ಮ್ಯೂಚುವಲ್ ಫಂಡ್ ಹೂಡಿಕೆಗೆ ಮುನ್ನ 7 ಅಂಶ ಗಮನಿಸಿ

ಮ್ಯೂಚುವಲ್ ಫಂಡ್ ಎಷ್ಟು ವರ್ಷದ ಅವಧಿಗೆ ಇದೆ ಒಂದು ವರ್ಷ, ಎರಡು ವರ್ಷ, ಮೂರು ವರ್ಷ ರಿಟರ್ನ್ಸ್, Sharpe ಅನುಪಾತ ಹಾಗೂ ಮಾಹಿತಿ ಅನುಪಾತದ ಮೇಲೆ ಅವಲಂಬಿಸಿರುತ್ತದೆ. ಹೀಗಾಗಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹೂಡಿಕೆಗೆ ಮುನ್ನ ಕಡ್ಡಾಯವಾಗಿ ಗಮನಿಸಲೇಬೇಕಾದ 7 ಅಂಶಗಳು ಹೀಗಿವೆ: [ಮ್ಯೂಚುವಲ್ ಫಂಡ್ ಮೇಲೆ ತೆರಿಗೆ ಹೊರೆ ಇಲ್ಲ!]

1. ಈಕ್ವಿಟಿಯೇ ಅಥವಾ ಸಾಲ ಆಧಾರಿತ ಸ್ಕೀಮಾ?
ಮ್ಯೂಚುವಲ್ ಫಂಡ್ ನಲ್ಲಿ ನೀವು ಹೂಡಿಕೆ ಮಾಡುವ ಹಣವನ್ನು ಸಾಲ ಅಥವಾ ಈಕ್ವಿಟಿಯಾಗಿ ಪರಿವರ್ತಿಸಲಾಗುತ್ತದೆಯೇ? ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆಯೆ? ಡೆಟ್ ಸ್ಕೀಮ್ ಆದರೆ ಯಾವುದಾದರೂ ಆಫರ್ ಗೆ ಒಪ್ಪಿಕೊಂಡು ಹೂಡಿಕೆ ಮಾಡಬೇಕಾಗುತ್ತದೆ. 'ಇಷ್ಟು ಕಾಲಾವಧಿಗೆ ಈ ರೀತಿ ಸೌಲಭ್ಯ' ಎಂದು ಸಂಸ್ಥೆಗಳು ಆಫರ್ ನೀಡುತ್ತಲೇ ಇರುತ್ತವೆ.

2. ಅದಾಯ ಅಥವಾ ಹಣಕಾಸು ಪ್ರಗತಿ
ನೀವು ನಿವೃತ್ತಿ ಹೊಂದಿದ್ದು ಪ್ರತಿ ತಿಂಗಳು ಇಂತಿಷ್ಟು ಹಣ ಸಿಗುವಂತಿರಬೇಕು ಎಂದರೆ ನೀವು ಪ್ರತಿ ತಿಂಗಳು ರಿಟರ್ನ್ಸ್ ನೀಡಬಲ್ಲ ಆದರೆ ಸುರಕ್ಷಿತವಾಗಿರುವ ಸ್ಕೀಮ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಹಣಕಾಸು ಪ್ರಗತಿ ಹಾಗೂ ಮಾರುಕಟ್ಟೆಯಲ್ಲಿ ಹೂಡಿಕೆ ಆಯ್ಕೆಯನ್ನು ತಿರಸ್ಕರಿಸುವುದು ಉತ್ತಮ.

ಮ್ಯೂಚುವಲ್ ಫಂಡ್ ಹೂಡಿಕೆ: 7 ಅಂಶ ಗಮನಿಸಿ

3. ಓಪನ್ ಎಂಡೆಡ್ ಅಥವಾ ಕ್ಲೋಸ್ ಎಂಡೆಡ್
ಲಿಕ್ವಿಡಿಟಿ ಬಯಸುತ್ತಿದ್ದರೆ, ನೀವು ಆಯ್ಕೆ ಮಾಡಿದ ಸ್ಕೀಮ್ ಮಾರಾಟ ಮಾಡುವ ಉದ್ದೇಶ ಹೊಂದಿದ್ದರೆ ಓಪನ್ ಎಂಡೆಡ್ ಸ್ಕೀಮ್ ಆಯ್ಕೆ ಮಾಡಿರಿ. ಕ್ಲೋಸ್ ಎಂಡೆಡ್ ಸ್ಕೀಮ್ ಗಳಲ್ಲಿ ಉತ್ತಮ ಲಿಕ್ವಿಡಿಟಿ ಅವಕಾಶ ಸಿಗುವುದಿಲ್ಲ.

4. ಫಂಡ್ ಟ್ರ್ಯಾಕ್ ರೆಕಾರ್ಡ್
ನೀವು ಹೂಡಿಕೆ ಮಾಡುತ್ತಿರುವ ಮ್ಯೂಚುವಲ್ ಫಂಡ್ ಯೋಜನೆಯ ಹಿನ್ನೆಲೆ, ಟ್ರ್ಯಾಕ್ ರೆಕಾರ್ಡ್ ಹೇಗಿದೆ. ಆಫರ್ ನಲ್ಲಿ ಹೇಳಿರುವ ಅಂಶಗಳೇನು ಎಂಬುದನ್ನು ತಪ್ಪದೇ ಗಮನಿಸಬೇಕಾಗುತ್ತದೆ.

5. ರಿಸ್ಕ್ ಅಂಶಗಳನ್ನು ಮೊದಲು ಗಮನಿಸಿ

ನಿಮಗೆ ನೀಡುವ ಆಫರ್ ಡಾಕ್ಯುಮೆಂಟ್ ನಲ್ಲಿ ರಿಸ್ಕ್ ಅಂಶಗಳನ್ನು ಮೊದಲು ಓದಿಕೊಳ್ಳಿ. ಹೂಡಿಕೆ, ರಿಟರ್ನ್ಸ್ ಹಾಗೂ ಯೋಜನೆ ಅವಧಿ ಬಗ್ಗೆ ಸಂಪೂರ್ಣ ವಿವರಗಳನ್ನು ಕಲೆ ಹಾಕಿ ಹಾಗೂ ಮ್ಯಾನೇಜರ್ ಜೊತೆ ಯೋಜನೆ ಸುರಕ್ಷತೆ ಬಗ್ಗೆ ಮುಕ್ತವಾಗಿ ಚರ್ಚಿಸಿ.

6. ಕನಿಷ್ಠ ಹೂಡಿಕೆ ನಿಮ್ಮದಾಗಲಿ

ಯೋಜನೆಗಳಿಗೆ ಆರಂಭಿಕ ಹಾಗೂ ನಿರ್ಗಮನ ಶುಲ್ಕಗಳಿರುವುದಿಲ್ಲ. ಅದರೆ, ಕನಿಷ್ಠ ಅರ್ಜಿ ಮೊತ್ತ 5000 ಹಾಗೂ ನಂತರ 10 ರ ಹತ್ತರ ಗುಣಕದಂತೆ ಲೆಕ್ಕಚಾರದಂತೆ ಬದಲಾಗಲಿದೆ. ಅದರೆ, ಸ್ಕೀಮ್ ನಿಂದ ಸ್ಕೀಮ್ ಗೆ ಕನಿಷ್ಠ ಹೂಡಿಕೆ ಮೊತ್ತ ಬದಲಾವಣೆಗೊಳಲ್ಪಟ್ಟಿರುತ್ತದೆ. ಹೀಗಾಗಿ ಓಪನ್ ಎಂಡೆಡ್ ಸ್ಕೀಮ್ ನಲ್ಲೂ ಹೂಡಿಕೆ ಮೊತ್ತದ ಬಗ್ಗೆ ಗಮನ ಹರಿಸುವುದು ಒಳ್ಳೆಯದು.

7. ಖರ್ಚು ವೆಚ್ಚ. ನಿರ್ವಹಣಾ ವೆಚ್ಚ

ಮ್ಯೂಚುವಲ್ ಫಂಡ್ ಯೋಜನೆ ಬದಲಾವಣೆ ಶಿಫ್ಟಿಂಗ್ ಶುಲ್ಕ, ಎಂಟ್ರಿ ಹಾಗೂ ಎಕ್ಸಿಟ್ ಹೊರೆ, ಮ್ಯಾನೇಜ್ಮೆಂಟ್ ಶುಲ್ಕ ಹಾಗೂ ಇನ್ನಿತರ ಶುಲ್ಕಗಳ ಬಗ್ಗೆ ಆರಂಭದಲ್ಲೇ ವಿಚಾರಿಸಿಕೊಳ್ಳಿ. ಒಂದು ವಿಷಯ ಗಮನದಲ್ಲಿರಲಿ ಮ್ಯೂಚುವಲ್ ಫಂಡ್ ಗಳು ದಾನದತ್ತಿ ಸಂಸ್ಥೆಗಳಲ್ಲ. ಲಾಭವಿಲ್ಲದ ವ್ಯವಹಾರ ಎಲ್ಲೂ ನಡೆಯುವುದಿಲ್ಲ. ಅದರೆ, ನಷ್ಟ ಮಾಡಿಕೊಂಡು ಎಂದೂ ಭಾಗ್ಯ ಲಭಿಸುವುದು ಎಂದು ಕನಸು ಕಾಣುವ ಬದಲು ಅವಶ್ಯ ಅಂಶಗಳನ್ನು ಗಮನಿಸಿ ಮುಂದುವರೆಯಿರಿ.
ಗುಡ್ ರಿಟರ್ನ್ಸ್.ಇನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+