ಒಳ್ಳೆ ಈಕ್ವಿಟಿ ಫಂಡ್, ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಅಷ್ಟು ಸುಲಭವಲ್ಲ. ಮ್ಯೂಚುವಲ್ ಫಂಡ್ ಎಷ್ಟು ವರ್ಷದ ಅವಧಿಗೆ ಇದೆ ಒಂದು ವರ್ಷ, ಎರಡು ವರ್ಷ, ಮೂರು ವರ್ಷ ರಿಟರ್ನ್ಸ್, Sharpe ಅನುಪಾತ ಹಾಗೂ ಮಾಹಿತಿ ಅನುಪಾತದ ಮೇಲೆ ಅವಲಂಬಿಸಿರುತ್ತದೆ. ಒಳ್ಳೆ ರಿಟರ್ನ್ಸ್ ನೀಡಬಲ್ಲ ಟಾಪ್ 5 ಈಕ್ವಿಟಿ ಮ್ಯೂಚುವಲ್ ಫಂಡ್ ಗಳ ವಿವರಗಳನ್ನು ನೀಡುತ್ತಿದ್ದೇವೆ.
ಇಲ್ಲಿರುವ ಪಟ್ಟಿಯಲ್ಲಿ ಕೆಲವು ಮ್ಯೂಚುವಲ್ ಫಂಡ್ ಗಳು ವರ್ಷಕ್ಕೆ ಶೇ 30ರಷ್ಟು ರಿಟರ್ನ್ಸ್ ನೀಡುತ್ತವೆ, ಸೆನ್ಸೆಕ್ಸ್ ಹಾಗೂ ನಿಫ್ಟಿಯಲ್ಲಿ ತನ್ನ ಕೈಚಳಕ ನೀಡಿ ಉತ್ತಮ ರಿಟರ್ನ್ಸ್ ನೀಡುವ ಈ ಮ್ಯೂಚುವಲ್ ಫಂಡ್ ಗಳತ್ತ ಒಮ್ಮೆ ಕಣ್ಣಾಡಿಸಿ....
ಎಸ್ ಬಿಐ ಎಂಎಫ್ ಸಿಜಿ
SBI FMCG ಮೇಲೆ ಹೂಡಿಕೆ ಮಾಡಿ ಸರಿ ಸುಮಾರು ಶೇ 37ರಷ್ಟು ರಿಟರ್ನ್ಸ್ ನಿರೀಕ್ಷಿಸಬಹುದು. ಕಳೆದ ವರ್ಷ ಇದೇ ಪ್ರಮಾಣದ ರಿಟರ್ನ್ಸ್ ದಾಖಲಾಗಿದೆ. ತ್ವರಿತ ಗತಿಯ ಗ್ರಾಹಕ ಸರಕು ವಿಭಾಗದಲ್ಲಿ ಮಾತ್ರ ಹೂಡಿಕೆ ಮಾಡಲಾಗುತ್ತದೆ.
ಐಟಿಸಿ, ಯುನೈಟೆಡ್ ಸ್ಪಿರಿಟ್ಸ್, ಇಮಾಮಿ ಹಾಗೂ ಹಿಂದೂಸ್ತಾನ್ ಯುನಿಲಿವರ್ ನಂಥ ಕಂಪನಿಗಳನ್ನು ತನ್ನ ಪೋರ್ಟ್ ಫೋಲಿಯೋದಲ್ಲಿ ಹೊಂದಿದೆ.
ಎಸ್ ಬಿಐ ಫಾರ್ಮಾ
ಕಳೆದ ವರ್ಷದ ರಿಟರ್ನ್ಸ್ ದಾಖಲೆ ಪ್ರಕಾರ ಶೇ 33 ರಷ್ಟು ರಿಟರ್ನ್ಸ್ ಸಿಗಲಿದೆ. ಉತ್ತಮ ಮ್ಯೂಚುವಲ್ ಫಂಡ್ ಶ್ರೇಣಿಗಳಲ್ಲಿ ಎಸ್ ಬಿಐ ಫಾರ್ಮಾ ಯೋಜನೆಯೂ ಒಂದಾಗಿದೆ.
ಸನ್ ಫಾರ್ಮಾ, ಡಾ. ರೆಡ್ಡೀಸ್, ಸಿಪ್ಲಾ ಹಾಗೂ ಗ್ಲೆನ್ ಮಾರ್ಕ್ ಇದರ ತೆಕ್ಕೆಯಲ್ಲಿದೆ. ಸದ್ಯಕ್ಕೆಈ ಸ್ಕೀಮಿನ ನಿವ್ವಳ ಆಸ್ತಿ ಮೌಲ್ಯ 63.66
ಐಸಿಐಸಿಐ ಎಫ್ ಎಂಸಿಜಿ
ಐಸಿಐಸಿಐ ಎಫ್ ಎಂಸಿಜಿ ಪ್ರಗತಿ ಯೋಜನೆ ಕಳೆದ ವರ್ಷ ಶೇ 29ರಷ್ಟು ರಿಟರ್ನ್ಸ್ ನೀಡಿದೆ. ಐಸಿಐಸಿಐ ಪೊರ್ಟ್ ಫೋಲಿಯೋದಲ್ಲಿರುವ ಐಟಿಸಿ ಹೆಚ್ಚಿನ ಸುದ್ದಿ ಮಾಡಿದೆ. ಸದ್ಯಕ್ಕೆ ಈ ಸ್ಕೀಮಿನ ನಿವ್ವಳ ಆಸ್ತಿ ಮೌಲ್ಯ ನಿಧಿ 115.63 ರು
ಯುಟಿಐ ಫಾರ್ಮಾ
ಕಳೆದ ವರ್ಷ ಸುಮಾರು ಶೇ 27 ರಷ್ಟು ರಿಟರ್ನ್ಸ್ ಹೊರ ಹಾಕಿದೆ,. ಯುಟಿಐ ಫಾರ್ಮಾ ಹಾಗೂ ಹೆಲ್ತ್ ಕೇರ್ ಪ್ರಗತಿ ಯೋಜನೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸನ್ ಫಾರ್ಮಾ, ಡಾ. ರೆಡ್ಡೀಸ್ ಹಾಗೂ ಸಿಪ್ಲಾ ಇದರ ಹೂಡಿಕೆ ಲಿಸ್ಟ್ ನಲ್ಲಿದೆ.
ರಿಲಯನ್ಸ್ ಫಾರ್ಮಾ
ಕಳೆದ ಒಂದು ವರ್ಷದಲ್ಲಿ ಬಹುತೇಕ ಶೇ 26ರಷ್ಟು ರಿಟರ್ನ್ಸ್ ನೀಡಿದೆ. ದಿವಿಸ್ ಲ್ಯಾಬ್ ಹಾಗೂ ಡಾ. ರೆಡ್ಡೀಸ್ ಇನ್ನಿತರ ಸಂಸ್ಥೆಗಳ ಮೇಲೆ ನಂಬಿಕೆ ಇಟ್ಟು ಈ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ.
More From GoodReturns

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications