ಟೆಲಿಕಾಂ ಷೇರುಗಳು ಥಕಥಕ ಥೈ ಕುಣಿತ

ಟೆಲಿಕಾಂ ಷೇರುಗಳು ಥಕಥಕ ಥೈ ಕುಣಿತ
Bharti Airtel: Quotes, News
BSE 1971.15BSE Quote15.4 (-0.78%)
NSE 1968.00NSE Quote11.2 (-0.57%)
ಬೆಂಗಳೂರು, ನ.8: ನಿರೀಕ್ಷೆಯಂತೆ ಟೆಲಿಕಾಂ ಸಂಸ್ಥೆಗಳ ಷೇರುಗಳು ಗುರುವಾರ(ನ.8) ಷೇರುಪೇಟೆಯಲ್ಲಿ ಭರ್ಜರಿಯಾಗಿ ಸದ್ದು ಮಾಡಿದೆ. ಕೇಂದ್ರ ಸಚಿವರ ಸಮೂಹ (EGoM) ಟೆಲಿಕಾಂ ಕಂಪನಿಗಳಿಗೆ ನೀಡಿದ್ದ ಶಾಕಿಂಗ್ ನ್ಯೂಸ್ ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂ‌ಚಿಸಿದೆ.

4.4 ಮೆಗಾ ಹರ್ಡ್ಜ(Mhz) ಮೇಲ್ಪಟ್ಟ 2ಜಿ ತರಂಗಗುಚ್ಛ ಹೊಂದಿರುವ ಜಿಎಸ್ ಎಂ ಸೇವೆ ನೀಡಿರುವ ಎಲ್ಲಾ ಸಂಸ್ಥೆಗಳು ಒಂದೇ ಬಾರಿಗೆ ಶುಲ್ಕ ಪಾವತಿಸತಕ್ಕದ್ದು ಎಂದು Empowered Group of Ministers (EGoM) ಆದೇಶ ಹೊರಡಿಸಿತ್ತು. 20 ವರ್ಷದ ಲೈಸನ್ಸ್ ಅವಧಿಯ ಮೊತ್ತವನ್ನು ಟೆಲಿಕಾಂ ಸಂಸ್ಥೆಗಳು ಪಾವತಿಸಬೇಕಾಗಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಹಾಗೂ ಎಂಟಿಎನ್ನೆಲ್ ಸಂಸ್ಥೆಗಳಿಗೆ ಕನಿಷ್ಠವೆಂದರೂ 30,000 ಕೋಟಿ ರು ಲಭಿಸಲಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಈ ಸುದ್ದಿ ಹೊರಬಿದ್ದಿದ್ದಾಗ ಷೇರು ಮಾರುಕಟ್ಟೆಯಲ್ಲಿ ಟೆಲಿಕಾಂ ಷೇರುಗಳು ನೆಲಕಚ್ಚಿದ್ದವು.

ಅದರೆ, ಗುರುವಾರ ಟೆಲಿಕಾಂ ಷೇರುಗಳು ಮೇಲಕ್ಕೇರಿದೆ. ಐಡಿಯಾ ಸೆಲ್ಯುಲಾರ್ (ಶೇ 2.46), ಎಂಟಿಎನ್ನೆಲ್ (ಶೇ 0.99), ಭಾರ್ತಿ ಏರ್ ಟೆಲ್ (ಶೇ 1.46) ಹಾಗೂ ರಿಲಯನ್ಸ್ ಕಮ್ಯೂನಿಕೇಷನ್ (ಶೇ 0.43) ಷೇರುಗಳು ಬಿಎಸ್ ಇಯಲ್ಲಿ ಏರಿಕೆ ಕಂಡಿದೆ.

ಆದೇಶದ ಪ್ರಕಾರ 2.5 Mhzಗೂ ಮೇಲ್ಪಟ್ಟ ತರಂಗಗುಚ್ಛ ಹೊಂದಿರುವ ಸಿಡಿಎಂಎ ತಂತ್ರಜ್ಞಾನ ಮೂಲಕ ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಗೂ ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ.

ಈ ಸೂಚನೆಯಿಂದ ರಿಲಯನ್ಸ್ ಸಂಸ್ಥೆಗೆ ಭಾರಿ ಹೊಡೆತ ಬೀಳಲಿದೆ. ಸುಮಾರು 9,906 ಕೋಟಿ ರು ಶುಲ್ಕ ಪಾವತಿಸಬೇಕಾಗುತ್ತದೆ. ಭಾರ್ತಿ ಏರ್ ಟೆಲ್ ಸಂಸ್ಥೆ 4,400 ಕೋಟಿ ರು, ವೋಡಾಫೋನ್ ಸಂಸ್ಥೆ 2,836 ಕೋಟಿ ರು ಹಾಗೂ ಐಡಿಯಾ ಸೆಲ್ಯುಲಾರ್ 2,499 ಕೋಟಿ ರು ಪಾವತಿಸಬೇಕಾಗಿದೆ.

4.4 Mhz ತರಂಗಗುಚ್ಛಕ್ಕೂ ಮೇಲ್ಪಟ್ಟ ಸೇವೆಗೆ ಒಂದು ಬಾರಿಗೆ ಶುಲ್ಕ ಪಾವತಿಸಲು ಸಾಧ್ಯವಾಗದ ಟೆಲಿಕಾಂ ಸಂಸ್ಥೆಗಳು ಸೇವೆಯನ್ನು ವಾಪಾಸ್ ಮಾಡಬೇಕಾಗುತ್ತದೆ ಎಂದು EGoM ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+