ನೀವು ಭಾರತೀಯರಾಗಿದ್ದು, ನಿಮ್ಮ ಬಳಿ ಪಾಸ್ ಪೋರ್ಟ್ ಇದ್ದರೆ ನೀವು ವಿದೇಶದಿಂದ ಚಿನ್ನ, ಬೆಳ್ಳಿ ಪದಾರ್ಥಗಳನ್ನು ಧೈರ್ಯವಾಗಿ ಭಾರತಕ್ಕೆ ತರಬಹುದು. ಅದರೆ, ಚಿನ್ನ, ಬೆಳ್ಳಿ ಪ್ರಮಾಣದ ಮಿತಿಯನ್ನು ಸರ್ಕಾರ ನಿಗದಿ ಪಡಿಸಿದ್ದು, ಅದರ ವಿವರ ಈ ಕೆಳಗಿನಂತಿದೆ:
1. ಆಭರಣಗಳು ಸೇರಿದಂತೆ ಚಿನ್ನದ ಆಮದು ಮಾಡುವವರು 10 ಕೆಜಿ ತನಕ ಚಿನ್ನವನ್ನು ತರಬಹುದು. ಬೆಳ್ಳಿಯಾದರೆ 100 ಕೆಜಿ ತನಕ ರಸೀತಿ ಸಮೇತ ಕೊಂಡೊಯ್ಯಬಹುದು.
ನೆನಪಿರಲಿ, ಈ ಪ್ರಮಾಣ ಮಿತಿ ತೆರಿಗೆ ರಹಿತ ಆಮದಿಗೆ ಅನ್ವಯಿಸುವುದಿಲ್ಲ, ನೀವು ಕೊಂಡು ತರುವ ಚಿನ್ನ ಅಥವಾ ಬೆಳ್ಳಿಗೆ ತಕ್ಕ ತೆರಿಗೆ ಪಾವತಿಸಿರಬೇಕು. ಸದ್ಯಕ್ಕೆ ಚಿನ್ನದ ಮೌಲ್ಯಕ್ಕೆ ಅನುಗುಣವಾಗಿ ಆಮದು ತೆರಿಗೆ ಹಾಗೂ ಸೆಸ್ ಮೊತ್ತವನ್ನು ಪಾವತಿಸಬೇಕಾಗುತ್ತದೆ. [ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನದ ಸಾಲ ಇನ್ನಿಲ್ಲ]

2. ಮತ್ತೊಂದು ಪ್ರಮುಖ ಅಂಶವೆಂದರೆ, ನೀವು ವಿದೇಶದಲ್ಲಿ ನೆಲೆಸಿರುವ ಕಾಲಾವಧಿಯ ಮೇಲೆ ಆಮದು ಪ್ರಮಾಣ ಅರ್ಹತೆ ನಿಗದಿಯಾಗಲಿದೆ. ನೀವು ವಿದೇಶದಲ್ಲಿ ಆರು ತಿಂಗಳಿಗಿಂತ ಕಡಿಮೆ ಅವಧಿ ಕಾಲ ನೆಲೆಸಿದ್ದು, ಭಾರತಕ್ಕೆ ಬರುವಾಗ ಚಿನ್ನ/ಬೆಳ್ಳಿ ತರಲು ಇಚ್ಛಿಸಿದರೆ ಮೇಲ್ಕಂಡ ನಿಗದಿತ ಆಮದು ಸಾಧ್ಯವಿಲ್ಲ.
3. ನೀವು ಭಾರತಕ್ಕೆ ತರಲಿರುವ ಚಿನ್ನವು ಲೋಹ ರೂಪದಲ್ಲಿರಬೇಕು. ಚಿನ್ನಾಭರಣದಲ್ಲಿ ಬಹುಮೌಲ್ಯ ಹರಳುಗಳು, ಇನ್ನಿತರ ಲೋಹಗಳಿದ್ದರೆ ಅಂಥ ಆಭರಣಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ.[ETF ಚಿನ್ನ ಹೂಡಿಕೆಗೆ ಇಲ್ಲಿದೆ ಉಪಾಯ]
4. ನೀವು ನಿಮ್ಮ ಜೊತೆಗೆ ಚಿನ್ನ, ಬೆಳ್ಳಿ ಅಥವಾ ಆಭರಣ ರೂಪದ ಲೋಹವನ್ನು ಕೊಂಡು ತರಬಹುದು ಅಥವಾ ಬೇರೆ ವಿಧಾನದಿಂದ ಆಮದು ಮಾಡಿಕೊಳ್ಳಬಹುದು.
5. ನೀವು ಆಮದು ಮಾಡಿಕೊಳ್ಳುತ್ತಿದ್ದರೆ, ನೀವು ಭಾರತಕ್ಕೆ ಬಂದಿಳಿದ 15 ದಿನದೊಳಗಾಗಿ ಆಮದು ವಸ್ತು ನಿಮ್ಮ ಕೈಸೇರುವಂತಿರಬೇಕು.
ತೆರಿಗೆ ಎಷ್ಟಿರುತ್ತದೆ?: ಚಿನ್ನದ ನಾಣ್ಯ, ಬಾರ್ ..ಇತ್ಯಾದಿ ಗಳ ಮೇಲೆ 10 ಗ್ರಾಂಗೆ 300 ರು ಹಾಗೂ ಶೇ 3 ಸೆಸ್ ವಿಧಿಸಲಾಗುತ್ತದೆ. ಚಿನ್ನದ ಮೌಲ್ಯಕ್ಕೆ ಅನುಗುಣವಾಗಿ ಶೇ 10ರಷ್ಟು ತೆರಿಗೆ ಹಾಕುವ ಮೂಲಕ ಹಾಲಿ ವಿತ್ತೀಯ ಕೊರತೆಯನ್ನು ಸಮದೂಗಿಸಲು ಹಾಗೂ ಆಮದು ಮೇಲೆ ನಿರ್ಬಂಧ ಹೇರಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ತೆರಿಗೆಯನ್ನು ಕೂಡಾ ವಿದೇಶಿ ಕರೆನ್ಸಿಯಲ್ಲೇ ಪಾವತಿಸಬೇಕಾಗುತ್ತದೆ. ಇದರಿಂದ ಭಾರತದ ವಿದೇಶಿ ವಿನಿಮಯ ರಿಸರ್ವ್ಸ್ ಗೆ ಅನುಕೂಲ. [ಚಿನ್ನದ ಸಾಲ ಪಡೆಯುವುದು ಹೇಗೆ?]
ಕೊನೆ ಮಾತು: ಚಿನ್ನದ ಆಮದು ಮೇಲಿನ ನಿರ್ಬಂಧ ಹೇರಿಕೆ ಸರ್ಕಾರದಿಂದ ಸರ್ಕಾರಕ್ಕೆ ಬದಲಾಗುತ್ತಿರುತ್ತದೆ. ಹೀಗಾಗಿ ಆಭರಣಗಳ ಆಮದು ಮೇಲಿನ ನಿಯಮಗಳನ್ನು ಚೆನ್ನಾಗಿ ಪರಿಶೀಲಿಸಿ ನಂತರ ಚಿನ್ನವನ್ನು ಕೊಂಡು ತನ್ನಿ (ಗುಡ್ ರಿಟರ್ನ್.ಇನ್)


Click it and Unblock the Notifications