ಫೋರ್ಬ್ ಪಟ್ಟಿಯಲ್ಲಿ ಐವರು ಭಾರತೀಯ ಸಂಜಾತರು

ನ್ಯೂಯಾರ್ಕ್, ಸೆ.30: ಫೋರ್ಬ್ ಕಂಪೆನಿ ಬಿಡುಗಡೆ ಮಾಡಿರುವ ಅಮೆರಿಕದ 400 ಮಂದಿ ಶ್ರೀಮಂತರ ಪಟ್ಟಿಯಲ್ಲಿ ಭಾರತ ಮೂಲದ 5 ಮಂದಿ ಅಮೆರಿಕ ನಿವಾಸಿಗಳು ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‍ಗೇಟ್ಸ್ ಅವರ ಆಸ್ತಿ ಮೌಲ್ಯ ಬರೋಬ್ಬರಿ 81 ಶತಕೋಟಿ ಅಮೆರಿಕ ಡಾಲರ್‌.

ಅಮೆರಿಕದ ಫೋರ್ಬ್ ಕಂಪೆನಿ ಸಿದ್ಧಪಡಿಸಿದ 2014ರ ಈ ಪಟ್ಟಿಯಲ್ಲಿ ಸಿಂಟೆಲ್ ಹೊರಗುತ್ತಿಗೆ ಕಂಪೆನಿ ಸಂಸ್ಥಾಪಕ ಭಾರತ್ ದೇಸಾಯಿ, ಉದ್ಯಮಿ ಜಾನ್ ಕಪೂರ್, ಸಿಂಫೋನಿ ತಂತ್ರಜ್ಞಾನ ಸಂಸ್ಥೆ ಸಂಸ್ಥಾಪಕ ರೋಮೇಶ್ ವಾಧ್ವಾನಿ, ಸಿಲಿಕಾನ್ ವ್ಯಾಲಿ ಏಂಜೆಲ್ ಹೂಡಿಕೆದಾರರಾದ ರಾಮ್ ಶ್ರೀರಾಮ್ ಮತ್ತು ಬಂಡವಾಳ ಹೂಡಿಕೆದಾರ ವಿನೋದ್ ಖೋಸ್ಲಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.[ಈತ ಸಂಭ್ರಮಿಸುವುದಕ್ಕೆ ಕಾರಣ ಬೇಕಿಲ್ಲǃ]

ಫೋರ್ಬ್ ಪಟ್ಟಿಯಲ್ಲಿ ಐವರು ಭಾರತೀಯ ಸಂಜಾತರು

ಅಮೆರಿಕದಲ್ಲಿ ಈ ವರ್ಷ ಶ್ರೀಮಂತರ ಪಟ್ಟಿ ದಾಖಲೆ ಸ್ಥಾಪಿಸಿದೆ. 400 ಜನ ಶ್ರೀಮಂತರು ಪಟ್ಟಿಯಲ್ಲಿ ಸೇರಿದ್ದಾರೆ. ಕಳೆದ ಒಂದು ವರ್ಷದಿಂದೀಚೆಗೆ ಅಮೆರಿಕದಲ್ಲಿ ಹೆಚ್ಚಿನ ಸಂಪತ್ತು ಕ್ರೋಢೀಕರಣದ ಜತೆಗೆ, ಶ್ರೀಮಂತರ ಸಂಖ್ಯೆಯೂ ಹೆಚ್ಚಿದೆ. ವರ್ಷದ ಹಿಂದೆ 270 ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದವರು ಈ ಬಾರಿ 2.29 ಲಕ್ಷ ಕೋಟಿ ಡಾಲರ್ ವಹಿವಾಟು ನಡೆಸಿದ್ದಾರೆ. ಶೇರು ಮಾರುಕಟ್ಟೆ ವಹಿವಾಟು ಹೆಚ್ಚಿದ್ದು ಶ್ರೀಮಂತರ ಆಸ್ತಿ ದ್ವಿಗುಣವಾಗುತ್ತಿದೆ ಎಂದು ಪಟ್ಟಿ ಹೇಳಿದೆ.

ಫೇಸ್‌ ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್ 11 ನೇ ಸ್ಥಾನ ಪಡೆದುಕೊಂಡಿದ್ದಾರೆ. 15 ಮಿಲಿಯನ್‌ ಇದ್ದ ಜುಕರ್‌ಬರ್ಗ್ ಆಸ್ತಿ 34 ಬಿಲಿಯನ್‌ ಆಗಿದೆ. ಹೊಸ ಹೊಸ ಶ್ರೀಮಂತರು ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಫೋರ್ಬ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+