ಜಿಂದಾಲ್ ವಿರುದ್ಧ ಎಫ್ ಐಆರ್, ಷೇರುಗಳು ಕುಸಿತ

ಮುಂಬೈ, ಅ.20: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ ಉಕ್ಕು ಸಂಸ್ಥೆ ವಿರುದ್ಧ ಸಿಬಿಐ ಭಾನುವಾರ ಮತ್ತೊಮ್ಮೆ ಎಫ್ ಐಆರ್ ದಾಖಲಿಸಿಕೊಂಡಿದೆ. ಇದರ ಪರಿಣಾಮ ಸೋಮವಾರ ಕಂಪನಿ ಷೇರುಗಳು ಅಧೋಗತಿ ಹಿಡಿಯಿತು.

Gare Palma IV/1 ಕಲ್ಲಿದ್ದಲು ಬ್ಲಾಕ್ ಗಳನ್ನು ಛತ್ತೀಸ್ ಗಢದಲ್ಲಿರುವ ಜಿಂದಾಲ್ ಸ್ಟ್ರಿಪ್ಸ್ ಲಿ.(ಈಗ ಜಿಎಸ್ ಪಿಎಲ್) ಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಎಫ್ ಐಆರ್ ನಲ್ಲಿ ದಾಖಲಾಗಿದೆ. ಕಂಪನಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120 ಬಿ, 409, 420, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 13(1) (ಸಿ), 13(1) (ಡಿ) ಅನ್ವಯ ಪ್ರಕರಣ ದಾಖಲಾಗಿದೆ. ಕಲ್ಲಿದ್ದಲು ಪ್ರಕರಣದಲ್ಲಿ ಇದು 36ನೇ ಎಫ್ ಐಆರ್ ಆಗಿದೆ.

ಜಿಂದಾಲ್ ವಿರುದ್ಧ ಎಫ್ ಐಆರ್, ಷೇರುಗಳು ಕುಸಿತ

ಸೋಮವಾರ ಜಿಂದಾಲ್ ಸ್ಟೀಲ್ಸ್ ಕಂಪನಿ ಷೇರುಗಳು ಸುಮಾರು ಶೇ 8ರಷ್ಟು ಕುಸಿತ ಕಂಡಿತ್ತು. ಬಿಎಸ್ ಇನಲ್ಲಿ 148.10 ರು ಮುಖಬೆಲೆಯೊಂದಿಗೆ ಟ್ರೇಡಿಂಗ್ ಶುರು ಮಾಡಿದ ಕಂಪನಿ ದಿನದ ಕೊನೆಯಲಿ 135.40 ರು ಗೆ ಕುಸಿದಿದೆ. ಒಟ್ಟಾರೆ 12.70 ರು ಕಳೆದುಕೊಂಡಿದೆ ಶೇ 8.58 ರಷ್ಟು ಇಳಿಮುಖವಾಗಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ 147.65 ರು ನಂತೆ ಆರಂಭವಾದ ವಹಿವಾಟು ದಿನದ ಅಂತ್ಯಕ್ಕೆ 135.50 ರು ನಂತೆ 12.15 ರು ಕಳೆದುಕೊಂಡಿದೆ ಷೇರುಗಳು ಶೇ 8.23ರಷ್ಟು ಕುಸಿದಿವೆ. [100 ಕೋಟಿ ಡೀಲ್ ಆರೋಪ, 150 ಕೋಟಿ ಮಾನನಷ್ಟ]

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+