ಮ್ಯೂಚುವಲ್ ಫಂಡ್ ಆಫರ್ ಡಾಕ್ಯೂಮೆಂಟ್ ಎಂದರೇನು?

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಆಫರ್ ಡಾಕ್ಯೂಮೆಂಟ್ ಅಂದರೆ ಏನು? ಎಂಬ ಬಗ್ಗೆ ಸಕಲ ಮಾಹಿತಿ ಇರಬೇಕಾಗುತ್ತದೆ. ನಿರ್ದಿಷ್ಟ ಕಂಪನಿಯ ಬುಕ್ ಲೆಟ್ ನಿಂದ ಪಡೆದುಕೊಂಡ ಪ್ರಾಸ್ಪೇಕ್ಟ್ಸ್ ಅನ್ನೇ ಆಫರ್ ಡಾಕ್ಯೂಮೆಂಟ್ ಎಂದು ಹೇಳಬಹುದು. ಇದು ಕಾನೂನು ಬದ್ಧ ದಾಖಲೆ ಸಹ ಆಗಿರುತ್ತದೆ.

ಯಾವ ಸಂಗತಿಗಳನ್ನು ತಿಳಿಸುತ್ತದೆ?
ಈ ಆಫರ್ ಡಾಕ್ಯೂಮೆಂಟ್ ಯೋಜನೆಯ ಎಲ್ಲ ಮಾಹಿತಿ ತಿಳಿಸುತ್ತದೆ. ಮ್ಯೂಚುವಲ್ ಫಂಡ್ ಹಣ ಹೂಡಿಕೆ, ವರ್ಗಾವಣೆ ಮತ್ತಿತರ ಅಂಶಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ದೊರೆಯುತ್ತದೆ.[ಮ್ಯೂಚುವಲ್ ಫಂಡ್ ಹೂಡಿಕೆದಾರ ಅರಿತಿರಬೇಕಾದ 9 ಸೂತ್ರ]

ಮ್ಯೂಚುವಲ್ ಫಂಡ್ ಆಫರ್ ಡಾಕ್ಯೂಮೆಂಟ್ ಎಂದರೇನು?

ಹಣ ಹೂಡಿಕೆ ಮಾಡಲಿರುವ ಯೋಜನೆ, ತಿರುಗಿ ಬರುವ ಆದಾಯ, ಎಂಟ್ರಿ ಲೋಡ್ ಮತ್ತು ಎಗ್ಸಿಟ್ ಲೋಡ್, ಇದಕ್ಕೆ ಸಂಬಂಧಿಸುವ ವಿಶೇಷ ಯೋಜನೆಗಳು ಮತ್ತು ವರ್ಗಾವಣೆ ಬಯಸುವುದಾದರೆ ಹೇಗೆ? ಇಂಥಹುದೇ ಇನ್ನಷ್ಟು ಯೋಜನೆಗಳು, ಈ ರೀತಿ ಈ ಆಫರ್ ಡಾಕ್ಯೂಮೆಂಟ್ ಎಲ್ಲ ಸಂಗತಿಗಳನ್ನು ತಿಳಿಸುತ್ತದೆ.[ಮ್ಯೂಚುವಲ್ ಫಂಡ್ ಹೂಡಿಕೆಗೆ ಮುನ್ನ 7 ಅಂಶ ಗಮನಿಸಿ]

ಹೂಡಿಕೆದಾರನಿಗೆ ಇದು ಯಾಕೆ ಮುಖ್ಯವಾಗುತ್ತದೆ?
ಯಾವುದೇ ಸೂಕ್ತ ನಿರ್ಧಾರಕ್ಕೆ ಬರಲು ಅನೇಕ ಮಾಹಿತಿಗಳು ಬೇಕಾಗುತ್ತವೆ. ಅಂತೆಯೇ ಹಣ ಹೂಡಿಕೆ ಮುನ್ನ ಯೋಜನೆಯನ್ನು ಅಧ್ಯಯನ ಮಾಡಬೇಕಾಗುತ್ತದೆ. ಉದಾಹರಣೆಗೆ ನೀವು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುತ್ತೀರಿ ಎಂದಿಟ್ಟುಕೊಳ್ಳಿ, ಆದರೆ ಸಮರ್ಪಕ ತಿಳಿವಳಿಕೆ ಕೊರತೆಯಿಂದ ಕೇವಲ ಡೆಟ್ ನಲ್ಲಿಯೇ ಹಣ ಹೂಡಿಕೆ ಮಾಡುತ್ತೀರಿ. ಇದು ನಿಮಗೆ ಕಡಿಮೆ ಲಾಭ ತಂದುಕೊಡುತ್ತದೆ. ಆದರೆ ಈ ಬಗ್ಗೆ ನಿಮಗೆ ತಿಳಿ ಹೇಳಲು ಯಾರೂ ಇರುವುದಿಲ್ಲ. ಇದನ್ನೆಲ್ಲ ನಿವಾರಿಸಲು ಆಫರ್ ಡಾಕ್ಯೂಮೆಂಟ್ ನೆರವು ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+