ವಾಣಿಜ್ಯ ವಿಚಾರದಲ್ಲಿ ಯಾವ ಸಂಗತಿಗಳು ಕಡ್ಡಾಯ ಎಂದು ಎಂದು ಗುರುತಿಸಲ್ಪಡಲ್ಲ. ಆದರೆ ಸಂದರ್ಭ ಎದುರಾದಾಗಾಗ 'ಅಯ್ಯೋ ನಾನು ಒಂದು ಖಾತೆ ಮಾಡಿಕೊಳ್ಳಬೇಕಿತ್ತು' ಎಂದು ಕೈ ಕೈ ಹಿಸುಕಿಕೊಳ್ಳುವುದರಲ್ಲೂ ಅರ್ಥವಿಲ್ಲ.
ಷೇರುಗಳ ಖರೀದಿ ಮತ್ತು ಮಾರಾಟ ಮಾಡಲು ಡಿಮಾಟ್ ಅಕೌಂಟ್ ಭಾರತದಲ್ಲಿ ಅತ್ಯಗತ್ಯ. ಒಂದು ವೇಳೆ ನೀವು ಡಿಮಾಟ್ ಖಾತೆ ಹೊಂದಿಲ್ಲವೆಂದರೆ ಪ್ರತಿಷ್ಠಿತ ಕಂಪನಿಗಳ ಷೇರು ಖರೀದಿಸಲು ಸಾಧ್ಯವಿಲ್ಲ[ಹೊಸ ಹೂಡಿಕೆದಾರ ಅರಿತಿರಬೇಕಾದ ಸಪ್ತ ಸೂತ್ರ]

ನೀವು ಐಪಿಒ ಮೂಲಕ ಷೇರು ಖರೀದಿಗೆ ಮುಂದಾಗುವುದಾದರೂ ಡಿಮಾಟ್ ಖಾತೆ ಅಗತ್ಯ. ಅಲ್ಲದೇ ಇದರ ಮೂಲಕವೇ ವ್ಯವಹಾರ ನಡೆಸಬೇಕಾಗುತ್ತದೆ. ಸಾರ್ವಜನಿಕ ವಲಯದ ಯಾವುದೇ ವಾಣಿಜ್ಯ ಕೆಲಸಗಳು ಡಿಮಾಟ್ ಖಾತೆಯ ಆಧಾರದಲ್ಲಿಯೆ ನಡೆಯಬೇಕು ಎಂದು ಸೆಬಿ ಸ್ಪಷ್ಟವಾಗಿ ಸೂಚಿಸಿದೆ.
ಸಾಮಾನ್ಯವಾಗಿ ಸಾರ್ವಜನಿಕ ವಲಯದ ವ್ಯವಹಾರ 10 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ್ದೇ ಆಗಿರುತ್ತದೆ. ಒಂದು ವೇಳೆ ವ್ಯಕ್ತಿಯೊಬ್ಬ ಈ ಮೌಲ್ಯದ ಷೇರು ಖರೀದಿಗೆ ಇಲ್ಲವೇ ಭಾಗವಹಿಸುವಿಕೆಗೆ ಮುಂದಾದರೆ ಡಿಮಾಟ್ ಖಾತೆ ಅನಿವಾರ್ಯ.[ಭಾರತದಲ್ಲಿ ಸೇವಾ ಶುಲ್ಕ ಲೆಕ್ಕ ಹಾಕುವುದು ಹೇಗೆ?]
ಡಿಮಾಟ್ ಖಾತೆ ತೆರೆಯುವುದು ಹೇಗೆ?
ಡಿಮಾಟ್ ಖಾತೆ ತೆರೆಯಲು ನೀವು ಬ್ರೋಕರ್ ಒಬ್ಬರ ಬಳಿ ಹೋಗಬೇಕಾಗುತ್ತದೆ. ಅವರು ನಿಮ್ಮ ಹೆಸರಿನಲ್ಲಿ ಖಾತೆ ತೆರೆದ ನಂತರವಷ್ಟೇ ಷೇರು ಖರೀದಿ ಮತ್ತು ಮಾರಾಟ ಸಾಧ್ಯ. ಖಾತೆ ತೆರೆಯಲು ನೀವು ಕೆಲವು ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ವಿಳಾಸ ದೃಢೀಕರಣ, ಗುರುತಿನ ಚೀಟಿ ಮತ್ತಿತರ ಮಾಹಿಯನ್ನು ನೀಡಬೇಕಾಗುತ್ತದೆ.
ಅಲ್ಲದೇ ಖಾತೆ ತೆರೆಯಲು ನಿರ್ದಿಷ್ಟ ಪ್ರಮಾಣದ ಶುಲ್ಕ ನೀಡಬೇಕಾಗುತ್ತದೆ. ಒಮ್ಮೆ ಶುಲ್ಕ ಮತ್ತಿತರ ವಿಷಯಗಳ ಕುರಿತು ಸಮಗ್ರ ಮಾಹಿತಿ ಪಡೆದು ಏಜೆನ್ಸಿ ಬಳಿ ತೆರಳುವುದು ಉತ್ತಮ. ಕೆಲ ಬ್ಯಾಂಕ್ ಗಳಲ್ಲಿ ಉಚಿತವಾಗಿ ಖಾತೆ ತೆರೆಯುವ ಸೌಲಭ್ಯವೂ ಇದೆ.


Click it and Unblock the Notifications