ ಡಾಲರ್ ಅಥವಾ 8.33 ಯುಎಸ್ ಡಿ ಪ್ರತಿ ಷೇರಿನಂತೆ ಲಾಭ ಗಳಿಸಿತ್ತು. ಶೇ 20 ರಷ್ಟು ಕುಸಿತ ಕಂಡಿರುವುದು ಆತಂಕಕಾರಿಯಾಗಿದೆ.
ಆದರೆ, ಗೂಗಲ್ ಸಂಸ್ಥೆ ಆದಾಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 45 ರಷ್ಟು ಏರಿಕೆ ಕಂಡು 14.1 ಬಿಲಿಯನ್ ಡಾಲರ್ ದಾಖಲಿಸಿದೆ.
ಸೆಪ್ಟೆಂಬರ್ 30,2012ರ ಗಣತಿಯಂತೆ ಗೂಗಲ್ ಸಂಸ್ಥೆ ಉದ್ಯೊಗಿಗಳ ಸಂಖ್ಯೆ ಜಾಗತಿಕವಾಗಿ 53,546 (ಫುಲ್ ಟೈಮ್) ರಷ್ಟಿದೆ. ಇವರಲ್ಲಿ 36,118 ಗೂಗಲ್ ಬಿಸಿನೆಸ್ ಹಾಗೂ 17,428 ಮೋಟೋರೊಲಾ ಬಿಸಿನೆಸ್ ವಿಭಾಗದಲ್ಲಿದ್ದಾರೆ) . ಜೂನ್ 30, 2012 ರಲ್ಲಿ ಫುಲ್ ಟೈಮ್ ಉದ್ಯೋಗಿಗಳ ಸಂಖ್ಯೆ 54,604 ನಷ್ಟಿತ್ತು.


Click it and Unblock the Notifications