ವಿಜಯ್ ಮಲ್ಯಗೆ ಸ್ಪಿರಿಟ್ ತುಂಬಿದ ಷೇರು ಏರಿಕೆ

ವಿಜಯ್ ಮಲ್ಯಗೆ ಸ್ಪಿರಿಟ್ ತುಂಬಿದ ಷೇರು ಏರಿಕೆ
United Spirits: Quotes, News
BSE 1328.70BSE Quote33.8 (-2.54%)
NSE 1325.60NSE Quote37.8 (-2.85%)
United Breweries: Quotes, News
BSE 1457.70BSE Quote12.55 (-0.86%)
NSE 1458.60NSE Quote11 (-0.75%)
ಬೆಂಗಳೂರು, ನ9: ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಹಾಗೂ ಯುನೈಟೆಡ್ ಬ್ರೂವರೀಸ್ ಷೇರುಗಳು ಶುಕ್ರವಾರ (ನ.9) ಏರಿಕೆ ಕಾಣುತ್ತಲೇ ಇದೆ.

ಯುನೈಟೆಡ್ ಸ್ಪಿರೀಟ್ಸ್ ಹಾಗೂ ಡಿಯಾಜಿಯೋ ಸಂಸ್ಥೆ ನಡುವೆ ಷೇರು ಮಾರಾಟ ಒಪ್ಪಂದ ಬಗ್ಗೆ ಅಧಿಕೃತವಾಗುವ ಹೊರ ಬೀಳಲಿದೆ.ಯುಬಿ ಸಮೂಹದ ಷೇರುಗಳು ಒಟ್ಟಾರೆ ಶೇ 6 ರಷ್ಟು ಏರಿಕೆ ಕಂಡಿದೆ.

ಬಿಎಸ್ ಇನಲ್ಲಿ ಶುಕ್ರವಾರ ಬೆಳಗ್ಗೆ 11.00ರ ಸುಮಾರಿಗೆ ಯುನೈಟೆಡ್ ಸ್ಪಿರೀಟ್ಸ್ ಲಿಮಿಟೆಡ್ ಷೇರುಗಳು 1377.35 ರುನಂತೆ ಶೇ 2.44ರಷ್ಟು ಏರಿಕೆ ಕಂಡಿದೆ. ಈ ವರೆಗೂ 34.10 ರು ಮೌಲ್ಯ ಹೆಚ್ಚಿಸಿಕೊಂಡಿದೆ.

ಎನ್ ಎಸ್ ಇನಲ್ಲಿ ಇದೇ ವೇಳೆ ಯುನೈಟೆಡ್ ಸ್ಪಿರೀಟ್ಸ್ ಲಿಮಿಟೆಡ್ ಷೇರುಗಳು 1376.15 ರುನಂತೆ ಶೇ 2.43 ರಷ್ಟು ಏರಿಕೆ ಕಂಡಿದೆ. ಇಲ್ಲೂ ಕೂಡಾ 32.70 ರು ಹೆಚ್ಚಿಕೆ ಗಳಿಕೆಯಾಗಿದೆ.

ಯುನೈಟೆಡ್ ಬ್ರೂವರೀಸ್ ಷೇರುಗಳು ಬಿಎಸ್ ಇನಲ್ಲಿ 804.35 ರು ನಂತೆ ಶೇ 1.94 ರಷ್ಟು ಏರಿಕೆ ಕಂಡಿದೆ. ಎನ್ ಎಸ್ ಇನಲ್ಲಿ ಇದೇ ಮೊದಲ ಬಾರಿಗೆ 804.00 ರು ನಂತೆ ಶೇ 2.00 ರಷ್ಟು ಇಳಿಕೆ ಕಂಡಿದೆ.

ಲಭ್ಯ ಮಾಹಿತಿ ಪ್ರಕಾರ ಡಿಯಾಜಿಯೋ ಕಂಪನಿ ಯುನೈಟೆಡ್ ಸ್ಪಿರೀಟ್ಸ್ ನಲ್ಲಿ ಸುಮಾರು ಶೇ 51 ರಷ್ಟು ಪಾಲು ಹೊಂದಲಿದೆ. ಇದರ ಮೌಲ್ಯ ಸುಮಾರು 1 ಬಿಲಿಯನ್ ಯುಎಸ್ ಡಾಲರ್ ನಿಂದ 2 ಬಿಲಿಯನ್ ಯುಎಸ್ ಡಾಲರ್ ನಷ್ಟಿದೆ ಎಂದು ಅಂದಾಜಿಸಲಾಗಿದೆ.

ಯುನೈಟೆಡ್ ಸ್ಪಿರೀಟ್ಸ್ ವಿಶ್ವದ ಎರಡನೇ ಅತಿದೊಡ್ಡ ಸ್ಪಿರಿಟ್ ಉತ್ಪಾದಕ ಸಂಸ್ಥೆಯಾಗಿದ್ದು, ಸಿಗ್ನೇಚರ್, ಬ್ಯಾಗ್ ಪೈಪರ್, ಅಂಟಿಕ್ಯುಟಿ, ರಾಯಲ್ ಚಾಲೆಂಜರ್ಸ್ ಬ್ರ್ಯಾಂಡ್ ಗಳನ್ನು ಹೊಂದಿದೆ.


ಬದಲಾದ ಯುಬಿ ಹಣೆಬರಹ:ಸುಮಾರು 6 ಕಂಪನಿಗಳ ಸಮೂಹ ಹೊಂದಿರುವ ಯುನೈಟೆಡ್ ಬ್ರಿವೆರೆಸ್(UB)ಸಂಸ್ಥೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯ 22,850 ಕೋಟಿ ರೂ ತೂಗುತ್ತದೆ. 2010-11ರಲ್ಲಿ 1,027 ಕೋಟಿ ರೂ ನಷ್ಟ ಅನುಭವಿಸಿದ್ದ ಕಿಂಗ್ ಫಿಷರ್ ಒಟ್ಟಾರೆ 7,057.08 ಕೋಟಿ ಸಾಲ ತಲೆ ಮೇಲೆ ಹೊತ್ತುಕೊಂಡಿದೆ.

21,800 ಕೋಟಿ ರೂ ಸಮೂಹದ ಒಡೆಯನಾದ ಮಲ್ಯ ಅವರು ಯುಬಿ ಸಮೂಹದ ಷೇರು ಮಾರಿ ಕಿಂಗ್ ಫಿಷರ್ ಹಾರಾಟ ಸುಗಮಗೊಳಿಸುವ ಸುದ್ದಿಯೂ ಚಾಲ್ತಿಯಲ್ಲಿತ್ತು. ಇದರ ಜೊತೆಗೆ ಐಪಿಎಲ್ ನ ರಾಯಲ್ ಚಾಲೆಂಜರ್ಸ್ ತಂಡವನ್ನು ಮಾರಾಟ ಮಾಡಿ ಯುನೈಟೆಡ್ ಸ್ಪಿರೀಟ್ಸ್ ಗೆ ಜೀವ ತುಂಬುತ್ತಾರೆ ಎನ್ನಲಾಗಿತ್ತು.

ಸುಮಾರು 7,000 ಕೋಟಿ ರು ಸಾಲ ಉಳಿಸಿಕೊಂಡಿರುವ ಯುನೈಟೆಡ್ ಸ್ಪಿರಿಟ್ಸ್ ಗೆ ರಿಲೀಫ್ ನೀಡಲು ಆಸ್ತಿ ಮಾರಾಟ, ಷೇರು ಮಾರಾಟಕ್ಕೆ ಕಿಂಗ್ ಮಲ್ಯ ಮುಂದಾಗಿದ್ದಾರೆ.

ಯುನೈಟೆಡ್ ಬ್ರೂವರೀಸ್ ನ ಸಾಲ ತೀರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 1,500 ಕೋಟಿ ರು ನಿಂದ 2,000 ಕೋಟಿ ಮೊತ್ತ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಹೆಚ್ಚಿತ್ತು. ಅದರೆ, ಈಗ ಯುಬಿ ಸಮೂಹ ಷೇರುಗಳನ್ನು ಕೊಳ್ಳಲು ಡಿಯಾಜಿಯೋ ಕಂಪನಿ ಮುಂದಾಗಿರುವುದು ಎಲ್ಲಾ ಸಮಸ್ಯೆಗೂ ಪರಿಹಾರ ಸಿಕ್ಕಿದ್ದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+