ಭಾರತದಲ್ಲಿ ಸೇವಾ ಶುಲ್ಕ ಲೆಕ್ಕ ಹಾಕುವುದು ಹೇಗೆ?

ನೀವು ಸರ್ವಿಸ್ ಟ್ಯಾಕ್ಸ್ ಅಥವಾ ಸೇವಾ ಶುಲ್ಕ ಲೆಕ್ಕ ಹಾಕುವ ಮೊದಲು ಸೇವಾ ಶುಲ್ಕ ಎಂದರೆ ಏನು ಎಂಬುದನ್ನು ಅರಿತುಕೊಳ್ಳಬೇಕು. ಸರ್ಕಾರಗಳು ಆದಾಯ ಸರಿದೂಗಿಸಿಕೊಳ್ಳಲು ಸೇವಾ ಶುಲ್ಕ ಹೆಚ್ಚಳ ಮಾಡುವುದನ್ನು, ಪ್ರತಿಭಟನೆಗಳು ಎದುರಾದಾಗ ಇಳಿಕೆ ಮಾಡುವುದನ್ನು ಕಂಡಿದ್ದೇವೆ.

ಅಲ್ಲದೇ ಇದು ಸರ್ಕಾರಗಳಿಗೆ ಪ್ರಮುಖ ಆದಾಯ ಮಾಧ್ಯಮವಾಗಿಯೂ ಹೊರಹೊಮ್ಮಿದೆ. ಸರಳವಾಗಿ ಹೇಳಬೇಕೆಂದರೆ ನಾವು ಪಡೆಯುವ ಸೇವೆಗೆ ನೀಡುವ ಶುಲ್ಕವೇ ಸೇವಾ ಶುಲ್ಕ. ಹೋಟೆಲ್ ನಲ್ಲಿ ನೀವು ತಿಂದ ತಿಂಡಿಗೆ ಇಲ್ಲವೇ ನಿಮ್ಮ ದೂರವಾಣಿ ಸಂಪರ್ಕಕ್ಕೆ ಪಡೆದ ಸೇವೆಗೂ, ಇಲ್ಲವೇ ಸಿನಿಮಾಕ್ಕೆ ತೆರಳಿ ಅನುಭವಿಸಿದ ಮನರಂಜನೆಗೂ ತೆರಿಗೆ ಕಟ್ಟಬೇಕಾಗುತ್ತದೆ. ಇದೆಲ್ಲವೂ ಸೇವಾ ಶುಲ್ಕದ ವ್ಯಾಪ್ತಿಗೆ ಒಳಪಡುತ್ತದೆ.[ಫಿಕ್ಸೆಡ್ ಡೆಪಾಸಿಟ್ ಹಣ ಯಾರಿಗೆ ಸೇರಬೇಕು?]

ಭಾರತದಲ್ಲಿ ಸೇವಾ ಶುಲ್ಕ ಲೆಕ್ಕ ಹಾಕುವುದು ಹೇಗೆ?

ಮನಮೋಹನ್ ಸಿಂಗ್ ಹಣಕಾಸು ಮಂತ್ರಿಯಾಗಿದ್ದ ಸಂದರ್ಭ ಸೇವಾ ಶುಲ್ಕ ಜಾರಿಗೆ ಬಂದಿತು. 2012-13 ರ ಸಾಲಿನಲ್ಲಿ 1.32 ಕೋಟಿ ರೂ. ಹಣ ಸೇವಾ ಶುಲ್ಕದಿಂದ ಸಂಗ್ರಹವಾಗಿದೆ. ಸರ್ಕಾರ ತನ್ನ ಹಣಕಾಸು ನೀತಿ ನಿಯಮಗಳನ್ನು ರೂಪಿಸಿಕೊಳ್ಳಲು ಸೇವಾ ಶುಲ್ಕವೂ ಆಧಾರವಾಗಿದೆ.

ಸೇವಾ ಶುಲ್ಕ ಲೆಕ್ಕ ಹಾಕುವುದು ಹೇಗೆ?
ಒಂದು ಕಾಲದಲ್ಲಿ ಸೇವಾ ಶುಲ್ಕ ಶೇ. 12 ಕ್ಕೆ ನಿಗದಿಯಾಗಿತ್ತು. ಆದರೆ ಇದಕ್ಕೆ ಶಿಕ್ಷಣ ಸೆಸ್ ಸೇರಿಕೊಂಡಿತು. ಒಟ್ಟಿನಲ್ಲಿ ಸೇವಾ ಶುಲ್ಕದ ಒಟ್ಟು ಮೊತ್ತ 12.36 ಕ್ಕೆ ಬಂದು ನಿಂತಿದೆ.[ವಿದೇಶದಿಂದ ಭಾರತಕ್ಕೆ ಎಷ್ಟು 'ಚಿನ್ನ' ತರಬಹುದು?]

ಉದಾಹರಣೆಯೊಂದಿಗೆ ನೋಡಿದರೆ ನಿಮಗೆ ಮತ್ತೂ ಸುಲಭವಾಗಿ ಅರ್ಥವಾಗಬಹುದು. ನೀವು ಚಾರ್ಟಡ್ ಅಕೌಂಟ್ ರಿಂದ ಪಡೆದ ಸೇವೆಗೆ 1 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಇಟ್ಟುಕೊಳ್ಳಿ. ಇಲ್ಲಿ ಸೇವಾ ಶುಲ್ಕ ಲೆಕ್ಕ ಹಾಕಿದಾಗ 12,360 ರೂ. ಆಗುತ್ತದೆ. ಕೆಲವೊಮ್ಮೆ ಸೇವಾ ಶುಲ್ಕ ದೊಡ್ಡ ಹಿಂಸೆಯಾಗಿ ಗೋಚರವಾಗೂವುದು ಇದೆ.

ಸೇವಾ ಶುಲ್ಕವಿಲ್ಲದ ಸೇವೆಗಳು
ಎಲ್ಲಾ ಸೇವೆಗಳಿಗೂ ಸೇವಾ ಶುಲ್ಕವಿಲ್ಲ. ಸರ್ಕಾರಿ ಸ್ವಾಮ್ಯದ ಅಂಚೆ ವ್ಯವಸ್ಥೆ ಸೇರಿದಂತೆ ಅನೇಕ ಸೇವೆಗಳು ಸರ್ವಿಸ್ ಟ್ಯಾಕ್ಸ್‌ ಮುಕ್ತವಾಗಿವೆ. ಹಾಗಾಗಿ ಸೇವೆ ಪಡೆಯುವ ಮುನ್ನ ಸೇವಾ ಶುಲ್ಕ ಎಷ್ಟಿದೆ? ಎಂಬುದನ್ನು ಒಮ್ಮೆ ಪರಿಶೀಲಿಸಿಕೊಂಡು ತೆರಳಿದರೆ ತಪ್ಪೇನಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+