ಮುಂಬೈ, ನ.5 : ಮುಂಬೈ ಷೇರು ಸೂಚ್ಯಂಕ (ಬಿಎಸ್‌ಇ, ಸೆನ್ಸೆಕ್ಸ್) ಇದೇ ಮೊದಲ ಬಾರಿಗೆ ದಾಖಲೆ ಎತ್ತರಕ್ಕೆ ಏರಿದ್ದು ಬುಧವಾರ ಬೆಳಗ್ಗೆ 28 ಸಾವಿರದ ಗಡಿ ದಾಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ಎನ್‌ಎಸ್‌ಇ ಕೂಡ ಬುಧವಾರದ ವಹಿವಾಟು ಆರಂಭವಾಗುತ್ತಿದ್ದಂತೆ 8,363.65ಕ್ಕೇರಿತ್ತು.
ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 27,915.88 ಮತ್ತು ಎನ್‌ಎಸ್‌ಇ 8,338.30 ಅಂಶ ದಾಖಲಿಸಿದೆ. ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ವೇಳೆ, ಕೇಂದ್ರ ಬಜೆಟ್ ಸಂದರ್ಭ ಷೇರುಪೇಟೆ ಈ ರೀತಿಯ ಏರಿಕೆ ಕಂಡಿತ್ತು.

ಏಕಾಏಕಿ ಹೆಚ್ಚಳಕ್ಕೆ ಕಾರಣವೇನು?
* ನವೆಂಬರ್ 4 ರಂದು ಮೊಹರಂ ರಜೆ ಇದ್ದುದರಿಂದ ಮಾರುಕಟ್ಟೆ ಬಂದ್ ಆಗಿದ್ದರಿಂದ ಒಮ್ಮಲೇ ಒತ್ತಡ ಉಂಟಾಯಿತು.
* ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು ಹೂಡಿಕೆದಾರರು ಷೇರು ಮಾರುಕಟ್ಟೆ ಕಡೆ ಆಕಷರ್ಷಿತರಾಗುತ್ತಿರುವುದು.
* ಕಚ್ಚಾ ತೈಲ ಬೆಲೆ ನಿರಂತರ ಇಳಿಕೆ ಹಾದಿ ಹಿಡಿದಿರುವುದು.
* ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಕೆ.
* ಭಾರತೀಯ ರೂಪಾಯಿ ಡಾಲರ್ ಎದುರು ತನ್ನ ಮೌಲ್ಯ ಹೆಚ್ಚಿಸಿಕೊಂಡಿದ್ದು.
* ಕೇಂದ್ರ ಸರ್ಕಾರದ ಕೈಗಾರಿಕಾ ಸ್ನೇಹಿ ನೀತಿ
ಚೇತರಿಕೆ ಕಂಡ ಷೇರುಗಳಾವವು?
ರಿಯಾಲ್ಟಿ ಮತ್ತು ಗ್ರಾಹಕ ಉತ್ಪನ್ನ ಹಾಗೂ ವಿದ್ಯುತ್ ವಲಯದ ಷೇರುಗಳು ಏರಿಕೆಯ ಹಾದಿಯಲ್ಲಿ ಸಾಗಿದವು. ಬಜಾಜ್ ಆಟೊ, ಬಿಎಚ್ ಇಎಲ್, ಸಿಲ್ಪಾ, ಐಟಿಸಿ, ಎಲ್ ಅಂಡ್ ಟಿ, ಎಸ್ ಬಿಐ, ಸನ್ ಫಾರ್ಮಾ, ಟಿಸಿಎಸ್, ಟಾಟಾ ಮೋಟಾರ್ಸ್ ಮತ್ತು ಟಾಟಾ ಪವರ್ಷೇರುಗಳು ಲಾಭ ಗಳಿಸಿದವು.


Click it and Unblock the Notifications