ಮುಂಬೈ, ಅ.14: ಡಿಎಲ್ಎಫ್ ಅಧ್ಯಕ್ಷ ಕೆಪಿ ಸಿಂಗ್ ಸೇರಿದಂತೆ ಸಂಸ್ಥೆಯ ಪ್ರಮುಖ ಆರು ಅಧಿಕಾರಿಗಳಿಗೆ ಷೇರು ಪೇಟೆ ಕಡೆ ಮೂರು ವರ್ಷಗಳ ಕಾಲ ತಲೆ ಹಾಕದಂತೆ ಸೆಕ್ಯೂರೀಟೀಸ್ ಮತ್ತು ಎಕ್ಸ್‌ಚೆಂಜ್ ಬೋರ್ಡ್[ಸೆಬಿ] ನಿರ್ಬಂಧ ಹೇರಿದ ಬೆನ್ನಲ್ಲೇ ಸಂಸ್ಥೆಯ ಷೇರುಗಳು ನೆಲಕಚ್ಚಿವೆ.
ಕೆಪಿ ಸಿಂಗ್ ಕುಟುಂಬ ಸೇರಿದಂತೆ ಡಿಎಲ್ ಎಫ್ ಮ್ಯಾನೆಜಿಂಗ್ ಡೈರೆಕ್ಟರ್ ಟಿಸಿ ಘೋಯಲ್, ಕಾಮೇಶ್ವರ ಸ್ವರೂಪ್ ಮತ್ತು ರಮೇಶ್ ಸಾಕಾ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಸೆಬಿ ಡಿಎಲ್ ಎಫ್ ಸಂಸ್ಥೆಯ ಉಪಾಧ್ಯಕ್ಷ ಕೆಪಿ ಸಿಂಗ್ ಪುತ್ರ ರಾಜೀವ್ ಸಿಂಗ್ ಮತ್ತು ಪುತ್ರಿ ಪಿಯಾ ಸಿಂಗ್ ಅವರಿಗೂ ನಿಷೇಧ ಹೇರಿದೆ.[ಮೂರು ವರ್ಷ ನಿಷೇಧದ ಸುದ್ದಿ ಓದಿ]
ಡಿಎಲ್ ಎಫ್ ಸಂಸ್ಥೆ ಷೇರುಗಳು ಮಂಗಳವಾರ ಬೆಳಗ್ಗೆ ಶೇ 27ರಷ್ಟು ಇಳಿಮುಖ ಕಂಡಿದೆ. ಸೋಮವಾರ ಷೇರುಗಳು ಶೇ 4ರಷ್ಟು ಇಳಿಕೆ ಕಂಡಿತ್ತು.

ಈ ಸಮಯಕ್ಕೆ(12.30) ಬಿಎಸ್ ಇನಲ್ಲಿ 108.90 ಮುಖಬೆಲೆಯ ಷೇರುಗಳು 37.80ರಷ್ಟು ಮೌಲ್ಯವನ್ನು ಕಳೆದುಕೊಂಡು ಶೇ 25.77ರಷ್ಟು ಕುಸಿತ ಕಂಡಿದೆ. ಇದೇ ವೇಳೆ ಎನ್ಎಸ್ಇಯಲ್ಲಿ 108.75 ರು ನಂತೆ ಶೇ 25.97ರಷ್ಟು ಇಳಿಮುಖವಾಗಿದೆ. ಡಿಎಲ್ ಎಫ್ ಷೇರುಗಳ ಸ್ಥಿತಿ ಹೀಗೆ ಇನ್ನಷ್ಟು ಕಾಲ ಮುಂದುವರೆಯುವ ಲಕ್ಷಣಗಳು ಗೋಚರಿಸುತ್ತಿದೆ.
ಸಂಸ್ಥೆ ಮೇಲಿರುವ 19,100 ಕೋಟಿ(3.13 ಯುಎಸ್ ಡಾಲರ್) ರು ಗೂ ಅಧಿಕ ಸಾಲದ ಹೊರೆಯನ್ನು ತಗ್ಗಿಸಲು ಆಸ್ತಿ ಮಾರಾಟವೊಂದೇ ದಾರಿ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 10,000 ಕೋಟಿ ವಾರ್ಷಿಕ ಆದಾಯ ಹೊಂದಿರುವ ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್ ಎಫ್ ಮಾರುಕಟ್ಟೆ ಮೌಲ್ಯ 26,000 ಕೋಟಿ ರು ಮೀರುತ್ತದೆ. 20007ರಲ್ಲಿ ಐಪಿಒ ಮೂಲಕ 9.187 ಕೋಟಿ ರು ಗಳಿಸಿ ದಾಖಲೆ ಬರೆದ ಬೆನ್ನಲ್ಲೇ ಮಾರುಕಟ್ಟೆ ಮೌಲ್ಯವನ್ನು 1 ಲಕ್ಷ ಕೋಟಿ ರು((1.2 ಬಿಲಿಯನ್ ಡಾಲರ್)ಗೆ ಹೆಚ್ಚಿಸಿಕೊಂಡಿತು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications