ಎಸ್ ಬಿಐ ಹಾಗೂ ಇನ್ನೆರಡು ಬ್ಯಾಂಕ್ ಬಡ್ಡಿದರ ಇಳಿಕೆ

ಎಸ್ ಬಿಐ ಹಾಗೂ ಇನ್ನೆರಡು ಬ್ಯಾಂಕ್ ಬಡ್ಡಿದರ ಇಳಿಕೆ
State Bank of India: Quotes, News
BSE 969.40BSE Quote27.6 (-2.85%)
NSE 968.00NSE Quote27.7 (-2.86%)
HDFC Bank: Quotes, News
BSE 717.00BSE Quote9 (1.26%)
NSE 716.55NSE Quote8.3 (1.16%)
ಬೆಂಗಳೂರು, ಜ.31: ಆರ್ ಬಿಐ ತನ್ನ ಬಡ್ಡಿ ದರವನ್ನು ಶೇ. 0.25ರಷ್ಟು ಕಡಿತಗೊಳಿಸುತ್ತಿದ್ದಂತೆ ಹಲವು ಬ್ಯಾಂಕ್‌ಗಳು ಬಡ್ಡಿ ದರ ಕಡಿತ ಘೋಷಣೆ ಆರಂಭಿಸಿವೆ. ಎಸ್ ಬಿಐ ಹಾಗೂ ಇನ್ನೆರಡು ಬ್ಯಾಂಕುಗಳು ಬಡ್ಡಿದರದಲ್ಲಿ ಇಳಿಕೆ ಮಾಡಿರುವುದಾಗಿ ಘೋಷಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಬಡ್ಡಿ ದರವನ್ನು ಶೇ. 0.25ರಷ್ಟು ಕಡಿತಗೊಳಿಸಿದೆ. ದಶಕದ ಅತಿ ಕಡಿಮೆ ವೃದ್ಧಿ ದರ ಹೊಂದಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ. ಕಳೆದ ಒಂಭತ್ತು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಬಡ್ಡಿದರ ಕಡಿತಗೊಳಿಸಲಾಗಿತ್ತು.

ಎಸ್‌ಬಿಐ ತನ್ನ ಮೂಲ ಬಡ್ಡಿ ದರವನ್ನು ಶೇ. 0.05ರಷ್ಟು ಕಡಿತಗೊಳಿಸಿದೆ. ಇದೀಗ ಬಡ್ಡಿ ದರ ಶೇ.9.7ರಷ್ಟಾಗಿದ್ದು, ಫೆ.4ರಿಂದ ಈ ಪರಿಷ್ಕೃತ ಬಡ್ಡಿದರ ಜಾರಿಗೆ ಬರಲಿದೆ ಎಂದು ಬ್ಯಾಂಕ್‌ನ ಉಪ ನಿರ್ದೇಶಕ ಆರ್. ವೆಂಕಟರಾಮನ್ ತಿಳಿಸಿದ್ದಾರೆ.

ಮೂಲ ಬಡ್ಡಿ ದರ ಕಡಿತದಿಂದಾಗಿ ಸಾಲದ ಬಡ್ಡಿ ದರದಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ. ಐಡಿಬಿಐ ಹಾಗೂ ರಾಯಲ್ ಬ್ಯಾಂಕ್ ಆಫ್ ಸ್ಕಾಟ್‌ಲ್ಯಾಂಡ್ ಸಹ ಮೂಲಬಡ್ಡಿದರವನ್ನು ಕ್ರಮವಾಗಿ ಶೇ 0.75 ರಷ್ಟು ಹಾಗೂ ಶೇ.0.25 ರಷ್ಟು ಕಡಿತಗೊಳಿಸಿವೆ.

ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಕಾರ್ ಲೋನ್‌ನ ಬಡ್ಡಿ ದರವನ್ನು ಶೇ.0.05ರಷ್ಟು ಇಳಿಕೆ ಮಾಡಿದೆ. ದ್ವಿಚಕ್ರ ವಾಹನ ಬಡ್ಡಿದರ ಶೇ 0.5 ರಷ್ಟು ಇಳಿಕೆಯಾಗಿದೆ.

ಮುಂಬೈ ಮೂಲದ ಎಚ್ ಡಿಎಫ್ ಸಿ ಬ್ಯಾಂಕ್ ಪ್ರಸ್ತುತ ಶೇ 10.75 ಹಾಗೂ 11.75 ಬಡ್ಡಿದರರಂತೆ ವಾಹನ ಸಾಲ ನೀಡುತ್ತಿದೆ. ಪರಿಷ್ಕೃತ ದರದಂತೆ ಶೇ 10.5-11.5 ಆಗಲಿದೆ. ಇದೇ ರೀತಿ ದ್ವಿಚಕ್ರ ವಾಹನ ಸಾಲ ಶೇ 19.25-22.25 ರಷ್ಟಾಗಲಿದೆ.

ಬ್ಯಾಂಕಿನ ಈ ಕ್ರಮ ಮನೆ ಕಟ್ಟುವವರಿಗೆ ವರದಾನವಾಗಲಿದ್ದು, ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ಲಭ್ಯವಾಗಲಿದೆ. ಬಡ್ಡಿ ದರವನ್ನು ಎಷ್ಟು ಇಳಿಸಬೇಕೆನ್ನುವುದನ್ನು ಕೇಂದ್ರ ವಿತ್ತ ಇಲಾಖೆ ನಿರ್ಧರಿಸಿಲ್ಲ,

ಅದು ಆಯಾಯ ಬ್ಯಾಂಕ್ ಗಳಿಗೆ ಬಿಟ್ಟ ವಿಚಾರ ಎಂದು ಎ.ಎಲ್.ಸಿ.ಒ (Asset Liability Committee) ತಿಳಿಸಿದೆ. ಬ್ಯಾಂಕ್‌ಗಳು ಆರ್ ಬಿಐನಲ್ಲಿ ಇಡಬೇಕಾಗಿರುವ ಇಡುಗಂಟಿನ ಪ್ರಮಾಣ ಅಂದರೆ ಸಿಆರ್‌ಆರ್ ಅನ್ನೂ ಕಡಿತಗೊಳಿಸಿದೆ.

ಇದು ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ 18 ಸಾವಿರ ಕೋಟಿ ಹಣವನ್ನು ತುಂಬಲಿದ್ದು, ಬ್ಯಾಂಕ್ ಗಳ ವಹಿವಾಹಿಟಿಗೆ ಇನ್ನಷ್ಟು ಚೇತರಿಕೆ ನೀಡಲಿದೆ. ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣಾ ನೀತಿಗೆ ಆರ್‌ಬಿಐನ ಈ ಕ್ರಮ ನೆರವಾಗಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಾರ್ಪೋರೇಶನ್ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಗಳು ಬಡ್ಡಿದರ ಇಳಿಕೆ ಬಗ್ಗೆ ಚಿಂತನೆ ನಡೆಸಿರುವ ಸುದ್ದಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+