ಮಾರುಕಟ್ಟೆ ಮೌಲ್ಯ : ಟಿಸಿಎಸ್ ನಂತರದ ಸ್ಥಾನದಲ್ಲಿ ರಿಲಯನ್ಸ್

ಮಾರುಕಟ್ಟೆಯಲ್ಲಿ ಟಿಸಿಎಸ್ ಕಿಂಗ್, ರಿಲಯನ್ಸ್ ಸೆಕೆಂಡ್
Reliance Industries: Quotes, News
BSE 1236.00BSE Quote22 (-1.78%)
NSE 1235.30NSE Quote22.2 (-1.80%)
Tata Consultancy Services: Quotes, News
BSE 2250.00BSE Quote48 (2.13%)
NSE 2251.00NSE Quote50.2 (2.23%)
ಮುಂಬೈ, ಜೂ.19: ದೇಶದ ವಿವಿಧ ಕಂಪನಿಗಳ ಈ ವಾರದ ಮಾರುಕಟ್ಟೆ ಮೌಲ್ಯ ವಿವರಗಳು ಹೊರ ಬಿದ್ದಿದೆ. ಮುಖೇಶ್ ಅಂಬಾನಿ ಅವರ ರಿಲಯನ್ಸ್ ಕೈಗಾರಿಕಾ ಸಂಸ್ಥೆ (RIL) ಸರ್ಕಾರಿ ಸ್ವಾಮ್ಯ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ONGC) ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ದೇಶದ ಅತಿದೊಡ್ಡ ಸಾಫ್ಟ್ ವೇರ್ ಉದ್ಯಮ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಬುಧವಾರ(ಜೂ.19) ರಿಲಯನ್ಸ್ ಕಂಪನಿ ಷೇರುಗಳು ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ ಬಿಎಸ್ ಇನಲ್ಲಿ 831.10 ರು ನಂತೆ ಶೇ 0.91 ರಷ್ಟು ಮೇಲಕ್ಕೇರಿತ್ತು. ಇದೇ ವೇಳೆ ಎನ್ಎಸ್ಇನಲ್ಲಿ 831.70 ರು ನಂತೆ ಶೇ 1.01 ರಷ್ಟು ಏರಿಕೆ ಕಂಡಿದೆ.

FMCG ಕ್ಷೇತ್ರದ ಪ್ರಮುಖ ಸಂಸ್ಥೆ ಐಟಿಸಿ 2,60,879 ಮಾರುಕಟ್ಟೆ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನಂತರದ ಸ್ಥಾನ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿ ಪಡೆದಿದ್ದು ಅದರ ಮಾರುಕಟ್ಟೆ ಮೌಲ್ಯ1,91,449 ಕೋಟಿ ರು ನಷ್ಟಿದೆ.

ಒಎನ್ ಜಿಸಿ ಷೇರುಗಳು ಶೇ 1.47ರಷ್ಟು ಕುಸಿತ ಕಂಡಿತ್ತು.ಒಎನ್ ಜಿಸಿ 2,63,466 ಕೋಟಿ ರು ನಷ್ಟು ಮಾರುಕಟ್ಟೆ ಮೌಲ್ಯ ಹೊಂದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾರುಕಟ್ಟೆ ಮೌಲ್ಯ 2,66,548 ಕೋಟಿ ರು ನಷ್ಟಿದೆ. ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆ ಮೌಲ್ಯ2,83,483 ಕೋಟಿ ರು ಆಗಿದೆ.

ಮಾರುಕಟ್ಟೆ ಮೌಲ್ಯ ಲೆಕ್ಕಾಚಾರ: ಷೇರುಪೇಟೆಯಲ್ಲಿ ಕಾಣಿಸಿಕೊಂಡಿರುವ ಕಂಪನಿಗಳ ಒಟ್ಟಾರೆ ಷೇರುಗಳ ಆದಿನ ಅಥವಾ ಆ ಕ್ಷಣದ ಷೇರು ಮೌಲ್ಯವನ್ನು ಗುಣಿಸಿ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಬಿಎಸ್ಇನಲ್ಲಿ ನೋಂದಾಯಿತ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಪ್ರತಿದಿನದ ಮಾರುಕಟ್ಟೆ ಏರಿಳಿತ ಹಾಗೂ ಷೇರು ಮೌಲ್ಯದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಇಲ್ಲಿ ನೀಡಿರುವ ಅಂಕಿ ಅಂಶಗಳು ಬುಧವಾರ ಜೂ.19, 2013ಕ್ಕೆ ಅನ್ವಯವಾಗುವಂತೆ ಮಾತ್ರ ಇದೆ ಎಂದು ಓದಿಕೊಳ್ಳತಕ್ಕದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+