ಮುಂಬೈ, ಸೆ.20: ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಮತ್ತಿತರ ಸವಾಲುಗಳನ್ನು ಮುಂದಿಟ್ಟು ತ್ರೈಮಾಸಿಕ ಹಣಕಾಸು ನೀತಿಯನ್ನು ನೂತನ ಗವರ್ನರ್ ರಘುರಾಮ್ ಜಿ ರಾಜನ್ ಅವರು ಪ್ರಥಮಬಾರಿಗೆ ಶುಕ್ರವಾರ ಪ್ರಕಟಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತನ್ನ ತ್ರೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೊ ದರವನ್ನು ಶೇ.0.25ರಷ್ಟು ಹೆಚ್ಚಿಸಿದೆ. ಆದರೆ ನಗದು ಮೀಸಲು ಅನುಪಾತ(ಸಿಆರ್ ಆರ್)ದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರೆಪೊ ದರವನ್ನು ಶೇ.7.25ರಿಂದ ಶೇ.7.5ಕ್ಕೆ ಏರಿಕೆ ಮಾಡಲಾಗಿದೆ. ರೆಪೊ ದರ ಹೆಚ್ಚಳದಿಂದ ಇಎಂಐ ಮೊತ್ತ ಹೆಚ್ಚಳವಾಗಲಿದೆ.ಹೀಗಾಗಿ ಬ್ಯಾಂಕಿನಿಂದ ಪಡೆಯುವ ಗೃಹ ಹಾಗೂ ಕಾರು ಸಾಲ ಮತ್ತಷ್ಟು ಏರಿಕೆಯಾಗಲಿದೆ.
ಷೇರುಪೇಟೆ ಕುಸಿತ: ಸೆನ್ಸೆಕ್ಸ್ 500 ಅಂಕಗಳಷ್ಟು ಮತ್ತು ನಿಫ್ಟಿ 160 ಅಂಕಗಳಷ್ಟು ಕುಸಿತ ಕಂಡಿದೆ. ಬ್ಯಾಂಕುಗಳ ಷೇರುಗಳು ನೆಲಕಚ್ಚುತ್ತಿವೆ.
ಪ್ರಪ್ರಥಮ ಬಾರಿಗೆ ತ್ರೈಮಾಸಿಕ ವರದಿ ಪ್ರಕಟಿಸಿದ ನಂತರ ಮುಂಬೈನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್ ಬಿಐ ಗವರ್ನರ್ ರಘುರಾಮ್ ರಾಜನ್, 'ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೊ ದರವನ್ನು ಹೆಚ್ಚಿಸಲಾಗಿದೆ ಮತ್ತು ರುಪಾಯಿ ಮೌಲ್ಯ ವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ' ಎಂದು ಹೇಳಿದರು. ರುಪಾಯಿ ಅಪಮೌಲ್ಯ ತಡೆಗಟ್ಟಲು ರಾಜನ್ ತೆಗೆದುಕೊಂಡ ನಿರ್ಣಯಗಳು ಯಾವ ರೀತಿ ಜನತೆಗೆ ತಟ್ಟಲಿದೆ ಮುಂದೆ ಓದಿ....ಓದುವ ಮುನ್ನ ಕೆಳಗಿನ ವಿವರಣೆ ಗಮನಿಸಿ..
ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ
ರೆಪೋ ದರ ಕಡಿತ
ಕೆಲವು ಆರ್ಥಿಕ ತಜ್ಞರು, ವಿಶ್ಲೇಷಕರ ಎಣಿಕೆಯಂತೆ ರೆಪೋ ದರ ಏರಿಕೆಯಾಗಿದೆ. ಹಣ ದುಬ್ಬರಕ್ಕೆ ಕಡಿವಾಣ ಹಾಕಲು ಇದು ಅಗತ್ಯವಾಗಿದೆ. ಆದರೆ, ರೆಪೋ ದರ ಏರುತ್ತಿದ್ದಂತೆ ಬ್ಯಾಂಕ್ ನಿಂದ ಪಡೆಯುವ ಸಾಲದ ಬಡ್ಡಿದರ ಏರಿಕೆಯಾಗುತ್ತದೆ. ಜನಸಾಮಾನ್ಯರಿಗೆ ಇದು ಹೊರೆಯಾಗಲಿದೆ.
ಅಲ್ಲದೆ, ರೆಪೊ ದರ ಏರಿಕೆ ಆರ್ಥಿಕ ಪ್ರಗತಿಗೆ ಪೂರಕವಾಗುವುದಿಲ್ಲ. ರುಪಾಯಿ ಅಪಮೌಲ್ಯದಿಂದ ಆಗಿರುವ ಹಣದುಬ್ಬರ ತಗ್ಗಿಸಲು ರೆಪೋ ದರವನ್ನು ಆರ್ ಬಿಐ ಏರಿಕೆ ಮಾಡಿದೆ.
ಸಿಆರ್ ಆರ್ ದರದ ಬಗ್ಗೆ
ದೈನಂದಿನ ನಗದು ಮೀಸಲು ಅನುಪಾತ(ಸಿಆರ್ ಆರ್)ದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಶೇ 99 ರಿಂದ ಶೇ 95ಕ್ಕೆ ಇಳಿಸಲಾಗಿದೆ. ಇದು ಸೆ.21, 2013ರಿಂದ ಅನ್ವಯವಾಗಲಿದೆ. ಆದರೆ, ಸಾಮಾನ್ಯ ಸಿಆರ್ ಅರ್ ಪ್ರಮಾಣದಲ್ಲಿ ಬದಲಾವಣೆ ಕಂಡು ಬಂದಿಲ್ಲ. ನಗದು ಮೀಸಲು ಅನುಪಾತ(ಸಿಆರ್ ಆರ್) ಶೇ.4ರ ಪ್ರಮಾಣದಲ್ಲೇ ಇದೆ.
ಷೇರುಪೇಟೆ ಗತಿ
ಆರ್ ಬಿಐ ನೀತಿ ಪ್ರಕಟಿಸುತ್ತಿದ್ದಂತೆ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಗುರುವಾರ 615 ಪಾಯಿಂಟ್ಸ್ ಕುಸಿತ ಕಂಡಿತ್ತು.ಶುಕ್ರವಾರ ಸೆನ್ಸೆಕ್ಸ್ 500 ಅಂಕಗಳಷ್ಟು ಮತ್ತು ನಿಫ್ಟಿ 160 ಅಂಕಗಳಷ್ಟು ಕುಸಿತ ಕಂಡಿದೆ. ಬ್ಯಾಂಕುಗಳ ಷೇರುಗಳು ನೆಲಕಚ್ಚುತ್ತಿವೆ.
ಬ್ಯಾಂಕಿಂಗ್ ಷೇರುಗಳು
ಆರ್ ಬಿಐ ನೀತಿ ಪ್ರಕಟಿಸುತ್ತಿದ್ದಂತೆ ಷೇರುಪೇಟೆಯಲ್ಲಿ ಬ್ಯಾಂಕ್ ಷೇರುಗಳು ಕುಸಿತಕಂಡಿವೆ. ಯಸ್ ಬ್ಯಾಂಕ್ ಶೇ 11 ರಷ್ಟು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ 9 ರಷ್ಟು, ಬ್ಯಾಂಕ್ ಆಫ್ ಇಂಡಿಯಾ ಶೇ 8 ರಷ್ಟು, ಆಕ್ಸಿಸ್ ಬ್ಯಾಂಕ್ ಶೇ 7 ಹಾಗೂ ಸ್ಟೇಟ್ ಬ್ಯಾಂಕ್ ಗಳು ಸರಾಸರಿ ಶೇ 5.25 ರಷ್ಟು ಕುಸಿತ ಕಂಡಿದೆ.
ಎಂಎಸ್ ಎಫ್ ದರ
ಮಾರ್ಜಿನಲ್ ಸ್ಟಾಡಿಂಗ್ ಫೆಸಿಲಿಟಿ(ಎಂಎಸ್ ಎಫ್) ದರವನ್ನು 75 ಮೂಲಾಂಶಗಳಷ್ಟು ಇಳಿಸಲಾಗಿದೆ. ಅಂದರೆ ಶೇ 10.25 ರಿಂದ ಶೇ 9.5ಕ್ಕೆ ಇಳಿದಿದೆ.
ರೆಪೋದರ ಆಧಾರಿಸಿ ಜುಲೈ 17ರಿಂದ ಅನ್ವಯವಾಗುವಂತೆ ಬ್ಯಾಂಕುಗಳು ಶೇ 10.25ರಂತೆ ಆರ್ ಬಿಐ ನಿಂದ ಬ್ಯಾಂಕುಗಳು ಹಣ ಪಡೆಯುತ್ತಿದ್ದವು. ಈಗ ಇದು 75ಮೂಲಾಂಶಗಳಷ್ಟು ಇಳಿಸಲಾಗಿದೆ. ಮಾರುಕಟ್ಟೆ ಅಂದಾಜು ಶೇ 0.25ರಷ್ಟಿತ್ತು.
ಹಣದುಬ್ಬರ
ಆರ್ ಬಿಐ ತ್ರೈಮಾಸಿಕ ನೀತಿ ಗಮನಿಸಿದರೆ ಆರ್ಥಿಕ ಪ್ರಗತಿ ಬಗ್ಗೆ ಹೆಚ್ಚಿನ ಗಮನ ಹರಿಸಿದಂತೆ ಕಾಣುವುದಿಲ್ಲ. ಹಣದುಬ್ಬರದ ಜತೆ ಗುದ್ದಾಡುತ್ತಿದೆ.
ಇಂಧನ ದರ ತ್ವರಿತ ಗತಿ ಏರಿಕೆ, ರುಪಾಯಿ ಅಪಮೌಲ್ಯ, ಅಂತಾರಾಷ್ಟ್ರೀಯ ಸರಕು ಸಾಮಾಗ್ರಿ ದರ ಏರಿಕೆ ಎಲ್ಲವನ್ನು ಆರ್ ಬಿಐ ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ.
CPI(ಗ್ರಾಹಕ ದರ ಸೂಚ್ಯಂಕ) ಎಣಿಕೆಯಂತೆ ರೀಟೇಲ್ ಮಟ್ಟದಲ್ಲಿ ಹಣದುಬ್ಬರ ನಾಲ್ಕು ವರ್ಷದಿಂದ ಏರಿಕೆ ಕಾಣುತ್ತಲೇ ಇದೆ. ಖಾರಿಫ್ ಬೆಳೆ ಕೊಯ್ಲಿನ ನಂತರ ಸಿಪಿಐ ಹಣದುಬ್ಬರದಲ್ಲಿ ಬದಲಾವಣೆ ಕಾಣಬಹುದಾಗಿದೆ ಎಂದು ಆರ್ ಬಿಐ ಭರವಸೆ ನೀಡಿದೆ.
More From GoodReturns

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications