ಮ್ಯೂಚುವಲ್ ಫಂಡ್ ಹೂಡಿಕೆದಾರ ಅರಿತಿರಬೇಕಾದ 9 ಸೂತ್ರ

ನೀವು ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡಬೇಕೆಂದುಕೊಂಡಿದ್ದೀರಾ? ಭಾರತದ ಶೇರು ಮಾರುಕಟ್ಟೆ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲವೇ? ಮೂಲ ಸಂಗತಿಗಳ ಅರಿವಿಲ್ಲವೇ? ಹಾಗಾದರೆ ಅವಕ್ಕೆಲ್ಲ ಉತ್ತರ ಇಲ್ಲಿದೆ.

ಶೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಗೆ ನಿಕಟ ಸಂಬಂಧವಿದೆ. ಪ್ರತಿದಿನ ಮಾರುಕಟ್ಟೆಯಲ್ಲಿ ಏರಿಳಿತ ಸಾಮಾನ್ಯ. ಭಾರತದ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ ಒಂದು ಬಹುಮುಖ್ಯ ಹಣ ತೊಡಗಿಸುವ ಕ್ಷೇತ್ರ.[ಮ್ಯೂಚುವಲ್ ಫಂಡ್ ಹಣ ಬದಲಾವಣೆಗೆ ಬಯಸಿದ್ದೀರಾ?]

ಹೂಡಿಕೆದಾರರು ಕೆಲ ಮೂಲಭೂತ ಸಂಗತಿಗಳ ಬಗ್ಗೆ ತಿಳಿವಳಿಕೆ ಹೊಂದಿರಲೇಬೇಕು. ಮ್ಯೂಚುವಲ್ ಫಂಡ್ ನಲ್ಲಿ ಹಣ ತೊಡಿಸುವವರು ಈ ಕೆಳಗಿನ ಪ್ರಮುಖ ಅಂಶಗಳ ಬಗ್ಗೆ ತಿಳಿದುಕೊಂಡಿರಬೇಕಾದ್ದು ಅಗತ್ಯ.

ನಿವ್ವಳ ಆಸ್ತಿ ಮೌಲ್ಯ ಎಂದರೇನು?

ನಿವ್ವಳ ಆಸ್ತಿ ಮೌಲ್ಯ ಎಂದರೇನು?

ನೆಟ್ ಅಸೆಟ್ ವ್ಯಾಲ್ಯೂ ಎಂದು ಕರೆಯಲಾಗುವ ಇದನ್ನು ಶೇರಿನ ಮುಖಬೆಲೆ ಆಧಾರದಲ್ಲಿ ಅಳೆಯಬಹುದು. ನೀವು 10 ರೂ. ಮುಖಬೆಲೆ ಆಧಾರದಲ್ಲಿ ಸಾರ್ವಜನಿಕರಿಗೆ ಮುಕ್ತವಿರುವ ಶೇರು ಖರೀದಿಸಿದ್ದೀರಿ ಎಂದು ಇಟ್ಟುಕೊಳ್ಳಿ. ಕೆಲ ಸಮಯದ ನಂತರ ಮಾರುಕಟ್ಟೆ ಸ್ಥಿತಿ ಆಧಾರದ ಮೇಲೆ ಇದರ ಬೆಲೆ ಹೆಚ್ಚಾಗಬಹುದು. ನೀವು ಖರೀದಿಸಿದ್ದು 10 ರೂ.ಗೆ ಮುಖಬೆಲೆಯ ಶೇರನ್ನು 11 ಅಥವಾ 12 ರೂ.ಗೆ ಮಾರಬಹುದು ಅಥವಾ ಕೆಲವೊಮ್ಮೆ ಸ್ವಲ್ಪ ಪ್ರಮಾಣದ ನಷ್ಟ ಅನುಭವಿಸುವ ಸಾಧ್ಯತೆಯೂ ಇರುತ್ತದೆ.

ಸರಿದೂಗಿಸಲು ಕಂಪನಿಗಳ ಶಾಖೆ

ಸರಿದೂಗಿಸಲು ಕಂಪನಿಗಳ ಶಾಖೆ

ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವವರ ಹಿತ ಕಾಪಾಡಲು ಮತ್ತು ಅವರಿಗೆ ಸಮರ್ಪಕ ಮಾಹಿತಿ ನೀಡಲು ವಿವಿಧ ಕಂಪನಿಗಳು ಅಸೆಟ್ ಮ್ಯಾನೆಜ್ ಮೆಂಟ್ ಕಂಪನಿಗಳನ್ನು ತೆರೆದಿವೆ. ಉದಾಹರಣೆಗೆ ರಿಲಾಯನ್ಸ್ ಗ್ರೌಥ್ ಫಂಡ್ ಎಂಬ ಹೆಸರಿನಲ್ಲಿ ರಿಲಾಯನ್ಸ್ ಕ್ಯಾಪಿಟಲ್ ಅಸೆಟ್ ಮ್ಯಾನೆಜ್ ಮೆಂಟ್ ಕಂಪನಿ ಘಟಕವೊಂದನ್ನು ಆರಂಭಿಸಿದೆ.

ಇದು ಮುಖ್ಯವಾದ ಸಂಗತಿ

ಇದು ಮುಖ್ಯವಾದ ಸಂಗತಿ

ಒಮ್ಮೆ ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆಯಾಯಿತು ಎಂದು ಇಟ್ಟುಕೊಳ್ಳಿ, ನಂತರ ಹಣದ ಹರಿವು ತನ್ನಿಂದ ತಾನೇ ಆರಂಭವಾಗುತ್ತದೆ. ಯೋಜನೆ ಸಮತೋಲನ ಕಾಪಾಡಲು ಮ್ಯಾನೆಜರ್ ಗಳು ಹಣವನ್ನು ಶೇರು ಮತ್ತು ಡೆಟ್ ಗಳಲ್ಲಿ ತೊಡಗಿಸುತ್ತಾರೆ. ಯೋಜನೆಯ ಗುರಿ ಮತ್ತು ಉದ್ದೇಶ ಸಾಕಾರಗೊಳ್ಳುವಲ್ಲಿ ಪೋರ್ಟ್ ಫೋಲಿಯೊ ಮ್ಯಾನೆಜರ್ ಗಳ ಹಣ ಹಂಚಿಕೆ ನಿರ್ಧಾರ ಪ್ರಮುಖವಾಗುತ್ತದೆ.

ಈ ವಿಷಯವನ್ನು ಮರೆಯಬೇಡಿ

ಈ ವಿಷಯವನ್ನು ಮರೆಯಬೇಡಿ

ಈ ಸಂಗತಿ ಎಲ್ಲಕ್ಕಿಂತ ಮುಖ್ಯವಾಗುತ್ತದೆ. ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವ ಮೊದಲು ಎಂಟ್ರಿ ಅಥವಾ ಎಗ್ಸಿಟ್ ಲೋಡ್ ಇದೆಯೇ? ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು. ಯಾಕೆಂದರೆ ಒಂದು ವೇಳೆ ನೀವು ನಿವ್ವಳ ಆಸ್ತಿ ಮೌಲ್ಯಕ್ಕಿಂತ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ನಷ್ಟ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಸೂಕ್ತ ಲೆಕ್ಕಾಚಾರ ಹಾಕುವುದು ಉತ್ತಮ.

ಪೋರ್ಟ್ ಫೋಲಿಯೊ ಎಂದರೇನು?

ಪೋರ್ಟ್ ಫೋಲಿಯೊ ಎಂದರೇನು?

ಎಲ್ಲ ಬಗೆಯ ಶೇರುಗಳು ಮತ್ತು ಡೆಟ್ ಗಳು ಪೋರ್ಟ್ ಫೋಲಿಯೊ ಅಡಿಯಲ್ಲಿ ಬರುತ್ತವೆ. ಉದಾಹರಣೆಗೆ ಯಾವುದಾರೊಂದು ಮ್ಯೂಚುವಲ್ ಫಂಡ್ ಯೋಜನೆ ರಿಲಾಯನ್ಸ್, ಐಸಿಐಸಿಐ, ಬಜಾಜ್, ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಶೇರುಗಳನ್ನು ಖರೀದಿ ಮಾಡಿತು ಎಂದುಕೊಳ್ಳಿ. ಇವೆಲ್ಲವನ್ನು ಒಟ್ಟು ಸೇರಿಸಿ ಪೋರ್ಟ್ ಫೋಲಿಯೊ ಎಂದು ಕರೆಯುತ್ತಾರೆ.

ಎಯುಎಂ ಬಗ್ಗೆಯೂ ಇರಲಿ ಜ್ಞಾನ

ಎಯುಎಂ ಬಗ್ಗೆಯೂ ಇರಲಿ ಜ್ಞಾನ

ಹೂಡಿಕೆಯಾದ ಎಲ್ಲ ಹಣವನ್ನು ಸೇರಿಸಿ ಅಸೆಟ್ ಅಂಡರ್ ಮ್ಯಾನೆಜ್ ಮೆಂಟ್ (ಎಯುಎಂ) ಎಂದು ಕರೆಯಲಾಗುತ್ತದೆ. ಇದು ಮಾರುಕಟ್ಟೆಯಲ್ಲಿನ ಸ್ಥಿತಿಗೆ ಅನುಗುಣವಾಗಿ ಹೆಚ್ಚು ಕಡಿಮೆಯಾಗಬಹುದು. ಹೂಡಿಕೆದಾರರು ಬಂಡವಾಳ ತೊಡಗಿಸುವ ಪ್ರಮಾಣವೂ ಇದರ ಮೇಲೆ ಪರಿಣಾಮ ಬೀರುತ್ತದೆ.

ಚಿಕ್ಕ ಹೂಡಿಕೆ ಉತ್ತಮ

ಚಿಕ್ಕ ಹೂಡಿಕೆ ಉತ್ತಮ

ಬಹಳಷ್ಟು ಒಪನ್ ಎಂಡೆಡ್ ಮ್ಯೂಚುವಲ್ ಫಂಡ್ ಗಳು ಚಿಕ್ಕ ಗಾತ್ರದ ಹಣವನ್ನು ಪ್ರತಿ ತಿಂಗಳು ತೊಡಗಿಸುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ಇದನ್ನು ಸಿಸ್ಟಮ್ಯಾಟಿಕ್ ಇನ್ ವೆಸ್ಟ್ ಮೆಂಟ್ ಪ್ಲಾನ್ (ಎಸ್ ಎಪಿ) ಎಂದು ಕರೆಯಬಹುದಾಗಿದೆ. ಬ್ಯಾಂಕ್ ಗೆ ಹಣ ಮರುಪಾವತಿ ಮಾಡುವ ಪ್ರಕ್ರಿಯೆಯನ್ನೇ ಇದು ಹೋಲುತ್ತದೆ. ಆದರೆ ಇಲ್ಲಿ ನೀವು ಹಣ ತೊಡಗಿಸುತ್ತಿರುತ್ತೀರಿ ಎಂಬುದನ್ನು ಮನಗಾಣಬೇಕು.

ಎನ್ಎಫ್ ಒ ಎಂದರೇನು?

ಎನ್ಎಫ್ ಒ ಎಂದರೇನು?

ನ್ಯೂ ಫಂಡ್ ಆಫರ್ ಅಥವಾ ಹೊಸ ಯೋಜನೆ ಅಂದರೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಮತ್ತೊಂದು ಯೋಜನೆ ಎಂದು ಅಂದುಕೊಳ್ಳಬಾರದು. ಇಲ್ಲಿ ಮ್ಯೂಚುವಲ್ ಫಂಡ್ ಮುಖಬೆಲೆಯೇ ನ್ಯೂ ಫಂಡ್ ಆಫರ್ ಆಗಿರುತ್ತದೆ.

ಡೆಟ್ ನಲ್ಲಿಯೇ ಹಣ ಹೂಡಿ

ಡೆಟ್ ನಲ್ಲಿಯೇ ಹಣ ಹೂಡಿ

ಮ್ಯೂಚುವಲ್ ಫಂಡ್ ಶೇರುಗಳಲ್ಲಿ ಹಣ ತೊಡಗಿಸಿ ನಷ್ಟ ಮಾಡಿಕೊಳ್ಳುತ್ತೇವೆ ಎಂಬ ಭಯ ಇದ್ದರವರು, ರಿಸ್ಕ್ ತೆಗೆದುಕೊಳ್ಳಲು ಬಯಸದವರು ಡೆಟ್ ನಲ್ಲಿಯೇ ಸಂಪೂರ್ಣ ಹಣ ಹೂಡಿಕೆ ಮಾಡಬಹದು. ಈಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಿಂತ ಕಡಿಮೆ ರಿಸ್ಕ್ ಇಲ್ಲಿದೆ. ಜತೆಗೆ ನಷ್ಟವಾಗುವ ಪ್ರಮಾಣವೂ ಕಡಿಮೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+