ಹೊಸ ಭವಿಷ್ಯ ಬರೆಯಲು ವಿಫಲವಾದ ಇನ್ಫೋಸಿಸ್

ಆರ್ಥಿಕ ಸಂಕಷ್ಟದಲ್ಲೇ ಕುಂಟುತ್ತಾ ಕ್ವಾಟರ್ ನಿಂದ ಕ್ವಾಟರ್ ಗೆ ಸಾಗುತ್ತಿರುವ ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಉದ್ಯಮ ಸಂಸ್ಥೆ ಇನ್ಪೋಸಿಸ್ ಏ.12 ರಂದು ನೀಡಿದ ತ್ರೈಮಾಸಿಕ ವರದಿ ಗುಡ್ ರಿಟರ್ನ್ಸ್.ಇನ್ ಎತ್ತಿದ ಕುತೂಹಲದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವನ್ನು ನೀಡಿಲ್ಲ.

ಪ್ರಮುಖವಾಗಿ ಎದುರಾಳಿಗಳಾದ ಎಚ್ ಸಿಎಲ್, ವಿಪ್ರೋ ಸಂಸ್ಥೆ ವಿರುದ್ಧ ಇನ್ಫೋಸಿಸ್ ಕಾರ್ಯತಂತ್ರವೇನು? ಕಂಪನಿಯು ಪ್ರಸಕ್ತ ಆರ್ಥಿಕ ವರ್ಷಕ್ಕೆ revenue guidance ಏನು ನೀಡಲಿದೆ? 7.45 ಶತಕೋಟಿ ಡಾಲರ್ ಗೆ ಏರಿದ ಮಿತಿ ಹೆಚ್ಚಳಲಿದೆಯೆ? ಉದ್ಯೋಗಿಗಳ ನೇಮಕಾತಿ ಬಗ್ಗೆ ಶಿಬುಲಾಲ್ ಏನು ಹೇಳುತ್ತಾರೆ? ನ್ಯಾಸ್ ಕಾಂ ಟಾಪ್ ಪಟ್ಟಿಗೇ ಮತ್ತೆ ಸೇರ್ಪಡೆ ಸಾಧ್ಯವೇ? ಬಂಡವಾಳ ಹೂಡಿಕೆ, ಕಂಪನಿ ವಿಸ್ತರಣೆ ಅವಕಾಶಗಳು ಹೇಗಿದೆ? ಎಂಬ ಎಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡಿದ್ದೆವು.

ಇನ್ಫೋಸಿಸ್ ಸಂಸ್ಥೆ ಎಂದಿನಂತೆ ಲಾಭದಲ್ಲಿ ಮುಂಚೂಣಿಯಲ್ಲಿದ್ದರೂ ನಿರೀಕ್ಷಿತ ಮಟ್ಟ ಮುಟ್ಟಲಾಗಿಲ್ಲ. ಇನ್ಫೋಸಿಸ್ ಮೊದಲ ತ್ರೈಮಾಸಿಕ ಫಲಿತಾಂಶ ವರದಿ ಇಲ್ಲಿ ಓದಿ.. ಮಿಕ್ಕಂತೆ ಮೇಲ್ಕಂಡ ಪ್ರಶ್ನೆಗಳಿಗೆ ಏನು ಉತ್ತರ ಸಿಕ್ಕಿದೆ ಮುಂದಿನ ಸರಣಿಯಲ್ಲಿ ನೋಡಿ

ಹೊಸ ವರ್ಷಕ್ಕೆ ಇನ್ಫಿ ಏನು ನೀಡಿದೆ

ಹೊಸ ವರ್ಷಕ್ಕೆ ಇನ್ಫಿ ಏನು ನೀಡಿದೆ

ವಿದೇಶಿ ಬಂಡವಾಳ ಹೂಡಿಕೆ ಬ್ಯಾಂಕ್ ಜೆಪಿ ಮಾರ್ಗನ್ ಪ್ರಕಾರ ' ನ್ಯಾಸ್ ಕಾಂ FY14 ಪ್ರಗತಿ ಅಂದಾಜಿಗಿಂತ ಕೆಳ ಮಟ್ಟದ ಆದಾಯ ಪ್ರಗತಿ ಶೇ 10-12 ರಷ್ಟು USD ಅಂದಾಜಿನಲ್ಲಿ ಸಾಗಿದರೆ ಉತ್ತಮ ಎಂದು ಹೇಳಲಾಗಿತ್ತು.

ಆದರೆ, ಇನ್ಫೋಸಿಸ್ ಶೇ 6 ರಿಂದ 10 ರಷ್ಟು ಆದಾಯ ಪ್ರಗತಿ ಸೂಚಿಸಿ ನಿರಾಶೆ ಮೂಡಿಸಿದೆ. ಲೋಡ್ ಸ್ಟೋನ್ ಖರೀದಿ ಕೂಡಾ ಇನ್ಫಿಗೆ ಬಲ ನೀಡಬೇಕಿತ್ತು.

ಷೇರುಪೇಟೆಯಲ್ಲಿ ಭಾರಿ ಕುಸಿತ

ಷೇರುಪೇಟೆಯಲ್ಲಿ ಭಾರಿ ಕುಸಿತ

ಯುಗಾದಿ ಮಾರನೇ ದಿನ ಹೊರ ಬಿದ್ದ ತ್ರೈಮಾಸಿಕ ವರದಿ ನಂತರ ಬಿಎಸ್ ಇಯಲ್ಲಿ ಶುಕ್ರವಾರ (ಏ.12) ಮಾರುಕಟ್ಟೆ ಮುಕ್ತಾಯದ ವೇಳೆಗೆ 2295.45 ರು ನಂತೆ ಶೇ 21.33 ರಷ್ಟು ಕುಸಿತ ಕಂಡಿದೆ. 2917.85 ರು ನಂತೆ ದಿನದ ವಹಿವಾಟು ಆರಂಭಗೊಂಡಿತ್ತು. 622 ರು ಲಾಸ್ ಒಂದೇ ದಿನದಲ್ಲಿ ಕಂಡಿದೆ.

ಇದೇ ವೇಳೆ ಎನ್ ಎಸ್ ಇನಲ್ಲಿ 2296.65 ರು ನಂತೆ ಶೇ 21.66 ರಷ್ಟು ಕುಸಿತ ಕಂಡಿದೆ. ದಿನದ ಆರಂಭದಲ್ಲಿ 2916.70 ರು ನಂತೆ ವಹಿವಾಟು ಆರಂಭವಾಗಿತ್ತು.

 

ಡಾಲರ್ ಆದಾಯ ನಿರೀಕ್ಷೆ

ಡಾಲರ್ ಆದಾಯ ನಿರೀಕ್ಷೆ

Q2 Year-on-Year ನಲ್ಲಿ 7.343 ಬಿಲಿಯನ್ ಡಾಲರ್ ಆದಾಯ ನಿರೀಕ್ಷೆ ಹೊತ್ತಿದ್ದ ಇನ್ಫೋಸಿಸ್ Q3 ತ್ರೈಮಾಸಿಕ ವರದಿ ಹೂಡಿಕೆದಾರರಿಗೆ ನಿರಾಶೆ ಮೂಡಿಸಿತ್ತು.

Q4 ನಲ್ಲೂ ಕೂಡಾ 1938 ಯುಎಸ್ ಮಿಲಿಯನ್ ಡಾಲರ್ ನಂತೆ ಆದಾಯ ಬಂದಿದೆ. ಮಾರುಕಟ್ಟೆ ತಜ್ಞರ ನಿರೀಕ್ಷೆ 1987 ಯುಎಸ್ ಮಿಲಿಯನ್ ಡಾಲರ್ ನಷ್ಟಿತ್ತು.

ಉದ್ಯೋಗ ಅವಕಾಶ

ಉದ್ಯೋಗ ಅವಕಾಶ

ಆದರೆ ಹೊಸ ನೇಮಕಾತಿ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟವಾಗಿ ಇನ್ಫೋಸಿಸ್ ಹೇಳಿದೆ. ಕ್ಯಾಂಪಸ್ ಸಂದರ್ಶನದ ಮೂಲಕ ನೇಮಕಾತಿಯನ್ನು 27,000ಕ್ಕೆ ಇಳಿಸಿದ್ದ ಇನ್ಫೋಸಿಸ್ ಈಗ ಈ ಪೈಕಿ 17,000 ನೇಮಕಾತಿಯನ್ನು ವಿಳಂಬಗೊಳಿಸಿತ್ತು. ಇನ್ನೂ cost cutting ಮಂತ್ರ ಜಪಿಸುತ್ತಿದೆ.

ಮೂರನೇ ತ್ರೈಮಾಸಿಕದ ನಂತರ ಸುಮಾರು 9000 ಉದ್ಯೋಗಿಗಳಿಗೆ ಬಡ್ತಿ ಯೋಗ ಲಭಿಸಲಿದೆ.ಆರ್ಥಿಕ ವರ್ಷದ ಮಧ್ಯಾವಧಿಯಲ್ಲಿ ಒಂದು ಸುತ್ತಿನ ಬಡ್ತಿ ನೀಡಲಾಗಿತ್ತು. ವರ್ಷಾಂತ್ಯದೊಳಗೆ ಇನ್ನೊಂದು ಸುತ್ತಿನ ಬಡ್ತಿ ನೀಡಲಾಗುವುದು ಎಂದು ಸಿಇಒ ಶಿಬುಲಾಲ್ ಘೋಷಿಸಿದ್ದರು.
EBIT ಮಾರ್ಜಿನ್

EBIT ಮಾರ್ಜಿನ್

ಮಾರುಕಟ್ಟೆ ನಿರೀಕ್ಷೆ ಪ್ರಕಾರ EBIT ಶೇ 25 ರಷ್ಟಿರಬೇಕಿತ್ತು. ಆದರೆ, EBIT ಮಾರ್ಜಿನ್ ಶೇ 23.55 ದಾಟಿಲ್ಲ. ಆನ್ ಸೈಟ್ ಉದ್ಯೋಗಿಗಳಿಗೆ ಸಂಬಳ ಏರಿಕೆ ಮುಂತಾದ ಮಾರ್ಜಿನ್ ಬಗ್ಗೆ ಸ್ಪಷ್ಟನೆ ಇಲ್ಲ.

ನಿವ್ವಳ ಆದಾಯ ಇತರೆ ಸಂಪನ್ಮೂಲ

ನಿವ್ವಳ ಆದಾಯ ಇತರೆ ಸಂಪನ್ಮೂಲ

ಇನ್ಫೋಸಿಸ್ ಸಂಸ್ಥೆಯ ನಿವ್ವಳ ಲಾಭ 2394 ಕೋಟಿ ರು ಬಂದಿದ್ದು ನಿರೀಕ್ಷೆಗೆ ತಕ್ಕ ಫಲ ಸಿಕ್ಕಿದೆ. ಆದರೆ, Earnings Per Share ಬಗ್ಗೆ ಯಾವುದೇ ಮಾರ್ಗದರ್ಶನ ಇಲ್ಲದಿರುವುದರಿಂದ ಪ್ರಸಕ್ತ ವರ್ಷದ ತ್ರೈಮಾಸಿಕ ವರದಿಗಳಲ್ಲಿ ಮತ್ತೊಮ್ಮೆ ಏರುಪೇರು ನಿರೀಕ್ಷಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+