ಮುಂಬೈ, ಅ. 17 : ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಐಟಿ ಕಂಪನಿಗಳ ಷೇರುಗಳು ಪಾತಾಳದತ್ತ ಮುಖ ಮಾಡಿದ್ದವು. ಪ್ರಮುಖ ಸಾಫ್ಟ್ ವೇರ್ ಕಂಪನಿಗಳಾದ ಟಿಸಿಎಸ್ ಮತ್ತು ಎಚ್ ಸಿಎಲ್ ಷೇರುಗಳು ತೀವ್ರ ತೆರನಾದ ಕುಸಿತ ಕಂಡವು.
ಟಿಸಿಎಸ್ ಕಂಪನಿ ಒಂದೇ ದಿನ ತನ್ನ ಷೇರುಗಳಲ್ಲಿ ಶೇ. 9ಷ್ಟು ಕಳೆದುಕೊಂಡಿದೆ. ಒಟ್ಟು 45 ಸಾವಿರ ಕೋಟಿ ರೂ. ಮಾರುಕಟ್ಟೆ ಮೌಲ್ಯಕ್ಕೆ ಬಂದು ನಿಂತಿದೆ. ಟಿಸಿಎಸ್ ತನ್ನ ಎರಡನೇ ತ್ರೈಮಾಸಿಕನಲ್ಲಿ ಈ ರೀತಿ ನಷ್ಟ ಅನುಭವಿಸಿರುವುದು ಇದೇ ಮೊದಲು.[350 ಅಂಕ ಕುಸಿತ ಕಂಡ ಭಾರತೀಯ ಷೇರು ಮಾರುಕಟ್ಟೆ]
ನಷ್ಟದ ವಹಿವಾಟು ಅನುಭವಿಸಿದ ಟಿಸಿಎಸ್ ಮಾರುಕಟ್ಟೆ ಮೌಲ್ಯ 4,78,889.40 ಕೋಟಿ ರೂಪಾಯಿಂದ 45,823.6 ಕೋಟಿ ರೂಪಾಯಿಗೆ ಇಳಿಯಿತು.

ಇತ್ತ ಎಚ್ ಸಿಎಸ್ ಕಂಪನಿಯ ಷೇರುಗಳು ಶೇ. 9.6 ರಷ್ಟು ಕುಸಿತ ಕಂಡಿವೆ. ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆಯ ಷೇರುಗಳು ಕುಸಿತ ಕಂಡಿರುವುದು ಆಶ್ಚರ್ಯಕರ ಬೆಳವಣಿಗೆ ಎಂದೇ ಹೇಳಬಹುದು. ಸಪ್ಟೆಂಬರ್ 30 ಕ್ಕೆ ಕೊನೆಗೊಂಡ ಮೊದಲನೇ ತ್ರೈಮಾಸಿಕದಲ್ಲಿ ಎಚ್‌ಸಿಎಸ್ ಕಂಪನಿ ಉತ್ತಮ ಲಾಭ ಗಳಿಸಿತ್ತು. ಆದರೆ ಎರಡನೇ ತ್ರೈಮಾಸಿಕ ಆರಂಭದಲ್ಲಿಯೇ ಕುಸಿತ ಕಂಡಿದೆ.[ಸೆಬಿ ನಿಷೇಧ, ನೆಲ ಕಚ್ಚಿದ ಡಿಎಲ್ಎಫ್ ಷೇರು]
ಐಟಿ ಮಾರುಕಟ್ಟೆಯಲ್ಲಿ ಶುಕ್ರವಾರ ಒತ್ತಡ ಕಂಡುಬಂದರೂ ಉಳಿದ ಸಾಫ್ಟ್ ವೇರ್ ಕಂಪನಿ ಷೇರುಗಳು ಸಹ ಇಳಿಕೆ ಕಂಡವು. ವಿಪ್ರೋ ಕಂಪನಿ ಷೇರುಗಳು ಶೇ. 1.08, ಇನ್ಫೋಸಿಸ್ ಶೇ.0.3 , ಟೆಕ್ ಮಹೀಂದ್ರಾ ಶೇ. 1.28 ಅಂಕಗಳ ಕುಸಿತ ಕಂಡಿದ್ದು ಶುಕ್ರವಾರದ ಪ್ರಮುಖ ಅಂಶ.


Click it and Unblock the Notifications