ಬೆಂಗಳೂರು, ಜು.12: ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಶುಕ್ರವಾರ ಪ್ರಕಟಿಸಿದೆ. ಎನ್ ಆರ್ ನಾರಾಯಣ ಮೂರ್ತಿ ವಾಪಸ್ ಬಂದ ಮೇಲೆ ಹೊರ ಬಿದ್ದಿರುವ ತ್ರೈಮಾಸಿಕ ಫಲಿತಾಂಶದಲ್ಲಿ ಹೊಸತೇನಿದೆ, ನಿರೀಕ್ಷಿತ ಮಟ್ಟ ಮುಟ್ಟಲು ಸಾಧ್ಯವಾಗಿದೆಯೆ? ಹೂಡಿಕೆದಾರರು ಸಂತಸಗೊಂಡಿದ್ದಾರೆಯೇ?
ಆರ್ಥಿಕ ಸಂಕಷ್ಟದಲ್ಲೇ ಕುಂಟುತ್ತಾ ಕ್ವಾಟರ್ ನಿಂದ ಕ್ವಾಟರ್ ಗೆ ಸಾಗುತ್ತಿರುವ ದೇಶದ ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ ಹಲವು ಪ್ರಶ್ನೆಗಳನ್ನು ಹಾಗೆ ಉಳಿಸಿಬಿಟ್ಟಿದೆ.
ಪ್ರಮುಖವಾಗಿ ಎದುರಾಳಿಗಳಾದ ಎಚ್ ಸಿಎಲ್, ವಿಪ್ರೋ ಸಂಸ್ಥೆ ವಿರುದ್ಧ ಇನ್ಫೋಸಿಸ್ ಕಾರ್ಯತಂತ್ರವೇನು? ಕಂಪನಿಯು ಪ್ರಸಕ್ತ ಆರ್ಥಿಕ ವರ್ಷಕ್ಕೆ revenue guidance ಏನು ನೀಡಲಿದೆ? 7.45 ಶತಕೋಟಿ ಡಾಲರ್ ಗೆ ಏರಿದ ಮಿತಿ ಹೆಚ್ಚಳಲಿದೆಯೆ? ಉದ್ಯೋಗಿಗಳ ನೇಮಕಾತಿ ಬಗ್ಗೆ ಶಿಬುಲಾಲ್ ಏನು ಹೇಳುತ್ತಾರೆ? ನ್ಯಾಸ್ ಕಾಂ ಟಾಪ್ ಪಟ್ಟಿಗೇ ಮತ್ತೆ ಸೇರ್ಪಡೆ ಸಾಧ್ಯವೇ? ಬಂಡವಾಳ ಹೂಡಿಕೆ, ಕಂಪನಿ ವಿಸ್ತರಣೆ ಅವಕಾಶಗಳು ಹೇಗಿದೆ? ಎಂಬ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ
ಹೊಸ ನೇಮಕಾತಿ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟವಾಗಿ ಇನ್ಫೋಸಿಸ್ ಈಗಾಗಲೇ ಹೇಳಿದೆ. ಕ್ಯಾಂಪಸ್ ಸಂದರ್ಶನದ ಮೂಲಕ ನೇಮಕಾತಿಯನ್ನು 27,000ಕ್ಕೆ ಇಳಿಸಿದ್ದ ಇನ್ಫೋಸಿಸ್ ಈಗ ಈ ಪೈಕಿ 17,000 ನೇಮಕಾತಿಯನ್ನು ವಿಳಂಬಗೊಳಿಸಿತ್ತು. ಇನ್ನೂ cost cutting ಮಂತ್ರ ಜಪಿಸುತ್ತಿದೆ.
ಮೂರನೇ ತ್ರೈಮಾಸಿಕದ ನಂತರ ಸುಮಾರು 9000 ಉದ್ಯೋಗಿಗಳಿಗೆ ಬಡ್ತಿ ಯೋಗ ಲಭಿಸಲಿದೆ.ಆರ್ಥಿಕ ವರ್ಷದ ಮಧ್ಯಾವಧಿಯಲ್ಲಿ ಒಂದು ಸುತ್ತಿನ ಬಡ್ತಿ ನೀಡಲಾಗಿತ್ತು. ವರ್ಷಾಂತ್ಯದೊಳಗೆ ಇನ್ನೊಂದು ಸುತ್ತಿನ ಬಡ್ತಿ ನೀಡಲಾಗುವುದು ಎಂದು ಸಿಇಒ ಶಿಬುಲಾಲ್ ಘೋಷಿಸಿದ್ದಾರೆ.
PAT ತೆರಿಗೆ ನಂತರದ ಲಾಭ
ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದ ಫಲಿತಾಂಶ (Q1 2014) ತೆರಿಗೆ ನಂತರದ ಲಾಭ 2374 ಕೋಟಿ ರೂ. ಗಳದ್ದಾಗಿದೆ. ಇದು 2300 ಕೋಟಿ ರೂ ಅಂದಾಜಿಗಿಂತ ಹೆಚ್ಚಾಗಿದೆ. ಆದರೆ ಕಳೆದ ಆರ್ಥಿಕ ಸಾಲಿನಲ್ಲಿ ಇದೇ ಅವಧಿಯಲ್ಲಿ ಲಾಭದ ಮೊತ್ತ 2394 ಕೋಟಿ ರೂ ಇತ್ತು.
EBIT ಮಾರ್ಜಿನ್
ಆದಾಯ ಪ್ರಕಟಣೆ ಆಧಾರದ ಮೇಲೆ ಕಂಪನಿಯ ಸರಾಸರಿ ಕಾರ್ಯ ನಿರ್ವಹಣೆ ಮೊತ್ತ ಸೂಚಿಸುವ EBIT ಮಾರ್ಜಿನ್ ಕೂಡಾ ಸುಸ್ಥಿತಿಯಲ್ಲಿದೆ. ಮೊದಲ ತ್ರೈಮಾಸಿಕದಲ್ಲಿ ಶೇ 23.64ರಷ್ಟಿದ್ದು ನಿರೀಕ್ಷಿತ ಮಟ್ಟ ಮುಟ್ಟಿದೆ.
ಮಾರುಕಟ್ಟೆ ನಿರೀಕ್ಷೆ ಪ್ರಕಾರ EBIT ಶೇ 25 ರಷ್ಟಿರಬೇಕಿತ್ತು. ಆನ್ ಸೈಟ್ ಉದ್ಯೋಗಿಗಳಿಗೆ ಸಂಬಳ ಏರಿಕೆ ಮುಂತಾದ ಮಾರ್ಜಿನ್ ಬಗ್ಗೆ ಸ್ಪಷ್ಟನೆ ಇಲ್ಲ.
Dollar guidance
ಡಾಲರ್ ಆದಾಯ ಮುನ್ಸೂಚನೆ ಶೇ 7-10ರಷ್ಟಿದ್ದು, ತಜ್ಞರ ಅಂದಾಜಿಗಿಂತ ಕೆಳಗಿದೆ. ನಾಸಾಕಾಂ ಪ್ರಗತಿ ಅಂದಾಜಿಗಿಂತ ಇದು(dollar guidance) ಕಡಿಮೆ ಇದೆ.
ಡಾಲರ್ ಆದಾಯ ಮೂಲದಿಂದ 1991 ದಶಲಕ್ಷ ಡಾಲರ್ ಆದಾಯ ಗಳಿಕೆಯಾಗಿದೆ. ಇದು ಸಹ ಅಂದಾಜಿಗಿಂತ ಹೆಚ್ಚಾಗಿದೆ. ರೂಪಾಯಿ ಮೌಲ್ಯದ ಕುಸಿತವಿದ್ದರೂ ರೂಪಾಯಿ ಲೆಕ್ಕದಲ್ಲಿ Infosys Technologies ಗಳಿಕೆ 11,267 ಕೋಟಿ ರೂ. ಗಳದ್ದಾಗಿದೆ.
ಕ್ಲೌಡ್ ಹಾಗೂ ಡಾಟ ಸುಸ್ಥಿತಿಯಲ್ಲಿದೆ
Cloud ಮತ್ತು Big Data ಮೇಲೆ ನಾವು ಕೇಂದ್ರೀಕರಿಸುತ್ತಿರುವುದು ನಮಗೆ ಲಾಭದಾಯಕವಾಗಿದೆ. ಇದು ಸುಮಾರು ನೂರು ಸಂದರ್ಭಗಳಲ್ಲಿ ಕೈಗೂಡಿದೆ. ಈ ಕ್ಷೇತ್ರದಲ್ಲಿ ಕಂಪನಿಯು ಕಳೆದ ತ್ರೈಮಾಸಿಕದಲ್ಲಿ 15 ಗುತ್ತಿಗೆಗಳನ್ನು ಗಳಿಸಿಕೊಂಡಿದೆ ಎಂದು ಇನ್ಫಿ ಪ್ರಕಟಣೆ ತಿಳಿಸಿದೆ.
ಹೊಸ ಗ್ರಾಹಕರ ಆಕರ್ಷಣೆ
ಮೊದಲ ತ್ರೈಮಾಸಿಕದಲ್ಲಿ ಸುಮಾರು 66 ಹೊಸ ಗ್ರಾಹಕರನ್ನು ಸೆಳೆದುಕೊಂಡಿದ್ದು, ಪ್ರಸಕ್ತ ವರ್ಷ ಇನ್ನಷ್ಟು ಗ್ರಾಹಕರನ್ನು ಹಾಗೂ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆಯಿದೆ.
ಸಂಬಳ ಏರಿಕೆ ಮಾರ್ಜಿನ್ ಒತ್ತಡ
ಮುಂಬರುವ ತ್ರೈಮಾಸಿಕದಲ್ಲಿ ನಿರೀಕ್ಷೆ ಇನ್ನಷ್ಟು ಹೆಚ್ಚುವುದರಿಂದ ಅದಕ್ಕೆ ಪೂರಕವಾದ ಸಂಬಳ ಏರಿಕೆ, ಉದ್ಯೋಗಿಗಳ ಆರ್ಥಿಕ ಸುಧಾರಣೆ ಕ್ರಮ ಕೈಗೊಳ್ಳುವುದು ಇನ್ಫೋಸಿಸ್ ಗೆ ಅನಿವಾರ್ಯವಾಗಿದೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ನೀಡಿದ ಪ್ರಕಟಣೆಯಂತೆ ಮುಂಬರುವ ತ್ರೈಮಾಸಿಕಗಳಲ್ಲಿ ಮಾರ್ಜಿನ್ 300 ಮೂಲಾಂಶಕ್ಕಿಂತ ಕೆಳಗಿರುವ ಸೂಚನೆ ಸಿಕ್ಕಿದೆ.
ಮಾರುಕಟ್ಟೆಯಲ್ಲಿ ಒಳ್ಳೆ ಪ್ರತಿಕ್ರಿಯೆ
ಇನ್ಫೋಸಿಸ್ ಷೇರುಗಳು ಒಳ್ಳೆ ವಹಿವಾಟು ನಡೆಸಿದ್ದು, ಶೇ 13 ರಷ್ಟು ಏರಿಕೆ ಕಂಡಿದ್ದು ಒಳ್ಳೆ ಬೆಳವಣಿಗೆಯಾಗಿದೆ. ಇದರಿಂದಾಗಿ ದೊಡ್ಡ ದೊಡ್ಡ ವಿದೇಶಿ ಬಂಡವಾಳ ಹೂಡಿಕೆದಾರರು ಇನ್ಫೋಸಿಸ್ ನತ್ತ ತಿರುಗಿ ನೋಡುವಂತಾಗಿದೆ.


Click it and Unblock the Notifications