ಬೆಂಗಳೂರು, ಮಾ.26 : ಖ್ಯಾತ ಬ್ರೋಕಿಂಗ್ ಸಂಸ್ಥೆ ಶೇರ್ ಖಾನ್ ನೀಡಿರುವ ಸಲಹೆ ಮೇರೆಗೆ ಅಧಿಕ ಮೊತ್ತ ಹೂಡಿಕೆ ವಿಭಾಗದಲ್ಲಿನ ಟಾಪ್ 5 ಈಕ್ವಿಟಿ ಮ್ಯೂಚುವಲ್ ಫಂಡ್ ಗಳ ವಿವರಗಳನ್ನು ನೀಡುತ್ತಿದ್ದೇವೆ. ಒಳ್ಳೆ ಈಕ್ವಿಟಿ ಫಂಡ್ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಅಷ್ಟು ಸುಲಭವಲ್ಲ.
ಮ್ಯೂಚುವಲ್ ಫಂಡ್ ಎಷ್ಟು ವರ್ಷದ ಅವಧಿಗೆ ಇದೆ ಒಂದು ವರ್ಷ, ಎರಡು ವರ್ಷ, ಮೂರು ವರ್ಷ ರಿಟರ್ನ್ಸ್, Sharpe ಅನುಪಾತ ಹಾಗೂ ಮಾಹಿತಿ ಅನುಪಾತದ ಮೇಲೆ ಅವಲಂಬಿಸಿರುತ್ತದೆ. ಶೇರ್ ಖಾನ್ ಆಯ್ಕೆಯ ಐದು ಮ್ಯೂಚುವಲ್ ಫಂಡ್ ವಿವರಗಳು ನಿಮಗಾಗಿ ಇಲ್ಲಿದೆ:
ಐಸಿಐಸಿಐ ಪ್ರುಡೆನ್ಷಿಯಲ್ ಫೋಕಸ್ಡ್ ಬ್ಲೂ ಚೀಪ್ ಈಕ್ವಿಟಿ ಫಂಡ್
ಶೇರ್ ಖಾನ್ ಈ ಯೋಜನೆಗೆ 5 ಸ್ಟಾರ್ ನೀಡಿದೆ. ಆರು ತಿಂಗಳ ರಿಟರ್ನ್ ಶೇ 9.4 ರಷ್ಟು, ಮೂರು ವರ್ಷದ ರಿಟರ್ನ್ಸ್ ಶೇ 9.3 ರಷ್ಟಿದೆ. ಮಾ .15ಕ್ಕೆ ಅನ್ವಯವಾಗುವಂತೆ ಯೋಜನೆಯ ನಿವ್ವಳ ಆಸ್ತಿ ಮೌಲ್ಯ 18.27 ರು ನಷ್ಟಿದೆ. open ended ಈಕ್ವಿಟಿಯೋಜನೆ ಇದಾಗಿದ್ದು ಪ್ರಗತಿ ನಿಧಿ ಯೋಜನೆಯಾಗಿದೆ ಎಂದು ಐಸಿಐಸಿಐ ಹೇಳಿದೆ.
ಫ್ರಾಂಕ್ಲಿನ್ ಇಂಡಿಯಾ ಬ್ಲೂಚಿಪ್ ಫಂಡ್
ಫ್ರಾಂಕ್ಲಿನ್ ಇಂಡಿಯಾ ಬ್ಲೂ ಚಿಪ್ ಯೋಜನೆಗೂ ಐದು ಸ್ಟಾರ್ ಸಿಕ್ಕಿದೆ. ಶೇ 24.5 ರಷ್ಟು ರಿಟರ್ನ್ಸ್ ನಿರೀಕ್ಷೆಯಿದೆ. ನಿವ್ವಳ ಆಸ್ತಿ ಮೌಲ್ಯ 232.81 ರು ನಷ್ಟಿದೆ. ಇದು ಕೂಡಾ open ended ಈಕ್ವಿಟಿ ಫಂಡ್ ಆಗಿದೆ.
ಬಿರ್ಲಾ ಸನ್ ಲೈಫ್ ಫ್ರಂಟ್ ಲೈನ್ ಈಕ್ವಿಟಿ ಫಂಡ್ ಪ್ಲಾನ್ ಎ
ಬಿರ್ಲಾ ಸನ್ ಲೈಫ್ ಫ್ರಂಟ್ ಲೈನ್ ಈಕ್ವಿಟಿ ಫಂಡ್ ಪ್ಲಾನ್ ಎ ಜನಪ್ರಿಯ ಯೋಜನೆಯಾಗಿದ್ದು ಶೇ 23.9 ರಷ್ಟು ರಿಟರ್ನ್ಸ್ ನೀಡಿದೆ. ಯೋಜನಾ ನಿವ್ವಳ ಆಸ್ತಿ ಮೌಲ್ಯ ಮಾರ್ಚ್ 15,2013ಕ್ಕೆ ಅನ್ವಯವಾಗುವಂತೆ 98.07 ರು ನಷ್ಟಿದೆ. ಇದು ಕೂಡಾ large cap ನಿಧಿ ಹೂಡಿಕೆಯಾಗಿದೆ.
ಎಸ್ ಬಿಐ ಮ್ಯಾಗ್ನ್ ನಮ್ ಬ್ಲೂಚಿಪ್ ಫಂಡ್
ಎಸ್ ಬಿಐ ಬ್ಲೂ ಚಿಪ್ ಫಂಡ್ ಗೂ 5 ಸ್ಟಾರ್ ರೇಟಿಂಗ್ ಸಿಕ್ಕಿದೆ. ಯೋಜನೆ ನಿವ್ವಳ ಆಸ್ತಿ ಮೌಲ್ಯ ಮಾರ್ಚ್ 15ಕ್ಕೆ ಅನ್ವಯವಾಗುವಂತೆ 16.68 ರು ನಷ್ಟಿದೆ. ಬ್ಲೂ ಚಿಪ್ ಕಂಪನಿಗಳಲಿ ಎಸ್ ಬಿಐ ಬ್ಲೂ ಚಿಪ್ ನಿಧಿ ಹೂಡಿಕೆ ಮಾಡಲಾಗುತ್ತದೆ. ಬಿಎಸ್ ಇ 100ಇಂಡೆಕ್ಸ್ ನಲ್ಲಿರುವ ಅತಿ ಕಡಿಮೆ ಮಾರುಕಟ್ಟೆ ಮೌಲ್ಯದ ಕಂಪನಿಗಳಿಗೆ ಸಮನಾದ ಅಥವಾ ಅದಕ್ಕಿಂತ ಹೆಚ್ಚಾದ ಮಾರುಕಟ್ಟೆ ಮೌಲ್ಯವುಳ್ಳ ಕಂಪನಿಗಳಲ್ಲಿ ಹೂಡಿಕೆಯಾಗಲಿದೆ.
ಟಾಟಾ ಪ್ಯೂರ್ ಈಕ್ವಿಟಿ ಫಂಡ್
ಟಾಟಾ ಈಕ್ವಿಟಿ ಫಂಡ್ ದೀರ್ಘಕಾಲಿಕ ನಿಧಿ ಹೂಡಿಕೆ ವಿಧಾನವಾಗಿದ್ದು, ಈಕ್ವಿಟಿ ಸಾಧಕಗಳಲ್ಲಿ ಶೇ 70 ರಿಂದ 100 ರಷ್ಟು ಹೂಡಿಕೆಯಾಗಲಿದೆ. ಶೇ 5ರಷ್ಟು ಲಿಸ್ಟ್ ಆಗದ ಈಕ್ವಿಟಿಗಳನ್ನು ಕಾಣಬಹುದು. ಹಣಕಾಸು ಮಾರುಕಟ್ಟೆಗಳಲ್ಲಿ ಶೇ 5 ರಿಂದ ಶೇ 30 ರಷ್ಟು ಹೂಡಿಕೆ ಕಾಣಬಹುದು.


Click it and Unblock the Notifications