ಬೆಂಗಳೂರು, ಏ.3: ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಹಾಗೂ ಯುನೈಟೆಡ್ ಬ್ರೂವರೀಸ್ ಷೇರುಗಳ ಏರಿಳಿತ ಈ ದಿನ ಷೇರುಪೇಟೆಯ ಪ್ರಮುಖ ಸುದ್ದಿಯಾಗಿದೆ. ಕಳೆದ ಎರಡು ದಿನಗಳಿಂದ ಸುಸ್ಥಿತಿಯಲ್ಲಿದ್ದ ಯುಬಿ ಸಮೂಹದ ಷೇರುಗಳು ಬುಧವಾರ(ಏ.3) ಶೇ 5ರಷ್ಟು ಇಳಿಕೆ ಕಂಡಿದೆ. ಆದರೆ, ಮತ್ತೆರಡು ಕಂಪನಿ ಷೇರುಗಳು ಏರಿಕೆ ಕಂಡು ಮಲ್ಯ ನಗೆ ಬೀರಿದ್ದಾರೆ.
ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಸಂಸ್ಥೆಯ ಸಾಲಕ್ಕೆ ಯುನೈಟೆಡ್ ಸ್ಪಿರೀಟ್ಸ್ ಆಸ್ತಿ ಅಡ ಇಟ್ಟಿದ್ದರಿಂದ ಯುಬಿ ಸಮೂಹದ ಷೇರುಗಳ ಮಾರಾಟಕ್ಕೆ ಬ್ಯಾಂಕ್ ಗಳು ಮುಂದಾಗಿತ್ತು. ಇದಕ್ಕೆ ತಡೆ ಒಡ್ಡುವಂತೆ ವಿಜಯ್ ಮಲ್ಯ ಅವರು ಬಾಂಬೆ ಹೈಕೋರ್ಟ್ ಗೆ ಅರ್ಜಿ ಹಾಕಿದ್ದರು. ಆದರೆ, ಬ್ಯಾಂಕ್ ಗಳು ಷೇರು ಮಾರಾಟ ಮಾಡಬಹುದು ಎಂದು ಆದೇಶ ನೀಡಿ ಮಲ್ಯಗೆ ಹೊಡೆತ ನೀಡಿದೆ.
ಬಿಎಸ್ ಇನಲ್ಲಿ ಬುಧವಾರ ಮಧ್ಯಾಹ್ನ 3.00ರ ಸುಮಾರಿಗೆ ಯುನೈಟೆಡ್ ಸ್ಪಿರೀಟ್ಸ್ ಲಿಮಿಟೆಡ್ ಷೇರುಗಳು 1,830.65 ರು ನಂತೆ ಶೇ 1.57 ರಷ್ಟು ಇಳಿಕೆ ಕಂಡಿದೆ. ದಿನದ ಆರಂಭದಲ್ಲಿ 1859.80 ರು ನಷ್ಟಿದ್ದ ಬೆಲೆ ಈಗ ತನ್ನ ಇಳಿಕೆಯನ್ನು ಮುಂದುವರೆಸಿದೆ. ಎನ್ ಎಸ್ ಇನಲ್ಲಿ ಇದೇ ವೇಳೆ ಯುನೈಟೆಡ್ ಸ್ಪಿರೀಟ್ಸ್ ಲಿಮಿಟೆಡ್ ಷೇರುಗಳು 1831.90 ರು ನಂತೆ ಶೇ 1.49 ರಷ್ಟು ಇಳಿಕೆ ಕಂಡಿದೆ.
ಮಲ್ಯ ಮಾಡಿಕೊಂಡಿರುವ ಸಾಲ ವಿವರ, ಯುಬಿ ಸಮೂಹಕ್ಕೆ ಆಗಿರುವ ಆಘಾತ ವಿವರ ಮುಂದಿನ ಚಿತ್ರ ಸರಣಿಯಲ್ಲಿ ನೋಡಿ...
ಯುಬಿ, ಕಿಂಗ್ ಫಿಷರ್, ಫರ್ಟಿ ಲೈಜರ್ಸ್
ಯುನೈಟೆಡ್ ಬ್ರೂವರೀಸ್ ಷೇರುಗಳು: ಬಿಎಸ್ ಇನಲ್ಲಿ761.10 ರು ನಂತೆ ಶೇ 5.87 ರಷ್ಟು ಏರಿಕೆ ಕಂಡಿದೆ. ಎನ್ ಎಸ್ ಇನಲ್ಲಿ 762.00 ರು ನಂತೆ ಶೇ 5.75 ರಷ್ಟು ಇಳಿಕೆ.
ಕಿಂಗ್ ಫಿಷರ್ ಏರ್ ಲೈನ್ : ಬಿಎಸ್ ಇನಲ್ಲಿ 8.40 ರು ನಂತೆ ಶೇ 3.56 ರಷ್ಟು ಇಳಿಕೆ. ಎನ್ ಎಸ್ ಇನಲ್ಲಿ 8.35 ರು ನಂತೆ ಶೇ 4.02 ರಷ್ಟು ಇಳಿಕೆ.
ಮಂಗಳೂರು ಕೆಮಿಕಲ್ ಹಾಗೂ ಫರ್ಟಿಲೈಜರ್ಸ್ : 42.70 ರು ನಂತೆ ಶೇ 8.65 ರಷ್ಟು ಏರಿಕೆ. ಎನ್ಎಸ್ಇನಲ್ಲಿ 43.0 ರು ನಂತೆ ಶೇ 9.41 ರಷ್ಟು ಏರಿಕೆ.
ಯುಬಿ ಸಮೂಹಕ್ಕೆ ಪೆಟ್ಟು
ಸುಮಾರು 6 ಕಂಪನಿಗಳ ಸಮೂಹ ಹೊಂದಿರುವ ಯುನೈಟೆಡ್ ಬ್ರಿವೆರೆಸ್(UB)ಸಂಸ್ಥೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯ 22,850 ಕೋಟಿ ರೂ ತೂಗುತ್ತದೆ. 2010-11ರಲ್ಲಿ 1,027 ಕೋಟಿ ರೂ ನಷ್ಟ ಅನುಭವಿಸಿದ್ದ ಕಿಂಗ್ ಫಿಷರ್ ಒಟ್ಟಾರೆ 7,057.08 ಕೋಟಿ ಸಾಲ ತಲೆ ಮೇಲೆ ಹೊತ್ತುಕೊಂಡಿದೆ.
ಷೇರುಗಳ ಮಾರಾಟಕ್ಕೆ ಸಾಧ್ಯತೆ
21,800 ಕೋಟಿ ರೂ ಸಮೂಹದ ಒಡೆಯನಾದ ಮಲ್ಯ ಅವರು ಯುಬಿ ಸಮೂಹದ ಷೇರು ಮಾರಿ ಕಿಂಗ್ ಫಿಷರ್ ಹಾರಾಟ ಸುಗಮಗೊಳಿಸುವ ಸುದ್ದಿಯೂ ಚಾಲ್ತಿಯಲ್ಲಿತ್ತು. ಜೊತೆಗೆ ಐಪಿಎಲ್ ನ ರಾಯಲ್ ಚಾಲೆಂಜರ್ಸ್ ತಂಡವನ್ನು ಮಾರಾಟ ಮಾಡಿ ಯುನೈಟೆಡ್ ಸ್ಪಿರೀಟ್ಸ್ ಗೆ ಜೀವ ತುಂಬುತ್ತಾರೆ ಎನ್ನಲಾಗಿತ್ತು.
ಯುನೈಟೆಡ್ ಬ್ರೂವರೀಸ್ ನ ಸಾಲ ತೀರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 1,500 ಕೋಟಿ ರು ನಿಂದ 2,000 ಕೋಟಿ ಮೊತ್ತ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಹೆಚ್ಚಿತ್ತು. ಅದರೆ, ಡಿಯಾಜಿಯೋ ಕಂಪನಿ ಮುಂದೆ ಬಂದು ಸಹಾಯ ಹಸ್ತ ಚಾಚಿತು.
ಬ್ಯಾಂಕ್ ಸಾಲದ ಹೊರೆ ಎಷ್ಟು
ಸುಮಾರು 17 ಬ್ಯಾಂಕ್ ಗಳು ಮಲ್ಯ ಅವರ ಕಂಪನಿಗಳ ಷೇರುಗಳ ಮಾರಾಟ ಮಾಡಲು ಮುಂದಾಗಿದ್ದು, ಯುಬಿ ಸಮೂಹಕ್ಕೆ ಭಾರಿ ಹೊಡೆತ ನೀಡಿತ್ತು. ಎಸ್ ಬಿಐಗೆ 1800 ಕೋಟಿ ರು, ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 800 ಕೋಟಿ ರು ಬಾಕಿ ಪಾವತಿಸಬೇಕಿದೆ.
ಐಡಿಬಿಐ ಬ್ಯಾಂಕ್(800 ಕೋಟಿ), BOl(650 ಕೋಟಿ), ಬ್ಯಾಂಕ್ ಆಫ್ ಬರೋಡಾ(550 ಕೋಟಿ), ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ(430 ಕೋಟಿ), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(410 ಕೋಟಿ), ಮುಂದೆ ಓದಿ...
ಗ್ಯಾರಂಟಿ ಮೊತ್ತ
ಮುಂದುವರೆದು...UCO ಬ್ಯಾಂಕ್ (320 ಕೋಟಿ), ಕಾರ್ಪೊರೇಷನ್ ಬ್ಯಾಂಕ್ (310 ಕೋಟಿ), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (150 ಕೋಟಿ), ಇಂಡಿಯಾ ಓವರ್ ಸೀಸ್ ಬ್ಯಾಂಕ್ (140 ಕೋಟಿ), ಫೆಡರಲ್ ಬ್ಯಾಂಕ್ (90 ಕೋಟಿ), ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ (60 ಕೋಟಿ) ಹಾಗೂ ಆಕ್ಸಿಸ್ ಬ್ಯಾಂಕ್ (50 ಕೋಟಿ)
ಯುನೈಟೆಡ್ ಸ್ಪಿರೀಟ್ಸ್ ನ ಒಟ್ಟಾರೆ ಷೇರು ಸೇರಿಸಿ 3.5 ಕೋಟಿ ರು ಪೂರಕ ಗ್ಯಾರಂಟಿಯಾಗಿ ನೀಡಲಾಗಿದೆ. ಬಾಂಬೆ ಹೈಕೋರ್ಟ್ ಪ್ರಕಾರ ಎಸ್ ಬಿಐಗೆ ನೀಡಬೇಕಾದ ಬಾಕಿ ಮೊತ್ತ ಹಾಗೂ ಮಂಗಳೂರು ಫರ್ಟಿಲೈಸರ್ ಕೆಮಿಕಲ್ ಕಂಪನಿ ಷೇರುಗಳು ಸದ್ಯಕ್ಕೆ ಬಚಾವಾಗಿದೆ.
ಡೀಲ್ ಖಲಾಸ್?
ಬಾಂಬೆ ಹೈ ಕೋರ್ಟ್ ಆದೇಶದ ನಂತರ ಡಿಯಾಜಿಯೋ ಕಂಪನಿ ಹಾಗೂ ಯುನೈಟೆಡ್ ಸ್ಪಿರೀಟ್ಸ್ 11,000 ಕೋಟಿ ಡೀಲ್ ನೆನಗುದಿಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಮೊದಲ ಹಂತದಲ್ಲಿ ಶೇ 27.4 ರಷ್ಟು ಪಾಲನ್ನು ಡಿಯಾಜಿಯೋ ಪಡೆದುಕೊಂಡಿತ್ತು. ಮಲ್ಯ ಕಂಪನಿಗಳ ಷೇರುಗಳ ಮೊತ್ತವೆ 6,552 ಕೋಟಿ ರು ಮೀರುತ್ತದೆ ಎಂಬ ಅಂದಾಜಿದೆ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications