ನಿರೀಕ್ಷಿತ: ಸತತವಾಗಿ ಕಿಂಗ್ ಫಿಷರ್ ಷೇರು ಇಳಿಮುಖ

ನಿರೀಕ್ಷಿತ: ಸತತವಾಗಿ ಕಿಂಗ್ ಫಿಷರ್ ಷೇರು ಇಳಿಮುಖ
ಮುಂಬೈ, ಅ.22: ಕಿಂಗ್ ಫಿಷರ್ ವಿಮಾನಯಾನ ಸಂಕಷ್ಟ ಮುಂದುವರೆದಿದೆ. ಡಿಜಿಸಿಎ ಕಿಂಗ್ ಫಿಷರ್ ಸೇವೆ ಅಮಾನತು ಆದೇಶ ಹೊರಡಿಸುತ್ತಿದ್ದಂತೆ, ಸೋಮವಾರ (ಅ.1) ಕಂಪನಿಯ ಷೇರುಗಳು ಶೇ 5 ರಷ್ಟು ಕುಸಿದಿದೆ.

ಬಿಎಸ್ ಇಯಲ್ಲಿ ಸೋಮವಾರ (ಅ.22) ರಂದು ಮಧ್ಯಾಹ್ನ 12.25ರ ಸುಮಾರಿಗೆ 10.90 ರು ನಂತೆ ಶೇ-4.80 ಕುಸಿದಿದೆ. ಎನ್ ಎಸ್ ಇನಲ್ಲಿ 10.85 ರು ನಂತೆ ಶೇ-4.85 ರಷ್ಟು ಕುಸಿತ ಕಂಡಿದೆ. ಅಕ್ಟೋಬರ್ ಮೊದಲ ಬಾರಿಗೆ 15 ರು ನಷ್ಟಿದ್ದ ಷೇರು ಮೌಲ್ಯ ದಿನೇದಿನೇ ಕುಸಿಯುತ್ತಿದೆ.

ಸುಮಾರು 7000 ಕೋಟಿ ಸಾಲ ಹೊತ್ತುಕೊಂಡಿರುವ ಕಿಂಗ್ ಫಿಷರ್ ಸಂಸ್ಥೆ ವಿಮಾನಯಾನ ಸ್ಥಗಿತಗೊಂಡಿದೆ. ನಾಗರಿಕ ವಿಮಾನಯಾನ ಸಚಿವಾಲಯ ಕಿಂಗ್ ಫಿಷರ್ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ.

ಬಿಐಎಎಲ್ ನಲ್ಲಿ ಕಿಂಗ್ ಫಿಷರ್ ಗೆ ಸೇರಿದ ಸುಮಾರು 400ಕ್ಕೂ ಅಧಿಕ ಜನ ಕೆಲಸವಿಲ್ಲದೆ ಸುಮ್ಮನೆ ಕುಳಿತ್ತಿದ್ದಾರೆ. ಆನ್ ಲೈನ್ ಮುಂಗಡ ಟಿಕೆಟ್ ಬುಕ್ಕಿಂಗ್ ನಿಲ್ಲಿಸಲಾಗಿದೆ.

ವಿಮಾನಯಾನ ಕ್ಷೇತ್ರದಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎಂದ ಮೇಲೆ ಇದೇ ಮೊದಲ ಬಾರಿಗೆ ವಿಜಯ್ ಮಲ್ಯ ಒಡೆತನದ ಕಂಪನಿಗಳ ವಾರ್ಷಿಕ ಸಭೆ ನಡೆದಿದ್ದು ಮಹತ್ವದ ಬೆಳವಣಿಗೆಯಾಗಿತ್ತು.

ಆರೇಳು ತಿಂಗಳು ಸಂಬಳವಿಲ್ಲದೆ ಪೈಲಟ್ ಗಳ ಮುಷ್ಕರ ಹೂಡಿದ ಪರಿಣಾಮ ಕಿಂಗ್ ಫಿಷರ್ ಹಾರಾಟ ಮತ್ತೆ ಸ್ಥಗಿತವಾಗಿತ್ತು. ಮ್ಯಾನೇಜ್ಮೆಂಟ್ ಹಾಗೂ ಸಿಬ್ಬಂದಿಗಳ ನಡುವೆ ಮಾತುಕತೆ ಯಶಸ್ವಿಯಾಗುವ ಹೊತ್ತಿಗೆ ಡಿಜಿಸಿಎನಿಂದ ನೋಟಿಸ್ ಜಾರಿಗೊಂಡಿದ್ದು ಕಿಂಗ್ ಫಿಷರ್ ಗೆ ಭಾರಿ ಹೊಡೆತ ಕೊಟ್ಟಿದೆ.

ಡಿಯಾಜಿಯೋ ಸಂಸ್ಥೆ ಯುನೈಟೆಡ್ ಸ್ಪಿರೀಟ್ಸ್ ಹಾಗೂ ಯುಬಿ ಸಮೂಹದ ಷೇರುಗಳಲ್ಲಿ ಪಾಲು ಹೊಂದುವ ಮೂಲಕ ಕಿಂಗ್ ಫಿಷರ್ ಸಾಲದ ಭಾರ ಇಳಿಸುವ ಪ್ರಕ್ರಿಯೆ ಬಗ್ಗೆ ಇನ್ನೂ ಸ್ಪಷ್ಟಣೆ ಸಿಕ್ಕಿಲ್ಲ.

ಸಾಲ ಕೊಟ್ಟಿರುವ 17ಕ್ಕೂ ಅಧಿಕ ಬ್ಯಾಂಕುಗಳ ಜೊತೆ ಅಕ್ಟೋಬರ್ ಕೊನೆವಾರದಲ್ಲಿ ಮಾತುಕತೆ ನಡೆಸಿ ಎಲ್ಲಾ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಸಂಸ್ಥೆಯ ಷೇರುದಾರರಿಗೆ ವಿಜಯ್ ಮಲ್ಯ ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+