
ಈ ಸಾಲ ನಿಧಿ ಯೋಜನೆ (close ended debt) 366 ದಿಗಳ ಅವಧಿ ಹೊಂದಿದೆ. New Fund Offer (NFO) ದರ ಪ್ರತಿ ಯೂನಿಟ್ ಗೆ 10 ರು ನಷ್ಟಿದೆ.
ಬಂಡವಾಳ ಹೂಡಿಕೆ ಉದ್ದೇಶ: ನಿರಂತರವಾಗಿ, ನಿಯಮಿತ ಅವಧಿಯಲ್ಲಿ ಆದಾಯ ತರುವುದು ಈ ಯೋಜನೆ ಉದ್ದೇಶ.
ಸರ್ಕಾರದ ಭದ್ರತಾ ಸಾಲ ವಿಧಾನಗಳು, PSU ಹಾಗೂ ಕಾರ್ಪೊರೇಟ್ ಬಾಂಡ್ ಗಳು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಮ್ಯಾಚುರಿಟಿ ದಿನಾಂಕ ಅಥವಾ ಅದಕ್ಕೂ ಮೊದಲೇ ರಿಟರ್ನ್ಸ್ ಸಿಗಲಿದೆ. ಎರಡು ಐಚ್ಛಿಕ ಯೋಜನೆಗಳನ್ನು ಹೊಂದಿದ್ದು ಸಂಚಿತ (ಹೆಚ್ಚಾಗುತ್ತಾ ಹೋಗುವ) ಹಾಗೂ ಲಾಭಾಂಶ ಮಾದರಿ ಇದೆ.
ನಿಧಿ ಹಂಚಿಕೆ: ಈ ಯೋಜನೆಯ ಶೇ 100 ರಷ್ಟು ನಿಧಿಯನ್ನು ಸಾಲ ಹಾಗೂ ಹಣಕಾಸು ಸೆಕ್ಯುರಿಟೀಸ್ ಗಳ ಮೇಲೆ ಹೂಡಲಾಗುತ್ತೆ. ನಿವ್ವಳದ ನಿಧಿಯ ಶೇ 40 ರಷ್ಟು ಮೊತ್ತ ಸ್ಥಳೀಯ ಸುರಕ್ಷಿತಾ ಸಾಲಗಳಲ್ಲೇ ವಿಸ್ತರಣೆಗೊಳ್ಳಲಿದೆ.
ಈ ಯೋಜನೆಗೆ ಯಾವುದೇ ಆರಂಭಿಕ ಹಾಗೂ ನಿರ್ಗಮನ ಶುಲ್ಕ ಇರುವುದಿಲ್ಲ. ಬಿಎಸ್ ಇಯ ಪಟ್ಟಿಯಲ್ಲಿ ಈ ಯೋಜನೆ ಕಾಣಿಸಿಕೊಳ್ಳುವುದರಿಂದ ಗ್ರಾಹಕರು ಹೆಚ್ಚಿನ ಲಾಭ ನಿರೀಕ್ಷಿಸಬಹುದು.
ಮುಖ್ಯ ಮಾಹಿತಿ:
NFO ಆರಂಭ : ನವೆಂಬರ್ 19, 2012
NFO ಮುಕ್ತಾಯ : ನವೆಂಬರ್ 23, 2012
NFO: 10 ರು ಪ್ರತಿ ಯೂನಿಟ್ ಗೆ
ಕನಿಷ್ಠ ಅರ್ಜಿ ಶುಲ್ಕ: 5000 ರು ಹಾಗೂ ನಂತರ 10 ರ ಹತ್ತರ ಗುಣಕದಂತೆ ಲೆಕ್ಕಚಾರ
ಆಧಾರ: CRISIL ಕಡಿಮೆ ಅವಧಿ ಬಾಂಡ್ ಫಂಡ್ ಸೂಚಿ
Listing : ಬಿಎಸ್ ಇ
ವ್ಯವಸ್ಥಾಪಕ: ರಾಜೀವ್ ರಾಧಾಕೃಷ್ಣನ್
ಸಾಲ ನಿಧಿ ನಿರ್ವಹಣೆಯಲ್ಲಿ ಸುಮಾರು 25 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ಎಸ್ ಬಿಐ, ಭಾರತದ ಅತಿ ವಿಸ್ತಾರವಾದ ಜಾಲ ಹೊಂದಿರುವ ಬ್ಯಾಂಕ್ ಆಗಿದೆ. ಸುಮಾರು 5.4ಮಿಲಿಯನ್ ಹೂಡಿಕೆದಾರರನ್ನು ಹೊಂದಿರುವ ಎಸ್ ಬಿಐ, ಬಂಡವಾಳ ಹೂಡಿಕೆ ನಿರ್ವಹಣೆ ಅತಿದೊಡ್ಡ ಸಂಸ್ಥೆ ಎನಿಸಿದೆ.
ಗುಡ್ ರಿಟರ್ನ್ಸ್.ಇನ್


Click it and Unblock the Notifications