ಆರ್ಥಿಕ ಸಂಕಷ್ಟದಲ್ಲೇ ಕುಂಟುತ್ತಾ ಕ್ವಾಟರ್ ನಿಂದ ಕ್ವಾಟರ್ ಗೆ ಸಾಗುತ್ತಿರುವ ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಉದ್ಯಮ ಸಂಸ್ಥೆ ಇನ್ಪೋಸಿಸ್ ತನ್ನ ಟೆಕ್ಕಿಗಳಿಗೆ ಶಾಕ್ ನೀಡುವುದರ ಜೊತೆಗೆ ಮಾರುಕಟ್ಟೆಯಲ್ಲೂ ತನ್ನ ಮೌಲ್ಯ ಕಳೆದುಕೊಂಡಿರುವುದು ಬಹಿರಂಗ ಸತ್ಯ. ಆದರೆ, ಏ.12 ರಂದು ಹೊರ ಬೀಳಲಿರುವ ಹೊಸ ಆರ್ಥಿಕ ವರ್ಷದ ತ್ರೈಮಾಸಿಕ ವರದಿ ಎಲ್ಲರ ಕುತೂಹಲ ಕೆರಳಿಸಿದೆ.
ಬೆಂಗಳೂರು ಮೂಲದ ಸಂಸ್ಥೆ ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1,53,761 ರಷ್ಟು ಉದ್ಯೋಗಿಗಳನ್ನು ಹೊಂದಿತ್ತು ನಂತರ ಶೇ 1.2 ರಷ್ಟು ಸಂಖ್ಯೆ ಹೆಚ್ಚಿಸಿಕೊಂಡು 1,55,629ಕ್ಕೇರಿತ್ತು. ಆದರೂ 2013-14ರ ಆರ್ಥಿಕ ವರ್ಷದ ನೇಮಕಾತಿಯ ಬಗ್ಗೆ ಮಾತನಾಡುತ್ತಾ ಎಸ್ ಗೋಪಾಲಕೃಷ್ಣನ್ ಹೇಳಿದ ಮಾತುಗಳನ್ನೇ ಉಲ್ಲೇಖಿಸಿದರೆ "Hiring position seems to be muted this year because many companies still have deep bench (strength), in other words their utilisation rate is still low." ಎಂದಿದ್ದಾರೆ.
ಪ್ರಮುಖವಾಗಿ ಎದುರಾಳಿಗಳಾದ ಎಚ್ ಸಿಎಲ್, ವಿಪ್ರೋ ಸಂಸ್ಥೆ ವಿರುದ್ಧ ಇನ್ಫೋಸಿಸ್ ಕಾರ್ಯತಂತ್ರವೇನು? ಕಂಪನಿಯು ಪ್ರಸಕ್ತ ಆರ್ಥಿಕ ವರ್ಷಕ್ಕೆ revenue guidance ಏನು ನೀಡಲಿದೆ? 7.45 ಶತಕೋಟಿ ಡಾಲರ್ ಗೆ ಏರಿದ ಮಿತಿ ಹೆಚ್ಚಳಲಿದೆಯೆ? ಉದ್ಯೋಗಿಗಳ ನೇಮಕಾತಿ ಬಗ್ಗೆ ಶಿಬುಲಾಲ್ ಏನು ಹೇಳುತ್ತಾರೆ? ನ್ಯಾಸ್ ಕಾಂ ಟಾಪ್ ಪಟ್ಟಿಗೇ ಮತ್ತೆ ಸೇರ್ಪಡೆ ಸಾಧ್ಯವೇ? ಬಂಡವಾಳ ಹೂಡಿಕೆ, ಕಂಪನಿ ವಿಸ್ತರಣೆ ಅವಕಾಶಗಳು ಹೇಗಿದೆ? ಎಂಬ ಎಲ್ಲಾ ಪ್ರಶ್ನೆಗಳು ಇಲ್ಲಿದೆ ಉತ್ತರ
ಹೊಸ ವರ್ಷಕ್ಕೆ ಇನ್ಫಿ ಏನು ನೀಡಲಿದೆ
ವಿದೇಶಿ ಬಂಡವಾಳ ಹೂಡಿಕೆ ಬ್ಯಾಂಕ್ ಜೆಪಿ ಮಾರ್ಗನ್ ಪ್ರಕಾರ ' ನ್ಯಾಸ್ ಕಾಂ FY14 ಪ್ರಗತಿ ಅಂದಾಜಿಗಿಂತ ಕೆಳ ಮಟ್ಟದ ಆದಾಯ ಪ್ರಗತಿ ಶೇ 10-12 ರಷ್ಟು USD ಅಂದಾಜಿನಲ್ಲಿ ಸಾಗಿದರೆ ಉತ್ತಮ ಎಂದು ಹೇಳಿದೆ. ಲೋಡ್ ಸ್ಟೋನ್ ಖರೀದಿ ಕೂಡಾ ಇನ್ಫಿಗೆ ಬಲ ನೀಡಲಿದೆ.
ಆನ್ ಸೈಟ್ ಉದ್ಯೋಗಿಗಳಿಗೆ ಸಂಬಳ ಏರಿಕೆ ಮುಂತಾದ ಮಾರ್ಜಿನ್ ಗಳನ್ನು ಸಂಭಾಳಿಸುವುದು ಇನ್ಫೋಸಿಸ್ ಇನ್ನೊಂದು ಪ್ರಮುಖ ಸಮಸ್ಯೆ ಆಗಿದೆ.
ಹೊಸ ವರ್ಷಕ್ಕೆ ಇನ್ಫಿ ಏನು ನೀಡಲಿದೆ
ಉಳಿದಂತೆ ಕ್ಲೌಡ್ ಕಂಪ್ಯೂಟಿಂಗ್, ಡಾಟಾ ಅನಾಲಿಟಿಕ್ಸ್ ಹಾಗೂ ಮೊಬಿಲಿಟಿ ಕ್ಷೇತ್ರಗಳಲ್ಲಿ ಇನ್ಫಿ ಯಾವ ಪಾತ್ರ ವಹಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ. ಇತ್ತೀಚಿನ ಬೆಳವಣಿಗೆಗಳನ್ನು ಮೆಲುಕು ಹಾಕಿದರೆ...
* ಪ್ರತಿಷ್ಠಿತ ನಾಸ್ಡಾಕ್ ನ ಟಾಪ್ 100 ಪಟ್ಟಿಯಿಂದ ಇನ್ಫೋಸಿಸ್ ಹೊರ ಬಿದ್ದಿತ್ತು.
* ನಾಸ್ಡಾಕ್ 100 ನಿಂದ ಹೊರಬಿದ್ದಿರುವುದು ಇನ್ಫೋಸಿಸ್ ಪಾಲಿಗೆ ಭಾರಿ ಹಿನ್ನೆಡೆಯಾಗಿತ್ತು. 13 ವರ್ಷಗಳ ಬಳಿಕ ಇನ್ಫೋಸಿಸ್ ತುಂಬಾ ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ.
ಹೊಸ ವರ್ಷಕ್ಕೆ ಇನ್ಫಿ ಏನು ನೀಡಲಿದೆ
* 1999 ರಲ್ಲಿ 100 ಮಿಲಿಯನ್ ಡಾಲರ್ ಆದಾಯ ಗಳಿಕೆಯೊಂದಿಗೆ ಜಾಗತಿಕ ಮಟ್ಟದ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಭಾರತದ ಕಂಪನಿ ಎಂಬ ಹೆಗ್ಗಳಿಕೆಗೆ ಇನ್ಫೋಸಿಸ್ ಪಾತ್ರವಾಗಿತ್ತು.
* ಕ್ಯಾಂಪಸ್ ಸಂದರ್ಶನದ ಮೂಲಕ ನೇಮಕಾತಿಯನ್ನು 27,000ಕ್ಕೆ ಇಳಿಸಿದ್ದ ಇನ್ಫೋಸಿಸ್ ಈಗ ಈ ಪೈಕಿ 17,000 ನೇಮಕಾತಿಯನ್ನು ವಿಳಂಬಗೊಳಿಸಿತ್ತು.
ಹೊಸ ವರ್ಷಕ್ಕೆ ಇನ್ಫಿ ಏನು ನೀಡಲಿದೆ
* ಇನ್ಫೋಸಿಸ್ ನಿಂದ ಫೈನಾನ್ಸ್ ಸರ್ವೀಸಸ್ ನ ಶಾಜಿ ಫರೂಖ್ ಇನ್ಫೋಸಿಸ್ ತೊರೆದು ಬದ್ಧವೈರಿ ವಿಪ್ರೋ ಸೇರಿದ್ದರು. ನಂತರ ಬೋರ್ಡ್ ನಿಂದ ಮೋಹನ್ ದಾಸ್ ಪೈ, ಸೇಲ್ಸ್ ವಿಭಾಗದ ಮುಖ್ಯಸ್ಥ ಸುಭಾಷ್ ಧರ್, ಇನ್ಫೋಸಿಸ್ ಬಿಪಿಒ ಸಿಒಒ ರಿತೇಶ್ ಇದ್ನಾನಿ ಹಾಗೂ ಜಾಗತಿಕ ಕಾರ್ಪೊರೇಟ್ ವ್ಯವಹಾರ ವಿಭಾಗದ ಮುಖ್ಯಸ್ಥರಾಗಿದ್ದ ವಿನೋದ್ ಹುದ್ದೆ ತೊರೆದಿದ್ದರು.
ಹೊಸ ವರ್ಷಕ್ಕೆ ಇನ್ಫಿ ಏನು ನೀಡಲಿದೆ
* Q2 Year-on-Year ನಲ್ಲಿ 7.343 ಬಿಲಿಯನ್ ಡಾಲರ್ ಆದಾಯ ನಿರೀಕ್ಷೆ ಹೊತ್ತಿದ್ದ ಇನ್ಫೋಸಿಸ್ Q2 ತ್ರೈಮಾಸಿಕ ವರದಿ ಹೂಡಿಕೆದಾರರಿಗೆ ನಿರಾಶೆ ಮೂಡಿಸಿತ್ತು.
* 2012ರಲ್ಲಿ ಷೇರುಪೇಟೆಯಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ಸಾಧನೆ ತೀರಾ ಕಳಪೆಯಾಗಿತ್ತು. ಸೆನ್ಸೆಕ್ಸ್ ಶೇ 26 ರಷ್ಟು ಲಾಭ ಪಡೆದಿತ್ತು. ಷೇರುಗಳ ಹಾವು ಏಣಿಯಾಟ ಹೂಡಿಕೆದಾರರಿಗೆ ತಲೆನೋವಾಗಿತ್ತು.
ಹೊಸ ವರ್ಷಕ್ಕೆ ಇನ್ಫಿ ಏನು ನೀಡಲಿದೆ
ಇನ್ಫೋಸಿಸ್ ಸಂಸ್ಥೆ ಇನ್ನೂ cost cutting ಮಂತ್ರ ಜಪಿಸುತ್ತಿದೆ. ಇನ್ಫೋಸಿಸ್ ನ ವಿಷಯಕ್ಕೆ ಬಂದರೆ, ಇತ್ತೀಚೆಗೆ ಇನ್ಫೋಸಿಸ್ ಸಂಸ್ಥೆ ತನ್ನ ಮ್ಯಾನೇಜ್ಮೆಂಟ್ ನ ಪ್ರಮುಖ ಸ್ಥಾನಗಳಲ್ಲಿ ಭಾರಿ ಬದಲಾವಣೆ ಮಾಡಿತ್ತು. ಜಾಗತಿಕ ಮಾನವ ಸಂಪನ್ಮೂಲ ಅಧಿಕಾರಿ ನಂದಿತಾ ಗುರ್ಜಾರ್ ಅವರ ಜಾಗಕ್ಕೆ ಶ್ರೀಕಂಠನ್ ಮೂರ್ತಿ ಅವರನ್ನು ಕೂರಿಸಿದೆ..
ಮೂರನೇ ತ್ರೈಮಾಸಿಕದ ನಂತರ ಸುಮಾರು 9000 ಉದ್ಯೋಗಿಗಳಿಗೆ ಬಡ್ತಿ ಯೋಗ ಲಭಿಸಲಿದೆ.ಆರ್ಥಿಕ ವರ್ಷದ ಮಧ್ಯಾವಧಿಯಲ್ಲಿ ಒಂದು ಸುತ್ತಿನ ಬಡ್ತಿ ನೀಡಲಾಗಿತ್ತು. ವರ್ಷಾಂತ್ಯದೊಳಗೆ ಇನ್ನೊಂದು ಸುತ್ತಿನ ಬಡ್ತಿ ನೀಡಲಾಗುವುದು ಎಂದು ಸಿಇಒ ಶಿಬುಲಾಲ್ ಘೋಷಿಸಿದೆ


Click it and Unblock the Notifications