ಭಾರತದಲ್ಲಿ ನೀವು ಪಡೆಯುವ ಉಡುಗೊರೆಗಳಿಗೂ (ಗಿಫ್ಟ್) ತೆರಿಗೆ ನೀಡಲೇಬೇಕಾಗುತ್ತದೆ. ಕೆಲವೊಂದು ವೇಳೆ ಇದಕ್ಕೆ ವಿನಾಯಿತಿ ಇರಬಹುದು. ಹಾಗಾದರೆ ಯಾವ ಯಾವ ಸಂದರ್ಭ ನಾವು ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು ಎಂಬುದನ್ನು ಗಮನಿಸೋಣ.
ಉಡುಗೊರೆ, ಆಸ್ತಿ ಮತ್ತು ದೇಣಿಗೆ ಪಡೆದಾಗ ತೆರಿಗೆ ಪದ್ಧತಿ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಯಾವ ಮೌಲ್ಯದ ಉಡುಗೊರೆಗಳು ತೆರಿಗೆಯಿಂದ ಮುಕ್ತವಾಗಿವೆ ಎಂಬುದು ಮುಖ್ಯವಾಗುತ್ತದೆ.

1. ಎ. ಯಾವುದೇ ವ್ಯಕ್ತಿಯಿಂದ 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚು ನಗದನ್ನು ಉಡುಗೊರೆಯಾಗಿ ಪಡೆದುಕೊಂಡರೆ ನೀವು ತೆರಿಗೆ ಪಾವತಿ ಮಾಡಲೇಬೇಕಾಗುತ್ತದೆ. ಇದು ಬೇರೆ ಬೇರೆ ಮೂಲಗಳಿಂದ ಬಂದಿದ್ದರೂ ತೆರಿಗೆ ಬೀಡಲೇಬೇಕು.
ಬಿ. ಯಾವುದೇ ವ್ಯಕ್ತಿಯಿಂದ 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಬಾಳುವ ಆಸ್ತಿಯನ್ನು ಪಡೆದುಕೊಂಡರೆ ನೀವು ತೆರಿಗೆ ಕಟ್ಟಬೇಕಾಗಿಲ್ಲ. [ಸ್ವಾಂಪ್ ಡ್ಯೂಟಿ] ಆಸ್ತಿಯ ಕಾಗದ ಪತ್ರ ತಯಾರು ಮಾಡುವ ಸಂದರ್ಭವೇ ನಿಗದಿತ ಹಣ ಸಂದಾಯವಾಗಿರುತ್ತದೆ.[ಎನ್ನಾರೈಗಳಿಗೆ ಆರ್ ಬಿಐನಿಂದ ಸಿಹಿ ಸುದ್ದಿ]
ಉಡುಗೊರೆ ಮತ್ತು ತೆರಿಗೆ ವಿನಾಯಿತಿ
1) ನಿಮ್ಮ ಮದುವೆಯ ಸಮಯದಲ್ಲಿ ಉಡುಗೊರೆಗಳನ್ನು ಪಡೆದರೆ ತೆರಿಗೆ ಕಟ್ಟಬೇಕಾಗಿಲ್ಲ.
2) ನಿಮಗೆ ಆಸ್ತಿ ವಂಶಪಾರಂಪರ್ಯವಾಗಿ ಅಥವಾ ವಿಲ್ ಮೂಲಕ ಬಂದರೂ ಟ್ಯಾಕ್ಸ್ ವಿನಾಯಿತಿ ಸಾಧ್ಯ.
3) ಸ್ಥಳೀಯರು ನೀಡಿದ ಉಡುಗೊರೆಗಳಿಗೂ ತೆರಿಗೆ ಪಾವತಿ ಮಾಡಬೇಕಾಗಿಲ್ಲ.
4) ಇನ್ನು ಉಳಿದಂತೆ ಸಂಬಂಧಿಕರಿಂದ ಗಿಫ್ಟ್ ಸ್ವೀಕರಿಸಿದರೆ ಕರ ಕಟ್ಟಬೇಕಾಗಿಲ್ಲ.
5) ಅಪ್ರಾಪ್ತರಿಗೆ ಪಾಲಕರು ನೀಡುವ ಕೊಡುಗೆಗಳು ಸಹ ತೆರಿಗೆ ವಿನಾಯಿತಿಗೆ ಒಳಪಡುತ್ತವೆ.
ಸಂಬಂಧಿಕರು ಅಂದರೆ ಯಾರು?
ಸಂಬಂಧಿಕರು ನೀಡುವ ಗಿಫ್ಟ್ ಗಳಿಗೆ ತೆರಿಗೆಯಿಲ್ಲ ಎಂದು ಕಾನೂನು ಹೇಳುತ್ತದೆ. ಆದರೆ ಸಂಬಂಧಿಕರು ಅಂದರೆ ಯಾರು? ಎಂಬುದಕ್ಕೂ ಉತ್ತರ ನೀಡಲಾಗಿದೆ. ಸಹೋದರರು, ಸಹೋದರಿಯರು, ತಂದೆ, ತಾಯಿ ಮತ್ತು ಹೆಂಡತಿಯನ್ನು ಸಂಬಂಧಿಕರು ಎಂದು ಪರಿಗಣಿಸಲಾಗುವುದು.
ತೀರ್ಮಾನ
ಉಡುಗೊರೆ ತೆಗೆದುಕೊಳ್ಳುವ ಮೊದಲು ಅದಕ್ಕೆ ತೆರಿಗೆ ಕಟ್ಟಬೇಕಾಗುತ್ತದೆಯೋ? ಇಲ್ಲವೋ? ಎಂಬುದನ್ನು ಮೊದಲು ಅರಿತುಕೊಳ್ಳಿ. ಇನ್ನೊಮ್ಮೆ ಪರಿಶೀಲನೆ ನಡೆಸಿ ಗಿಫ್ಟ್ ಗೆ ಕೈ ಒಡ್ಡುವುದು ಉತ್ತಮ.


Click it and Unblock the Notifications