ಕಿಂಗ್ ಫಿಷರ್ ಷೇರುಗಳ ಹಾವು ಏಣಿಯಾಟ

ಕಿಂಗ್ ಫಿಷರ್ ಷೇರುಗಳ ಹಾವು ಏಣಿಯಾಟ
Kingfisher Airlines: Quotes, News
BSE 1.3600000143051147BSE Quote0 (0.00%)
NSE 1.2999999523162842NSE Quote0 (0.00%)
United Breweries: Quotes, News
BSE 1346.40BSE Quote5.3 (-0.39%)
NSE 1341.90NSE Quote0.6 (-0.04%)
ಬೆಂಗಳೂರು, ನ.21: ಸುಮಾರು 7000 ಕೋಟಿ ಸಾಲ ಹೊತ್ತುಕೊಂಡಿರುವ ಕಿಂಗ್ ಫಿಷರ್ ಸಂಸ್ಥೆ ವಿಮಾನಯಾನ ಷೇರುಗಳು ಬುಧವಾರ(ನ.21) ಹಾವು ಏಣಿಯಾಟ ಆಡಿದೆ. ಅಕ್ಟೋಬರ್ ಕೊನೆ ವಾರದಲ್ಲಿ ಉಂಟಾಗಿದ್ದ ಏರಿಳಿತ ಮತ್ತೊಮ್ಮೆ ನ.21ರಂದು ಕಂಡು ಬಂದಿತ್ತು.

ಅಕ್ಟೋಬರ್ 22 ರಂದು ಕಂಪನಿಯ ಷೇರುಗಳು ಶೇ 5 ರಷ್ಟು ಕುಸಿದಿತ್ತು. ಬುಧವಾರ ನ.21ರಂದು ಬಹುತೇಕ ದಿನ ಪೂರ್ತಿ 13.65 ರು ನಂತೆ ಶೇ 3 ರಷ್ಟು ಇಳಿಕೆ ಕಂಡಿದ್ದ ಕಿಂಗ್ ಫಿಷರ್ ಷೇರುಗಳು ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ ಕೊಂಚ ಚೇತರಿಸಿಕೊಂಡು ಅಚ್ಚರಿ ಮೂಡಿಸಿದೆ.

ಬಿಎಸ್ ಇಯಲ್ಲಿ ಬುಧವಾರ (ನ.21) ರಂದು ಸಂಜೆ 4 ಗಂಟೆ 13.54 ರು ನಂತೆ ಶೇ 0.26 ರಷ್ಟು ಏರಿದೆ. ಎನ್ ಎಸ್ ಇನಲ್ಲಿ 13.50 ರು ನಂತೆ ಶೇ 0.25 ರಷ್ಟು ಮೇಲಕ್ಕೇರಿದೆ.

ಯುಬಿ ಹೋಲ್ದಿಂಗ್ ಗೆ ಸೇರಿದ ಪ್ರಮುಖ ಕಚೇರಿ ಹಾಗೂ ರೀಟೇಲ್ ರಿಯಲ್ ಎಸ್ಟೇಟ್ ಭಾಪವನ್ನು ಖಾಸಗಿ ಈಕ್ವಿಟಿ ಸಂಸ್ಥೆ ಬ್ಲಾಕ್ ಸ್ಟೋನ್ ಖರೀದಿಸಲಿದೆ ಎಂಬ ಮಾಧ್ಯಮಗಳ ವರದಿಯ ಪರಿಣಾಮ ಷೇರುಗಳ ಏರಿಳೀತ ಕಂಡು ಬಂದಿತು.

ಮಾಧ್ಯಮ ವರದಿಗಳ ಪ್ರಕಾರ ಬ್ಲಾಕ್ ಸ್ಟೋನ್ ಸಂಸ್ಥೆ ಬೆಂಗಳೂರಿನಲ್ಲಿರುವ ಯುಬಿ ಸಿಟಿಯ ಪ್ರಮುಖ ಕಟ್ಟಡಗಳ ಒಡೆತನ ಪಡೆಯಲಿದೆ ಎನ್ನಲಾಗಿದೆ.

ವಿಜಯ್ ಮಲ್ಯ ಒಡೆತನದ ಯುಬಿ ಹೋಲ್ಡಿಂಗ್ಸ್ ಆಸ್ತಿ ಮಾರಾಟವನ್ನು ಯುಬಿ ಸಮೂಹ ತಳ್ಳಿ ಹಾಕಿಲ್ಲವಾದ್ದರಿಂದ ಈ ಸುದ್ದಿ ಇನ್ನಷ್ಟು ಪುಷ್ಟಿ ಸಿಕ್ಕಿತ್ತು.

ಸೆಪ್ಟೆಂಬರ್ 30ಕ್ಕೆ ಅನ್ವಯವಾಗುವಂತೆ ಕಿಂಗ್ ಫಿಷರ್ ಸಂಸ್ಥೆ ಸುಮಾರು 9000 ಕೋಟಿ ರು ಸಾಲ ಹೊತ್ತುಕೊಂಡಿದೆ. ಜುಲೈ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 61 ರಷ್ಟು ಕುಸಿತಕಂಡು 754 ಕೋಟಿ ರುಗೂ ಅಧಿಕ ನಿವ್ವಳ ನಷ್ಟ ಅನುಭವಿಸಿತ್ತು.

ಡಿಯಾಜಿಯೋ ಸಂಸ್ಥೆ ಯುನೈಟೆಡ್ ಸ್ಪಿರೀಟ್ಸ್ ಹಾಗೂ ಯುಬಿ ಸಮೂಹದ ಷೇರುಗಳಲ್ಲಿ ಪಾಲು ಹೊಂದುವ ಮೂಲಕ ಕಿಂಗ್ ಫಿಷರ್ ಸಾಲದ ಭಾರ ಇಳಿಸುವ ಪ್ರಕ್ರಿಯೆ ಬಗ್ಗೆ ಇನ್ನೂ ಸ್ಪಷ್ಟಣೆ ಸಿಕ್ಕಿಲ್ಲ.

ಸಾಲ ಕೊಟ್ಟಿರುವ 17ಕ್ಕೂ ಅಧಿಕ ಬ್ಯಾಂಕುಗಳ ಜೊತೆ ಮಾತುಕತೆ ಎಲ್ಲಾ ವಿಫಲವಾಗುತ್ತಿದೆ. ಕಿಂಗ್ ಫಿಷರ್ ಸಿಬ್ಬಂದಿಗಳಿಗೆ ಸಂಬಳ ನೀಡುವುದೇ ಮಲ್ಯರಿಗೆ ಕಷ್ಟ ಎನಿಸಿದೆ. ಆದರೂ ಸಂಸ್ಥೆಯ ಷೇರುದಾರರಲ್ಲಿ ವಿಜಯ್ ಮಲ್ಯ ಭರವಸೆ ಕಾಯ್ದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+