ಏ.1ರಿಂದ ಏನೇನು ದುಬಾರಿಯಾಗಲಿದೆ?

ಬೆಂಗಳೂರು, ಏ.1: ಹೊಸ ಆರ್ಥಿಕ ವರ್ಷಾರಂಭ ಸ್ವಾಗತಿಸಲು ಬೆಲೆ ಏರಿಕೆ ಸಿದ್ಧವಾಗಿದೆ. ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಯುಪಿಎ ಸರ್ಕಾರ ಹೊರ ತಂದಿರುವ ಆರ್ಥಿಕ ನೀತಿ, ಕೇಂದ್ರ ಬಜೆಟ್ 2013ನ ಘೋಷಣೆಗಳು ಇಂದಿನಿಂದ(ಏ.1)ಅನುಷ್ಠಾನಗೊಳ್ಳಲಿದೆ.

ಮೊಬೈಲ್ ಫೋನ್, ಸ್ಮಾಟ್ ಫೋನ್, ಕಾರು ಸೆಟ್ ಟಾಪ್ ಬಾಕ್ಸ್, ಸಿಗರೇಟು, ತಂಬಾಕು ಪದಾರ್ಥ, ಮಾರ್ಬಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಗೆ ಏರಿಸಲಾಗಿದೆ. ನಾರಿನ ಉತ್ಪನ್ನ, ಪೌಷ್ಠಿಕ ಆಹಾರ ಸೇರಿದಂತೆ ವಿವಿಧ ವಸ್ತುಗಳ ಮೇಲೆ ತೆರಿಗೆ ಕಡಿಮೆ ಮಾಡಲಾಗಿದೆ.

ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೆಚ್ಚಿನ ಅನುಕೂಲಕರ ವಾತಾವರಣ ಸೃಷ್ಟಿ ಹಾಗೂ ಮುಂಬರುವ ಚುನಾವಣಾ ದೃಷ್ಟಿಯಿಂದ ಹೆಚ್ಚಿನ ತೆರಿಗೆ ಏರಿಸಲು ಹೋಗದೆ, ಸಮತೋಲನ ಕಾಯ್ದುಕೊಂಡು ಎಲ್ಲರಿಂದಲೂ ಮೆಚ್ಚುಗೆ ಗಳಿಸುವ ಉದ್ದೇಶ ಈ ಬಜೆಟ್ ನಲ್ಲಿ ಎದ್ದು ಕಾಣುತ್ತಿದೆ. ಇಂದಿನಿಂದ ಏನೇನು ದುಬಾರಿಯಾಗಲಿದೆ ಎಂಬುದರ ಸ್ಥೂಲ ಪರಿಚಯ ಮುಂದಿನ ಚಿತ್ರ ಸರಣಿಯಲ್ಲಿ ಓದಿರಿ:

AC ರೆಸ್ಟೋರೆಂಟ್

AC ರೆಸ್ಟೋರೆಂಟ್

ಎಲ್ಲಾ ಹವಾ ನಿಯಂತ್ರಿತ ರೆಸ್ಟೋರೆಂಟ್ ಗಳ ಮೇಲೆ ಸೇವಾ ತೆರಿಗೆ ಹೆಚ್ಚಳ ಮಾಡಲಾಗಿದೆ. ಸೇವಾ ತೆರಿಗೆ ಶೇ 12.36 ರಷ್ಟಿದೆ. ಬಿಲ್ ನ ಶೇ 30ರಷ್ಟಕ್ಕೆ ಅನ್ವಯವಾಗಲಿದೆ.

ಕ್ರೀಡಾ ವಾಹನ ಬಳಕೆ

ಕ್ರೀಡಾ ವಾಹನ ಬಳಕೆ

SUV ಗಳ ತೆರಿಗೆ ಶೇ 27 ರಿಂದ 30ಕ್ಕೆ ಏರಿಕೆಯಾಗಿದೆ. ಆದರೆ, ಈ ತೆರಿಗೆ SUV ಗಳನ್ನು ಟ್ಯಾಕ್ಸಿಗಳಾಗಿ ಬಳಸಿದರೆ ಅನ್ವಯವಾಗುವುದಿಲ್ಲ.

ಹೆವಿ ಬೈಕ್

ಹೆವಿ ಬೈಕ್

800 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಇಂಜಿನ್ ವುಳ್ಳ ಮೋಟರ್ ಸೈಕಲ್ ಮೇಲಿನ ಅಬಕಾರಿ ಸುಂಕ ಶೇ 60-70 ರಷ್ಟು ಹೆಚ್ಚಿಸಲಾಗಿದೆ.

ಸೆಟ್ ಟಾಪ್ ಬಾಕ್ಸ್

ಸೆಟ್ ಟಾಪ್ ಬಾಕ್ಸ್

ಸೆಟ್ ಟಾಪ್ ಬಾಕ್ಸ್ ಗಳ ಮೇಲಿನ ಆಮದು ಸುಂಕ ಶೇ 5 ರಿಂದ ಶೇ 10ಕ್ಕೇರಿಸಲಾಗಿದೆ. ಸದ್ಯ ಇರುವ ಬೆಲೆ 1,200-1,500 ಬದಲಾಗಲಿದ್ದು, ಕನಿಷ್ಠ 2,200 ರು ನೀಡಬೇಕಾಗುತ್ತದೆ

ಆಮದು ಚಿನ್ನ

ಆಮದು ಚಿನ್ನ

50 ಸಾವಿರ ರು ವರೆಗಿನ ಆಮದು ಚಿನ್ನಕ್ಕೆ ಸುಂಕವಿಲ್ಲ (ಪುರುಷರಿಗೆ) ಮಹಿಳೆಯರಿಗೆ ಈ ಮಿತಿ 1 ಲಕ್ಷ ರು. ಚಿನ್ನದ ಆಮದು ಮಿತಿ ಏರಿಕೆ * ಮುತ್ತು ರತ್ನಗಳ ಮೇಲೆ ತೆರಿಗೆ ಇಳಿಕೆ * ಬೆಳ್ಳಿ ಬೆಲೆ ಏರಿಕೆ, ವಜ್ರದ ಬೆಲೆ ಮಾತ್ರ ಇಳಿಕೆ

ಸಿಗರೇಟ್

ಸಿಗರೇಟ್

ತಂಬಾಕು ಪದಾರ್ಥಗಳು ಸಿಗರೇಟ್ ಮೇಲೆ ಅಬಕಾರಿ ಸುಂಕ ಶೇ 18ಕ್ಕೆ ಏರಿಸಲಾಗಿದೆ.

ಸಿಎನ್ ಜಿ ಆಟೋರಿಕ್ಷಾ

ಸಿಎನ್ ಜಿ ಆಟೋರಿಕ್ಷಾ

ಸಿಎನ್ ಜಿ ಬಳಸಿದ ಆಟೋರಿಕ್ಷಾ, ಇತರೆ ವಾಹನಗಳ ಸಂಚಾರ ಬೆಲೆ ಏರಿಕೆ. ಸಿಎನ್ ಜಿ ಬಳಕೆ ಮೇಲೆ ಸುಂಕ ಹೆಚ್ಚಳ

ಹೋಟೆಲ್ ವಾಸ

ಹೋಟೆಲ್ ವಾಸ

ಐಷಾರಾಮಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಉಳಿಯುವುದು, ಡಿನ್ನರ್, ಸಪ್ಪರ್ ಬೆಲೆ ಏರಿಕೆ, ಸೇವಾ ತೆರಿಗೆ ಹೆಚ್ಚಳ

ಮೊಬೈಲ್ ಫೋನ್

ಮೊಬೈಲ್ ಫೋನ್

2000 ರು ಗಿಂತ ಅಧಿಕ ಬೆಲೆಯ ಮೊಬೈಲ್ ಮೇಲೆ ಶೇ 6 ರಷ್ಟು ಅಧಿಕ ಅಬಕಾರಿ ಸುಂಕ (excise duty) ಹಾಕಲಾಗಿದೆ.
* ಸ್ಮಾರ್ಟ್ ಫೋನ್ ಮೇಲೆ ಶೇ 6 ರಷ್ಟು ಅಧಿಕ ಸುಂಕ

ಸಿಎನ್ ಜಿ ಬಸ್

ಸಿಎನ್ ಜಿ ಬಸ್

ಸಿಎನ್ ಜಿ ಬಸ್ ಸಾರ್ವಜನಿಕ ಸಾರಿಗೆ ಬಸ್ ಆದರೂ ಪ್ರಯಾಣ ದರ ಹೆಚ್ಚಳ ನಿರೀಕ್ಷೆ. ಸಿಎ ನ್ ಜಿ ಮೇಲೆ ಸುಂಕ ಏರಿಕೆ

ಮಾರ್ಬಲ್

ಮಾರ್ಬಲ್

ಮಾರ್ಬಲ್ ಚದರಡಿಗೆ ಶೇ 65 ರಿಂದ 70 ರಷ್ಟು ದರದಲ್ಲಿ ಏರಿಕೆ

ರೇಷ್ಮೆ ಉತ್ಪನ್ನ

ರೇಷ್ಮೆ ಉತ್ಪನ್ನ

ರೇಷ್ಮೆ ಮೇಲಿನ ಸುಂಕ ಹೆಚ್ಚಳವಾಗಿರುವುದರಿಂದ ರೇಷ್ಮೆ ಉತ್ಪನ್ನಗಳು, ರೇಷ್ಮೆ ಸೀರೆ ಬೆಲೆ ಏರಿಕೆಯಾಗಲಿದೆ

ಐಷಾರಾಮಿ ಬಂಗಲೆ

ಐಷಾರಾಮಿ ಬಂಗಲೆ

2000 ಚ. ಅ ಗೂ ಅಧಿಕ ವಿಸ್ತೀರ್ಣದಲ್ಲಿ ನಿರ್ಮಾಣವಾದ ಐಷಾರಾಮಿ ಬಂಗಲೆಯ ಮೇಲೆ ತೆರಿಗೆ ಹೆಚ್ಚಳ 50ಲಕ್ಷ ಹಾಗೂ ಅದಕ್ಕಿಂತ ಅಧಿಕ ಮೌಲ್ಯದ ಆಸ್ತಿ ಮೇಲೆ ಶೇ 1 ರಷ್ಟು TDS ಕಟ್ ಆಗಲಿದೆ.

ಮೋಟರ್ ವಿಮೆ

ಮೋಟರ್ ವಿಮೆ

ಮೋಟರ್ ಇನ್ಸುರೆನ್ಸ್ ಪ್ರೀಮಿಯಂ ಪಾವತಿ ಕೂಡಾ ಹೆಚ್ಚಾಗಲಿದೆ. ಹಣದುಬ್ಬರ ಹಾಗೂ ಕ್ಲೇಮು ಇತಿಹಾಸದ ಮೇಲೆ Insurance Regulatory and Development Authority (IRDA) ಏ.1 ರಿಂದ ಶೇ 20ರಷ್ಟು ಏರಿಕೆಗೆ ಸೂಚನೆ

ರೈಲು ದರ

ರೈಲು ದರ

ರೈಲ್ವೇ ಬಜೆಟ್ 2013ರ ಅನ್ವಯ ತತ್ಕಾಲ್ ಫೀ ಶೇ 10ರಷ್ಟು ಏರಿಕೆಯಾಗಲಿದೆ(ಸೆಕೆಂಡ್ ಕ್ಲಾಸ್ ಬುಕ್ಕಿಂಗ್) ಶೇ 30 ರಷ್ಟು ಹೆಚ್ಚಳ (ಎಲ್ಲಾ ಎಸಿ ಕ್ಲಾಸ್ ) ಇದರ ಜೊತೆಗೆ ಟಿಕೆಟ್ ಕ್ಯಾನ್ಸಲ್ ಮಾಡುವ ದರ 10 ರು ನಿಂದ 50 ರು ಗೆ ಏರಿಸಲಾಗಿದೆ. ಖಚಿತವಾದ ಪ್ರತಿ ಟಿಕೆಟ್ ಮೇಲೆ ಈ ದರ ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+