ಒಂದೇ ತಾಣದಲ್ಲಿ ಐಟಿ ರಿಟರ್ನ್ಸ್, ಪಾನ್ ಕಾರ್ಡ್

ನವದೆಹಲಿ, ಸೆ.22: ಆದಾಯ ತೆರಿಗೆ ಪಾವತಿ ಇನ್ನಷ್ಟು ಸುಲಭಗೊಳಿಸಲು ಸರಳ ವಿಧಾನವೊಂದನ್ನು ವಿತ್ತ ಸಚಿವಾಲಯ ಸೂ‌ಚಿಸಿದೆ. ಅದರಂತೆ, ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್ ತಾಣ ಬಳಸಿ ತೆರಿಗೆ ಸಂಬಂಧಿಸಿದ ಎಲ್ಲಾ ಸೇವೆಗಳು, ಚಟುವಟಿಕೆಗಳನ್ನು ಏಕಕಾಲಕ್ಕೆ ಮಾಡಬಹುದಾಗಿದೆ.

ತೆರಿಗೆ ಪಾವತಿದಾರರು ತೆರಿಗೆ ಮರು­ಪಾವತಿ ಮತ್ತು ಅದಕ್ಕೆ ಸಂಬಂ­ಧಿಸಿದ ಕಾರ್ಯಗಳು ಅಥವಾ ಪ್ಯಾನ್‌ ಕಾರ್ಡ್‌ ಪಡೆಯಲು ಅನುಕೂಲವಾಗುವಂತೆ ಆದಾಯ ತೆರಿಗೆ ಇಲಾಖೆಯು ಸುಧಾರಿತ ಏಕಗವಾಕ್ಷಿ ವ್ಯವಸ್ಥೆಯಡಿ ಹೊಸ ವೆಬ್‌ಸೈಟ್‌ ಅಭಿವೃದ್ಧಿ ಪಡಿಸಿದೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಸೋಮ­ವಾರ ಈ ವೆಬ್‌ಸೈಟ್‌ ಬಿಡುಗಡೆ ಮಾಡಬೇಕಿತ್ತು. ಅದರೆ, ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಕಾರಣ ವೆಬ್ ಸೈಟ್ ಲೋಕಾರ್ಪಣೆ ವಿಳಂಬವಾಗಿದೆ.

ಈಗ ಚಾಲ್ತಿಯಲ್ಲಿರುವ ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್‌­ಸೈಟ್‌ನ ಪರಿಷ್ಕೃತಗೊಂಡಿದೆ.ನೂತನ ವೆಬ್‌ಸೈಟ್‌ ಗ್ರಾಹಕರ ಸ್ನೇಹಿ­ಯಾಗಿದ್ದು ಒಂದೇ ಸಮಯದಲ್ಲಿ ಬಹು­ಸಂಖ್ಯೆಯ ಒತ್ತಡ ನಿಭಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದೇ ತಾಣದಲ್ಲಿ ಐಟಿ ರಿಟರ್ನ್ಸ್, ಪಾನ್ ಕಾರ್ಡ್
Indices

ಒಂದೇ ವೆಬ್ ತಾಣದಲ್ಲಿ ಐಟಿ ರಿಟನ್ಸ್ ಸಲ್ಲಿಕೆ, ಪಾನ್ ಕಾರ್ಡ್ ಅರ್ಜಿ ಸೌಲಭ್ಯ ಸೇರಿದಂತೆ ಎಲ್ಲಾ ಸೇವೆಗಳು ಏಕಕಾಲಕ್ಕೆ ಮಾಡಬಹುದಾಗಿದೆ. ತೆರಿಗೆ ಕಾಯ್ದೆ ಮಾಹಿತಿ, ವಿವಿಧ ನೋಟಿಸ್ ಗಳು, ಸಚಿವಾಲಯದ ಸುತ್ತೋಲೆಗಳು ಇನ್ನಿತರ ಮಾಹಿತಿಗಳು ಇಲ್ಲಿ ಲಭ್ಯವಿದೆ.

ಆದಾಯ ತೆರಿಗೆ ಇಲಾಖೆ ವೆಬ್ ತಾಣ ಹೆಚ್ಚಿನ ಟ್ರಾಫಿಕ್ ನಿಂದಾಗಿ ಕೆಲ ಕಾಲ ಸ್ಥಗಿತಗೊಳ್ಳುತ್ತಿತ್ತು. ಈಗ ಸಮಸ್ಯೆಗೆ ಪರಿಹಾರ ಸಿಕ್ಕಿದ್ದಂತಾಗಿದೆ. ಹೆಚ್ಚಿನ ಮಾಹಿತಿಗೆ ಆದಾಯ ತೆರಿಗೆ ಇಲಾಖೆ ವೆಬ್ ತಾಣ ನೋಡಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಬ್ಯಾಂಕುಗಳಿಗೆ ಇ ಪಾವತಿ ಸೌಲಭ್ಯ ಒದಗಿಸಲು ಮಾನ್ಯತೆ ನೀಡಿದೆ. ಈ ರೀತಿ 29 ಬ್ಯಾಂಕುಗಳ ಪಟ್ಟಿ ಇಲ್ಲಿದೆ. ಈ ಬ್ಯಾಂಕ್ ಗಳಲ್ಲಿ ನೀವು ಇ ಪಾವತಿ ಮಾಡಬಹುದು. ವೆಬ್ ಸೈಟ್ ಗಳು ಹಾಗೂ ಐಟಿ ರಿಟರ್ನ್ಸ್ ಗೆ ತಗುಲುವ ವೆಚ್ಚಗಳ ವಿವರಗಳನ್ನು ಇಲ್ಲಿ ನೋಡಿ.

ಆನ್ ಲೈನ್ ಮೂಲಕ ತೆರಿಗೆ ಪಾವತಿಯಿಂದ ಅನೇಕ ಅನುಕೂಲಗಳಿದೆ ಏನು ಅನುಕೂಲ? ಆನ್ ಲೈನ್ ಮೂಲಕ ಪಾವತಿ ಮಾಡುವುದು ಎಷ್ಟು ಸುರಕ್ಷಿತ? ಇ ಪಾವತಿಯ ಬಗ್ಗೆ ಇರುವ ನಂಬಿಕೆಗಳು ನೈಜತೆ ಏನು ಎಂಬುದರ ವಿವರ ಇಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+