

| 92.888 | ![]() | United States Dollar |
ಮಂಗಳವಾರ ಡಾಲರ್ ಎದುರು 59.67 ಗಡಿ ಮುಟ್ಟಿದ್ದ ರುಪಾಯಿ ಜೂ.20 ರಂದು 59.98 ತನಕ ಸಾಗಿ 60 ರ ಗಡಿ ಮುಟ್ಟುವ ಸೂಚನೆ ನೀಡಿತ್ತ್ತು. ಈಗ ಪ್ರತಿ ಡಾಲರ್ ಗೆ 61 ಪೈಸೆ ದಾಟುವ ಭಯವೂ ಇದೆ. ವಿದೇಶಿ ಹೂಡಿಕೆದಾರರು, ವಿತ್ತೀಯ ಕೊರತೆ, ಸಾಲ ಮಾರುಕಟ್ಟೆ ವ್ಯತ್ಯಯ ಹೀಗೆ ಮುಂದುವರೆಯುವ ಲಕ್ಷಣಗಳಿವೆ. ಫಾರೀನ್ ಐಟಂಗಳತ್ತ ಭಾರತೀಯರು ಕಣ್ಣು ಹಾಕದಿದ್ದರೆ ವಾಸಿ ಏಕೆ? ಇಲ್ಲಿದೆ ಉತ್ತರ ಓದಿ
ಕಳೆದ ಹಲವು ದಿನಗಳಿಂದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿದ್ದು, ಇದರ ಹೊಡೆತ ಷೇರುಮಾರುಕಟ್ಟೆ ಮೇಲೂ ಆಗಿದೆ. ಅಮೆರಿಕದ ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ ಕುಸಿದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಡಾಲರಿಗೆ 60.62 ಪೈಸೆಗೆ ತಲುಪಿದೆ.
ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಕರೆನ್ಸಿ ಎದುರು ಡಾಲರ್ ಮೌಲ್ಯದಲ್ಲಿ ಚೇತರಿಕೆ ಕಂಡಿದ್ದು, ರುಪಾಯಿ ಮೌಲ್ಯ ಮತ್ತಷ್ಟು ಕುಸಿಯಲು ಕಾರಣವಾಯಿತು. ಯುಎಸ್ ರಿಸರ್ವ್ ಚೇರ್ಮನ ಬೆನಾಂರ್ಕೆ ಪ್ರಕಾರ, ಭಾರತದಲ್ಲಿನ ಈಕ್ವಿಟಿ ಹಾಗೂ ವಿದೇಶಿ ಬಾಂಡ್ ಮಾರಾಟ ಅಧಿಕವಾಗಲಿದೆ. ಇದರಿಂದ ಡಾಲರ್ ಬೇಡಿಕೆ ಹೀಗೆ ಮುಂದುವರೆಯುವುದರಿಂದ ರುಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.
ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಸಾಗರೋತ್ತರ ಕರೆನ್ಸಿ ಎದುರು ಡಾಲರ್ ಮೌಲ್ಯ ಚೇತರಿಕೆ ಕಂಡಿದ್ದು ರುಪಾಯಿ ಕುಸಿತಕ್ಕೆ ಕಾರಣವಾಯಿತು. ಯುರೋ ಎದುರು ಡಾಲರ್ ಸ್ಥಿರವಾಗಿದ್ದೆ ತಡ ಆಮದುದಾರರು ಡಾಲರ್ ಬೇಡಿಕೆ ಮುಗಿಬಿದ್ದರು ಅಲ್ಲಿಗೆ ರುಪಾಯಿ ಸ್ಥಿತಿ ಅಧೋಗತಿಗೆ ಇಳಿಯಿತು.
ವಿತ್ತೀಯಕೊರತೆ ನೀಗಿಸಲು ಚಿನ್ನದ ಆಮದು ಮೇಲೆ ನಿಯಂತ್ರಣ ಸಾಧಿಸಲೇ ಬೇಕಾಗಿದೆ. ವಿತ್ತೀಯ ಕೊರತೆ ಹೆಚ್ಚಿದ್ದಂತೆ ದೇಶದ ವಿದೇಶಿ ವಿನಿಯಮಕ್ಕೆ ಹೊಡೆತ ಬೀಳುತ್ತದೆ. ರುಪಾಯಿ ಮೌಲ್ಯ ವ್ಯತ್ಯಯವಾಗಲಿದೆ ಎಂದು ಚಿದಂಬರಂ ಹೇಳಿದ್ದರು.
ಆದರೆ, ಯಾವುದೇ ಕ್ರಮಗಳು ರುಪಾಯಿ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗಿಲ್ಲ. ಯುಪಿಎ ಸರ್ಕಾರ ಬೆಲೆ ಏರಿಕೆ ಬಾಂಬ್ ಮತ್ತೆ ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದು ಜನ ಸಾಮಾನ್ಯರನ್ನು ಕಾಡುತ್ತಿದೆ. ಪೆಟ್ರೋಲ್, ಡೀಸೆಲ್, ಆಹಾರ, ಚಿನ್ನ, ಕೊನೆಗೆ ಬ್ಯಾಂಕ್ ಸಾಲದ ಮೇಲೆ ರುಪಾಯಿ ಮೌಲ್ಯ ಕುಸಿತ ನೇರ ಪರಿಣಾಮ ಬೀರಲಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications
